- Home
- Entertainment
- Sandalwood
- ಪತ್ನಿಗೆ ಕೊತ್ತುಂಬರಿ ಸೊಪ್ಪು ಗಿಫ್ಟ್ ಕೊಟ್ಟ ಯಶ್; ರಾಗಿ ಮುದ್ದೆಗೂ ಸೈ ಮೆಂತ್ಯ ಮುದ್ದೆಗೂ ಸೈ ಎಂದ ರಾಧಿಕಾ ಪಂಡಿತ್
ಪತ್ನಿಗೆ ಕೊತ್ತುಂಬರಿ ಸೊಪ್ಪು ಗಿಫ್ಟ್ ಕೊಟ್ಟ ಯಶ್; ರಾಗಿ ಮುದ್ದೆಗೂ ಸೈ ಮೆಂತ್ಯ ಮುದ್ದೆಗೂ ಸೈ ಎಂದ ರಾಧಿಕಾ ಪಂಡಿತ್
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಟ್ಟ ರಾಧಿಕಾ ಪಂಡಿತ್. ಹೀಗೂ ಫಸ್ಟ್ ಗಿಫ್ಟ್ ಕೊಡ್ಬೋದಾ?

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮಾರ್ಚ್ 7ರಂದು 39ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಮೊದಲ ಸಲ ಮನೆಯಿಂದ ದೂ ಪ್ರಯಾಣ ಮಾಡಿ ಆಚರಿಸಿಕೊಳ್ಳುತ್ತಿದ್ದಾರೆ.
ಅಭಿಮಾನಿಗಳು ಮನೆ ಬಳಿ ಬರುವುದು ಬೇಡ ಮನೆಯಿಂದ ದೂರ ಆಚರಿಸಿಕೊಳ್ಳುತ್ತಿರುವುದಾಗಿ ತಿಳಿಸಿರುವ ರಾಧಿಕಾ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಕೇಳಿರುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
'ಅಭಿಮಾನಿಗಳು ನಮ್ಮ ದಿನ ಅವರ ಸ್ಪೆಷಲ್ ದಿನ ಎಂದು ಆಚರಿಸುವುದು ನೋಡಲು ಖುಷಿಯಾಗುತ್ತಿದೆ. ಈ ಹುಟ್ಟು ಹಬ್ಬದ ದಿನ ನೀವು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವೆ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಯಶ್ ಅವರಿಂದ ನೀವು ಪಡೆದಿರುವ ಮೊದಲ ಗಿಫ್ಟ್ ಯಾವುದು ಎಂದು ಪ್ರಶ್ನೆ ಮಾಡಿದ್ದಾರೆ. 'ತುಂಬಾ ಫ್ರೆಶ್ ಆಗಿರುವ...' ಎಂದು ಬರೆದುಕೊಂಡು ಕೊತ್ತುಂಬರಿ ಸೊಪ್ಪು ಫೋಟೋ ಅಪ್ಲೋಡ್ ಮಾಡಿದ್ದಾರೆ.
ಮುದ್ದೆ ಮಾಡೋಕೆ ಬರುತ್ತಾ ನಿಮಗೆ ಎಂದು ಫ್ಯಾನ್ ಕೇಳಿದ್ದಾರೆ. ಮುದ್ದೆ ಜೊತೆ ರಾಧಿಕಾ ಮತ್ತು ಯಶ್ ಸೆಲ್ಫಿ ಕ್ಲಿಕ್ ಮಾಡಿಕೊಂಡು ರಾಗಿ ಮುದ್ದೆಗೂ ಸೈ ಮೆಂತ್ಯ ಮುದ್ದೆಗೂ ಸೈ ಎಂದಿದ್ದಾರೆ.
ದಿನ ಯಾವ ಸಮಯ ನಿಮಗೆ ತುಂಬಾ ಇಷ್ಟವಾಗುತ್ತದೆ ಎಂದು ಕೇಳಿದ್ದಾರೆ. 'ನನಗೆ ಸಂಜೆ ಅಂದ್ರೆ ತುಂಬಾನೇ ಇಷ್ಟವಾಗುತ್ತದೆ. ಮಕ್ಕಳು ಸ್ಕೂಲ್‌ನಿಂದ ಬರುತ್ತಾರೆ, ಗಂಡ ಕೆಲಸ ಮುಗಿಸಿಕೊಂಡು ಬರುತ್ತಾರೆ. ಊಟ ಮಾಡುವಾಗ ನಮ್ಮ ದಿನ ಹೇಗಿತ್ತು ಎಂದು ಚರ್ಚೆ ಮಾಡುತ್ತೀವಿ' ಎಂದು ರಾಧಿಕಾ ಹೇಳಿದ್ದಾರೆ.
ಕೆಜಿಎಫ್ ಆರಂಭದಲ್ಲಿ ನೀವು ಹೇಳುತ್ತಿದ್ದ ಹಾಗೆ ಈಗ ಯಶ್ ಗಡ್ಡ ಹಿಂಸೆ ಆಗುತ್ತಾ ಎಂದು ಕೇಳಿದ್ದಾರೆ. 'ಇಲ್ಲ ಈಗ ಏನು ಅನಿಸುವುದಿಲ್ಲ ಅಭ್ಯಾಸ ಆಗಿದೆ' ಎಂದಿದ್ದಾರೆ.
ನಿಮ್ಮ ಸಹೋದರನಿಗೆ ಕ್ಲೋಸ್ ಇದ್ದೀರಾ? ನಿಮ್ಮ ನಡುವೆ ಈಗಲೂ ಜಗಳ ಅಸೂಯೆ ಇದ್ಯಾ?- ನನ್ನ ತಮ್ಮನ ಜೊತೆ ತುಂಬಾನೇ ಕ್ಲೋಸ್ ಅಗಿರುವೆ. ನನ್ನ ಜೀವನ ಅತಿ ಮುಖ್ಯವಾದ ವ್ಯಕ್ತಿ ಆತ ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಕೈಯಲ್ಲಿ ಸದಾ ಸಿಲ್ವರ್ ರಿಂಗ್ ಇರುತ್ತದೆ, ಏನು ಅದರ ಸ್ಪೆಷಲ್? ನಾನು ಧರಿಸುವುದು ವೈಟ್ ಗೋಲ್ಡ್ ನನ್ನ ಮೊದಲ ಸಂಬಳದಲ್ಲಿ ಖರೀದಿ ಮಾಡಿದ ಸೆಲ್ಫ್ ಗಿಫ್ಟ್ ಎಂದರು.
ವೃತ್ತಿ ಜೀವನದ ಯಶಸ್ಸು ಮತ್ತು ಅರ್ಥಪೂರ್ಣವಾದ ಮದುವೆ ಜೀವನ ಸೀಕ್ರೆಟ್ ಏನು ಎಂದು ಕೇಳಿದಕ್ಕೆ 'ಸ್ನೇಹಾ' ಎಂದು ಸಿಂಪಲ್ ಆಗಿ ಉತ್ತರ ಕೊಟ್ಟಿದ್ದಾರೆ.