- Home
- Entertainment
- Sandalwood
- ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಿ 4 ಪಟ್ಟು ಕಲೆಕ್ಷನ್ ಮಾಡಿದ ಕನ್ನಡದ ಸಿನಿಮಾ; ಹೀರೋ ಡೈಲಾಗ್‌ಗೆ ಎಲ್ಲರೂ ಕ್ಲೀನ್‌ಬೋಲ್ಡ್!
ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಿ 4 ಪಟ್ಟು ಕಲೆಕ್ಷನ್ ಮಾಡಿದ ಕನ್ನಡದ ಸಿನಿಮಾ; ಹೀರೋ ಡೈಲಾಗ್‌ಗೆ ಎಲ್ಲರೂ ಕ್ಲೀನ್‌ಬೋಲ್ಡ್!
2013 ರಲ್ಲಿ ಬಿಡುಗಡೆಯಾದ ಚಿತ್ರವು ಯುವ ಸಮುದಾಯವನ್ನು ಆಕರ್ಷಿಸಿತು. ಕಾಲೇಜಿನಲ್ಲಿ ಪರಿಚಯವಾಗಿ ಪ್ರೀತಿಸುವ ನಾಯಕ-ನಾಯಕಿ ಬೇರೆಯಾಗಿ ಮತ್ತೆ ಭೇಟಿಯಾದಾಗ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.

2013ರಲ್ಲಿ ಬಿಡುಗಡೆಯಾದ ಕಾಮಿಡಿ, ರೊಮ್ಯಾಂಟಿಕ್ ಸಿನಿಮಾ ವಿಶೇಷವಾಗಿ ಯುವ ಸಮುದಾಯವನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಚಿತ್ರದ ನಾಯಕ ನಟನ ತಮಾಷೆಯಿಂದ ಕೂಡಿದ ಡೈಲಾಗ್‌ಗಳು ನೋಡುಗರಿಗೆ ಇಷ್ಟವಾಗಿತ್ತು. ಚಿತ್ರದಲ್ಲಿನ ಹೀರೋ ಹೇರ್‌ಸ್ಟೈಲ್ ಸಹ ಟ್ರೆಂಡ್ ಸೃಷ್ಟಿಸಿತ್ತು.
ಪವನ್ ಒಡೆಯರ್ ನಿರ್ದೇಶನದ ಈ ಸಿನಿಮಾ 19ನೇ ಜುಲೈ 2013ರಲ್ಲಿ ರಾಜ್ಯಾದದ್ಯಂತ ಬಿಡುಗಡೆಯಾಗಿತ್ತು. ಸುಮಾರು 4 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ 15 ರಿಂದ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಚಿತ್ರದ ಹಾಡುಗಳು ಇಂದಿಗೂ ಎಷ್ಟೋ ಹೃದಯಗಳಿಗೆ ಹತ್ತಿರವಾಗುತ್ತವೆ.
ರಾಕಿಂಗ್ ಸ್ಟಾರ್ ಯಶ್ ಮತ್ತು ಕೃತಿ ಕರಬಂಧ ನಟನೆಯ ಚಿತ್ರ ಗೂಗ್ಲಿ 2013ರಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗುವ ನಾಯಕ-ನಾಯಕಿಗೆ ನಡುವೆ ಪ್ರೀತಿಯುಂಟಾಗುತ್ತದೆ. ಈ ವಿಷಯವನ್ನು ಹೇಳಿಕೊಳ್ಳುವ ಮುನ್ನವೇ ಇಬ್ಬರು ಬೇರೆಯಾಗುತ್ತಾರೆ.
ಇಲ್ಲಿಂದ ಇಬ್ಬರ ಬದುಕು ಹೊಸ ಆಯಾಮವನ್ನು ಪಡೆದುಕೊಂಡು ತಮ್ಮದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಕೆಲವು ವರ್ಷಗಳ ಬಳಿಕ ಮತ್ತೆ ಮುಖಾಮುಖಿಯಾಗುತ್ತಾರೆ. ಈ ವೇಳೆ ಇಬ್ಬರು ತಮ್ಮ ಪ್ರೀತಿಯನ್ನು ಹೇಳಿಕೊಳ್ತಾರಾ? ಮತ್ತೆ ದೂರ ಆಗ್ತಾರಾ ಅನ್ನೋದು ಚಿತ್ರದ ಕಥೆ.
ಅನಂತ್ ನಾಗ್, ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಸಾಧು ಕೋಕಿಲಾ ಸೇರಿದಂತೆ ಹಲವು ಕಲಾವಿದರು ಗೂಗ್ಲಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿನ ಹೀರೋ ಹೇಳುವ ಡೈಲಾಗ್, ಸ್ಟೈಲ್, ಸ್ವ್ಯಾಗ್ ವಿಶೇಷವಾಗಿತ್ತು. ರಾಜೇಶ್ ಕೃಷ್ಣನ್ ಹಾಡಿದ 'ಬಿಸಿಲು ಕುದುರೆಯೊಂದು' ಹಾಡು ಭಗ್ನಪ್ರೇಮಿಗಳ ಮೆಚ್ಚಿನ ಹಾಡು ಆಗಿದೆ.