ರಕ್ಷಾಬಂಧನ ಆಚರಿಸಿದ ಐರಾ- ಯಥರ್ವ್: ಫೋಟೋ ವೈರಲ್!
ಅದ್ಧೂರಿಯಾಗಿ ರಕ್ಷಾಬಂಧನ ಆಚರಿಸಿದ ಐರಾ-ಯಥರ್ವ್, ಯಶ್-ನಂದಿನಿ ಮತ್ತು ರಾಧಿಕಾ-ಗೌರವ್....

ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳು ಐರಾ ಮತ್ತು ಯಥರ್ವ್ ರಕ್ಷಾಬಂಧನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಐರಾ ಯಥರ್ವ್‌ಗೆ ರಾಖಿ ಕಟ್ಟುತ್ತಿರುವ ಪ್ರತಿಯೊಂದು ಕ್ಷಣವನ್ನು ಕ್ಲಿಕ್ ಮಾಡಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ರಾಧಿಕಾ ಹಂಚಿಕೊಂಡಿದ್ದಾರೆ.
'ಅಣ್ಣ ತಂಗಿ ಸಂಬಂಧ ಬಿಡಿಸಲಾಗದ ಸಂಬಂಧ. ಇವರು ಒಟ್ಟಿಗೆ ನಗುತ್ತಾರೆ, ಒಟ್ಟಿಗೆ ಅಳುತ್ತಾರೆ, ಜಗಳ ಮಾಡಿಕೊಂಡು ಒಟ್ಟಿಗೆ ಆಟವಾಗುತ್ತಾರೆ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
'ಏನೇ ಇರಲಿ ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ ಅದೇ ನನಗೆ ಖುಷಿ. ಎಲ್ಲಾ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನ ಶುಭಾಶಯಗಳು' ಎಂದಿದ್ದಾರೆ ರಾಧಿಕಾ.
ಸೀಮೆಂಟ್ ಬಣ್ಣದ ಧೋತಿಯಲ್ಲಿ ಯಥರ್ವ್, ಮರೂನ್ ಬಣ್ಣದ ಮಾಡ್ರನ್ ಸೆಲ್ವಾರ್‌ನಲ್ಲಿ ಐರಾ ಮಿಂಚಿದ್ದಾಳೆ. ಇಬ್ಬರೂ ತುಂಟಾಟ ಮಾಡಿಕೊಂಡು ರಕ್ಷಾ ಬಂಧನ ಆಚರಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸಹೋದರಿಯಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ರಕ್ಷಾಬಂಧನ ಹಬ್ಬ ಆಚರಿಸಿಕೊಂಡರು. ‘ಒಡಹುಟ್ಟಿದವರು ವಿಧಿ ಬರಹದಿಂದ ಒಂದೇ ಮನೆಯಲ್ಲಿ ಹುಟ್ಟುತ್ತಾರೆ.
ಪ್ರೀತಿ ಮತ್ತು ಪ್ರೋತ್ಸಾಹ ಜೀವನದುದ್ದಕ್ಕೂ ಈ ಸಂಬಂಧವನ್ನು ಪೊರೆಯುತ್ತದೆ. ರಕ್ಷಾಬಂಧನ ಆಚರಿಸುತ್ತಿರುವ ಪ್ರತಿಯೊಬ್ಬರಿಗೂ ಶುಭಾಶಯಗಳು’ ಎಂದು ಯಶ್ ರಕ್ಷಾಬಂಧನದ ಶುಭಕಾಮನೆ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.