- Home
- Entertainment
- Sandalwood
- ಆದಾಯ ತೆರಿಗೆಯವರು ಕರೆದರೆ ಬರಲ್ಲ ಅನ್ನೋದಕ್ಕಾಗುತ್ತಾ: ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?
ಆದಾಯ ತೆರಿಗೆಯವರು ಕರೆದರೆ ಬರಲ್ಲ ಅನ್ನೋದಕ್ಕಾಗುತ್ತಾ: ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?
ಯಶ್ ಮನೆ ರೈಡ್ ಮಾಡಿದ್ದ ಹಿನ್ನೆಲೆಯಲ್ಲಿ ಅವರ ಈ ಮಾತು ಪ್ರಾಮುಖ್ಯತೆ ಪಡೆದಿದೆ. ಆದಾಯ ತೆರಿಗೆ ಇಲಾಖೆಯ ಸ್ಪೋರ್ಟ್ಸ್ ಮತ್ತು ರೀಕ್ರಿಯೇಷನ್ ಕ್ಲಬ್ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶ್ ಉದ್ಘಾಟಿಸಿದರು.

ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳ ಕಾಲೆಳೆದ ಯಶ್
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹಳ ಸಮಯವಾಯ್ತು. ಚಿತ್ರೀಕರಣದಿಂದಾಗಿ ಎಲ್ಲಿಗೂ ಹೋಗಲಾಗುತ್ತಿಲ್ಲ. ಆದರೆ ಆದಾಯ ತೆರಿಗೆ ಇಲಾಖೆಯವರು ಕರೆದಾಗ ಇಲ್ಲ ಎನ್ನಲು ಆಗುವುದಿಲ್ಲ. ಅಲ್ಲದೆ, ಅತಿಥಿಯಾಗಿ ಬಂದರೆ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಬೇರೆ ಭರವಸೆ ಕೊಟ್ಟಿದ್ದರು, ಹಾಗಾಗಿ ಬಂದೆ. ಹೀಗೆ ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳ ಕಾಲೆಳೆದಿದ್ದು ರಾಕಿಂಗ್ ಸ್ಟಾರ್ ಯಶ್.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
2019ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಯಶ್ ಮನೆ ರೈಡ್ ಮಾಡಿದ್ದ ಹಿನ್ನೆಲೆಯಲ್ಲಿ ಅವರ ಈ ಮಾತು ಪ್ರಾಮುಖ್ಯತೆ ಪಡೆದಿದೆ. ಆದಾಯ ತೆರಿಗೆ ಇಲಾಖೆಯ ಸ್ಪೋರ್ಟ್ಸ್ ಮತ್ತು ರೀಕ್ರಿಯೇಷನ್ ಕ್ಲಬ್ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶ್ ಉದ್ಘಾಟಿಸಿದರು.
ನನ್ನ ಅನುಭವದ ಮಾತು
ಈ ವೇಳೆ ಅವರು, ಎಲ್ಲೇ ಹೋದರೂ ಅಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಿದರೆ ನಿಮಗೆ ಅದು ದುಪ್ಪಟ್ಟಾಗಿ ಮರಳುತ್ತದೆ. ಇದು ನನ್ನ ಅನುಭವದ ಮಾತು. ಕರ್ನಾಟಕ ಮತ್ತು ಕನ್ನಡ ಭಾಷೆ ನನಗೆ ಇತರ ಭಾಷೆಯನ್ನು ಗೌರವಿಸುವಂತೆ ಹೇಳಿದೆ.
ಎಲ್ಲರಿಗೂ ಕನ್ನಡ ಕಲಿಸೋಣ
ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದವರು ಇಲ್ಲಿನ ಜನರ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನಾಡುತ್ತಾರೆ. ಎಲ್ಲರಿಗೂ ಕನ್ನಡ ಕಲಿಸೋಣ. ಆದರೆ ಬಲವಂತವಾಗಿ ಏನನ್ನೂ ಕಲಿಸೋದಕ್ಕಾಗಲ್ಲ. ಕನ್ನಡ ಮಾತಾಡುವಂತೆ ಗುದ್ದಾಡುವ ಬದಲು ಕನ್ನಡ ಮಾತಾಡದಿದ್ದರೆ ಅವರಿಗೇ ಕೊರತೆ ಅನಿಸುವ ಹಾಗೆ ಮಾಡೋಣ.
ಕನ್ನಡ ಸಾಧಿಸಿ ತೋರಿಸುವಂತಾಗಲಿ
ಅಂತಿಮವಾಗಿ ಬದುಕೇ ಮುಖ್ಯ. ಒಂದು ಭಾಷೆ ನಮ್ಮ ಹೊಟ್ಟೆ ತುಂಬಿಸುತ್ತದೆ ಅಂದಾಗ ಜನ ಆ ಭಾಷೆಯನ್ನು ಕಲಿತೇ ಕಲಿಯುತ್ತಾರೆ. ಆ ಸಾಧ್ಯತೆಯನ್ನು ಕನ್ನಡ ಸಾಧಿಸಿ ತೋರಿಸುವಂತಾಗಲಿ ಎಂದು ಹಾರೈಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

