ಸೂಪರ್‌ಸ್ಮಾ‌ರ್ ರಜನಿಕಾಂತ್ (Rajinikanth) ಅವರ ವೃತ್ತಿಜೀವನದ ಬಗ್ಗೆ ಯಾರಿಗೂ ಹೇಳಬೇಕಾಗಿಯೇ ಇಲ್ಲ. ಗೂಗಲ್ ಮಾಡಿದರೆ ಎಲ್ಲವೂ ಜಗತ್ತಿನ ಜನರಿಗೆ ಬಹಿರಂಗವಾಗುತ್ತದೆ. ಆದರೆ ನಟ ರಜನಿಕಾಂತ್ ಅವರ ಖಾಸಗಿ ಬದುಕಿನಲ್ಲಿ ನಡೆದ ಒಂದು ಪ್ರೇಮಕಥೆ ಇಂದಿಗೂ ಅನೇಕರಿಗೆ ತಿಳಿದಿಲ್ಲ…

ಜಗತ್ತಿಗೆ ಗೊತ್ತಿಲ್ಲದ ರಜನಿಕಾಂತ್ ಪ್ರೇಮಕಥೆ

Untold Super Star Love Story : ಭಾರತೀಯ ಸಿನಿರಂಗದ ದೇವರಂತೆ ಪೂಜಿಸಲ್ಪಡುವ ಸೂಪರ್‌ಸ್ಮಾ‌ರ್ ರಜನಿಕಾಂತ್ (Rajinikanth) ಅವರ ವೃತ್ತಿಜೀವನದ ಬಗ್ಗೆ ಯಾರಿಗೂ ಹೇಳಬೇಕಾಗಿಯೇ ಇಲ್ಲ. ಗೂಗಲ್ ಮಾಡಿದರೆ ಎಲ್ಲವೂ ಜಗತ್ತಿನ ಜನರಿಗೆ ಬಹಿರಂಗವಾಗುತ್ತದೆ. ಆದರೆ ನಟ ರಜನಿಕಾಂತ್ ಅವರ ಖಾಸಗಿ ಬದುಕಿನಲ್ಲಿ ನಡೆದ ಒಂದು ಪ್ರೇಮಕಥೆ ಇಂದಿಗೂ ಅನೇಕರಿಗೆ ತಿಳಿದಿಲ್ಲ. ಬೈ ಚಾನ್ಸ್ ಗೊತ್ತಾದರೆ, ಹಲವರಿಗೆ ಅಚ್ಚರಿ ಆಗೋದು, 'ಹೀಗೂ ಉಂಟೇ' ಎಂದು ಅನ್ನಿಸುವುದು ಖಂಡಿತ.. ಹಾಗಿದ್ದರೆ ಅದೆಣು ನೋಡಿ..!

ತೆಲುಗು ಚಿತ್ರರಂಗದ ಸ್ಟಾರ್ ನಟ ನಾಗಾರ್ಜುನನ ಎರಡನೇ ಪತ್ನಿ ಅಮಲಾಳ ಮೇಲಿನ ಪ್ರೀತಿಯಿಂದ ರಜನಿಕಾಂತ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದರು ಎನ್ನುವುದು ಹಲವರಿಗೆ ಹೊಸ ಸಂಗತಿ. 1975ರಲ್ಲಿ ಅಪೂರ್ವ ರಾಗಂಗಳ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ರಜನಿಕಾಂತ್, ಬಳಿಕ ಬಿಲ್ಲಾ, ಪಡಯಪ್ಪ, ಶಿವಾಜಿ, ಡಾನ್, ಮೂಂಡ್ರು ಮುಗಂ, ತಲಪತಿ, ಹೀಗೆ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದರು. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮೆರೆದರು.

ಇಬ್ಬರ ಕೆಮಿಸ್ಟ್ರಿ ಆಗ ಪ್ರೇಕ್ಷಕರ ಗಮನ ಸೆಳೆದಿತ್ತು

ಅದರೆ, ಅದೇ ವೇಳೆ, ರಜನಿಕಾಂತ್ ವೃತ್ತಿಪರ ಯಶಸ್ಸಿನಷ್ಟೇ, ಖಾಸಗಿ ಜೀವನದ ಕೆಲ ಘಟನಗಳು ಕೂಡ ಆಗಾಗ ಚರ್ಚೆಗೆ ಬಂದಿವೆ. ರಜನಿಕಾಂತ್ ಮತ್ತು ನಟಿ ಅಮಲಾ ಮಾಪ್ಪಿಲೈ ಜೋಡಿ, ಕೋಡಿ ಪರಕ್ಕುತ್ತು, ವೇಲೈಕಾರನ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾಗಳಲ್ಲಿ ಇಬ್ಬರ ಕೆಮಿಸ್ಟ್ರಿ ಆಗ ಪ್ರೇಕ್ಷಕರ ಗಮನ ಸೆಳೆದಿತ್ತು. ಶೂಟಿಂಗ್ ವೇಳೆ ಹೆಚ್ಚಾಗಿ ಭೇಟಿಯಾಗುತ್ತಿದ್ದ ಈ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತು ಎನ್ನಲಾಗುತ್ತದೆ.

ವರದಿಗಳ ಪ್ರಕಾರ, ನಟಿ ಅಮಲಾಳ ಮೇಲಿನ ಪ್ರೀತಿಯಿಂದ ರಜನಿಕಾಂತ್ ತಮ್ಮ ಪತ್ನಿ ಲತಾರೊಂದಿಗೆ ವಿಚ್ಛೇದನ ಪಡೆಯುವ ಮಟ್ಟಕ್ಕೂ ಯೋಚಿಸಿದ್ದರು. ಈ ಬಗ್ಗೆ ನೋಟಿಸ್‌ಗಳೂ ಕಳುಹಿಸಲ್ಪಟ್ಟಿದ್ದವೆಂದು ಹೇಳಲಾಗುತ್ತದೆ. ಈ ಸುದ್ದಿ ಹೊರಬಂದಾಗ ಅಭಿಮಾನಿಗಳಲ್ಲಿ ಆಕ್ರೋಶ ಉಕ್ಕೇರಿದೆ. ಆಗ ಕೆಲವರು ರಜನಿಕಾಂತ್ ಸಿನಿಮಾಗಳಿಗೆ ಕೂಡ ವಿರೋಧ ವ್ಯಕ್ತಪಡಿಸಿದ್ದರು.

ಆಗ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂಬುದನ್ನು ಅರಿತ ಲತಾ ಅವರು, ರಜನಿಕಾಂತ್ ಅವರ ಮಾರ್ಗದರ್ಶಕ ಹಾಗೂ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರನ್ನು ಸಂಪರ್ಕಿಸಿದರು. ಬಾಲಚಂದರ್ ಮಧ್ಯಸ್ಥಿಕೆ ವಹಿಸಿ, ವಿಚ್ಛೇದನದ ಪರಿಣಾಮಗಳು ಕುಟುಂಬ ಮತ್ತು ವೃತ್ತಿಜೀವನದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ರಜನಿಕಾಂತ್ ಹಾಗೂ ಲತಾ ಅವರಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗುತ್ತದೆ.

ಭೇಟಿ, ಮಾತುಕತೆ ಮುರಿದುಬಿತ್ತು

ಬಳಿಕ, ತಮ್ಮ ಪ್ರೀತಿ-ಪ್ರೇಮ ವ್ಯವಹಾರ ಹಾಗೂ ಆಗಬಹುದಾದ ಕೆಟ್ಟ ಪರಿಣಾಮಗಳ ಬಗ್ಗೆ ಯೋಚಿಸಿ, ರಜನಿಕಾಂತ್-ಲತಾ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿದರು. ನಂತರ, ಅವರಿಬ್ಬರ ಭೇಟಿ, ಮಾತುಕತೆ ಮುರಿದುಬಿತ್ತು. ಆಗ ಎದ್ದಿದ್ದ ವಿವಾದಗಳೂ ಶಾಂತವಾದವು. ಒಂದು ಕಾಲದಲ್ಲಿ ಸಿನಿರಂಗವನ್ನೇ ತಲ್ಲಣಗೊಳಿಸಿದ್ದ ಈ ಪ್ರೇಮಕಥೆ, ಕೊನೆಗೂ ಕುಟುಂಬಗಳನ್ನು ಉಳಿಸಿ ಸುಖಾಂತ್ಯ ಕಂಡಿತು. ಈ ಕಥೆ, ರಜನಿಕಾಂತ್ ಅವರು ವೃತ್ತಿಬದುಕಿನಲ್ಲಿ ಅದೆಷ್ಟೇ ಮೇಲೆ ಏರಿದ್ದರೂ, 'ಸ್ಟಾರ್‌ಗಳ ಜೀವನದಲ್ಲೂ ಸಂಕಷ್ಟಗಳು ಮತ್ತು ಸಂಕೀರ್ಣ ನಿರ್ಧಾರಗಳು ಇರುತ್ತವೆ' ಎಂಬುದನ್ನು ತಿಳಿಸುತ್ತವೆ.