- Home
- Entertainment
- Sandalwood
- ಕೆಜಿಎಫ್ ಪಾರ್ಟ್ 3 ಬಗ್ಗೆ ಮೌನ ಮುರಿದ ರಾಕಿಂಗ್ ಸ್ಟಾರ್ ಯಶ್, ಅಭಿಮಾನಿಗಳಿಗೆ ಮತ್ತೊಂದು ಹಬ್ಬ
ಕೆಜಿಎಫ್ ಪಾರ್ಟ್ 3 ಬಗ್ಗೆ ಮೌನ ಮುರಿದ ರಾಕಿಂಗ್ ಸ್ಟಾರ್ ಯಶ್, ಅಭಿಮಾನಿಗಳಿಗೆ ಮತ್ತೊಂದು ಹಬ್ಬ
ರಾಕಿಂಗ್ ಸ್ಟಾರ್ ಯಶ್ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರಗೊಂಡಿದ್ದಾರೆ. ಟಾಕ್ಸಿಕ್ ಸಿನಿಮಾ ಬಿಡುಗಡೆ ಮಂದೂಡಿಕೆಯಿಂದ ಫ್ಯಾನ್ಸ್ ಮತ್ತಷ್ಟು ಕಾಯಬೇಕಾಗಿದೆ. ಇದರ ನಡುವೆ ಯಶ್, ಭರ್ಜರಿ ಯಶಸ್ಸು ಕಂಡ ಕೆಜಿಎಫ್ ಪಾರ್ಟ್ 3 ಕುರಿತು ಮಾತನಾಡಿದ್ದಾರೆ.

ಸದ್ದು ಮಾಡುತ್ತಿದೆ ಕೆಜಿಎಫ್ 3
ರಾಕಿಂಗ್ ಸ್ಟಾರ್ ಯಶ್ ಸದ್ಯ ಟಾಕ್ಸಿಕ್, ರಾಮಾಯಣ ಪಾರ್ಟ್ 1 ಹಾಗೂ ಪಾರ್ಟ್ 2 ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. 2022ರಲ್ಲಿ ತೆರೆಕಂಡ ಕೆಜಿಎಫ್ 2 ಬಳಿಕ ಯಶ್ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಯಶ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಟಾಕ್ಸಿಕ್ ಇನ್ನೇನು ಬಿಡುಗಡೆಯಾಗಬೇಕು ಅನ್ನೋವಷ್ಟರಲ್ಲಿ ಮತ್ತೆ ಮುಂದೂಡಿಕೆಯಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ಸೂಪರ್ ಡೂಪರ್ ಹಿಟ್ ಕೆಜಿಎಫ್ ಸದ್ದು ಮಾಡುತ್ತಿದೆ.

ಕೆಜಿಎಫ್ ಪಾರ್ಟ್ 3 ಬಗ್ಗೆ ಯಶ್ ಹೇಳಿದ್ದೇನು?
ವೆರೈಟಿ ಮಾಧ್ಯಮದ ಜೊತೆ ಮಾತನಾಡಿದ ಯಶ್, ಕೆಜಿಎಫ್ ಪಾರ್ಟ್ 3 ಸಿನಿಮಾ ಕುರಿತು ಮಾತನಾಡಿದ್ದಾರೆ. ಟಾಕ್ಸಿಕ್, ರಾಮಾಯಾಣ ಜೊತೆಗೆ ಅಭಿಮಾನಿಗಳು ಕೆಜಿಎಫ್ ಪಾರ್ಟ್ 3 ಕುರಿತು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಏನಂತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಯಶ್, ಕೆಜಿಎಫ್ ಪಾರ್ಟ್ 3 ಸಿನಿಮಾ ನಿರ್ಮಾಣಗೊಳ್ಳಲಿದೆ ಎಂದಿದ್ದಾರೆ.
ಕೆಜಿಎಫ್ ಪಾರ್ಟ್ 3 ಸಿನಿಮಾ ಯಾವಾಗ ರಿಲೀಸ್?
ಸರಿಯಾದ ಸಮಯಕ್ಕೆ ಕೆಜಿಎಫ್ ಪಾರ್ಟ್ 3 ಸಿನಿಮಾ ಸೆಟ್ಟೇರಲಿದೆ. ಸರಿಯಾದ ಸಮಯ ಬರಲಿದೆ. ಜನರು ಸಿನಿಮಾ ನೋಡಲು ಕಾತರರಾಗಿದ್ದಾಗ, ಸರಿಯಾದ ಸಿನಿಮಾ ನೀಡಬೇಕು ಎಂದು ಯಶ್ ಹೇಳಿದ್ದಾರೆ. ಉತ್ತಮ ಸಿನಿಮಾ ಮಾಡಬೇಕು. ಅದು ಹೆಸರಿಗಾಗಿ ಹಣಕ್ಕಾಗಿ ಅಲ್ಲ, ಜನರು ಇಷ್ಟಪಟ್ಟು ಸಿನಿಮಾ ನೋಡುವಂತಾಗಬೇಕು ಎಂದು ಯಶ್ ಹೇಳಿದ್ದಾರೆ.
ಟಾಕ್ಸಿಕ್ ಬಳಿಕ ಕೆಜಿಎಫ್ ಪಾರ್ಟ್ 3 ಸಿನಿಮಾ ಕೆಲಸ ಶುರು?
ಸದ್ಯ ಯಶ್ ಬಹುನಿರೀಕ್ಷಿತ ಪ್ರಾಜೆಕ್ಟ್ ಟಾಕ್ಸಿಕ್ ಸಿನಿಮಾದಲ್ಲಿ ಬ್ಯೂಸಿ ಇದ್ದಾರೆ. ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ ಮಧ್ಯಪ್ರಾಚ್ಯ ಯುದ್ಧ ಕಾರಣಕ್ಕಾಗಿ ಮುಂದೂಡಲಾಗಿತ್ತು. ಇದೀಗ ಜೂನ್ 4ಕ್ಕೆ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾ ಬಿಡುಗಡೆ ಬಳಿಕ ಕೆಜಿಎಪ್ ಪಾರ್ಟ್ 3 ಸಿನಿಮಾ ಕೆಲಸ ಆರಂಭಗೊಳ್ಳುವ ಸಾಧ್ಯತೆ ಇದೆ.
ಕೆಜಿಎಫ್ ಸಿನಿಮಾ ಯಶಸ್ಸು
ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶದ ಕೆಜಿಎಫ್ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿತ್ತು. 2018ರಲ್ಲಿ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ 238 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಇನ್ನು ನಾಲ್ಕು ವರ್ಷದ ಬಳಿಕ 2022ರಲ್ಲಿ ಕೆಜಿಎಫ್ ಪಾರ್ಟ್ 2 ಬಿಡುಗಡೆಯಾಗಿತ್ತು. ಈ ಸಿನಿಮಾ 1,215 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ರಾವಣನ ಅವತಾರದಲ್ಲಿ ಯಶ್
ಭಾರತೀಯ ಸಿನಿಮಾದಲ್ಲೇ ಅತ್ಯಂತ ನಿರೀಕ್ಷಿತ ಸಿನಿಮಾ ರಾಮಾಯಣ. ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ, ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. 2026ರ ನವೆಂಬರ್ ತಿಂಗಳಲ್ಲಿ ರಾಮಾಯಾಣ ಮೊದಲ ಪಾರ್ಟ್ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

