26 ವರ್ಷದ ಬಳಿಕ ಕನ್ನಡಕ್ಕೆ ಮತ್ತೆ ಬರ್ತಿದ್ದಾರೆ ‘Yaare Neenu Cheluve’ ಕಮಲಿ
Yaare Neenu Cheluve : ಚಂದನವನದ ಜನಪ್ರಿಯ ಪ್ರೇಮ ಕಥೆಯಾದ ‘ಯಾರೇ ನೀನು ಚೆಲುವೆ’ ಸಿನಿಮಾ ಸೇರಿ ಒಂದೆರಡು ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದ ಸ್ನಿಗ್ಧ ಸುಂದರಿ ಸಂಗೀತಾ ನಾಯರ್. ಇದೀಗ ಬರೋಬರಿ 26 ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಯಾರೇ ನೀನು ಚೆಲುವೆ
ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿದ್ದ ಜನಪ್ರಿಯ ಲವ್ ರೊಮ್ಯಾಂಟಿಕ್ ಸಿನಿಮಾ ‘ಯಾರೇ ನೀನು ಚೆಲುವೆ’ ಸಿನಿಮಾ ನೆನಪಿದ್ಯಾ? ಖಂಡಿತಾ ನೆನಪಿರುತ್ತೆ, 90ರ ದಶಕದಲ್ಲಿ ಪ್ರೀತಿಯ ಕಿಚ್ಚು ಹಚ್ಚಿದ ಸಿನಿಮಾ ಅದು. ಈ ಸಿನಿಮಾದ ನಾಯಕಿ ಸಂಗೀತ ಇದಿಗ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ.
ಸಂಗೀತ ಮಾಧವನ್ ನಾಯರ್
ಯಾರೇ ನೀನು ಚೆಲುವೆ ಸಿನಿಮಾದಲ್ಲಿ ಸಂಗೀತ ಪಾತ್ರವನ್ನು ನೋಡಿ, ಯುವಕರು, ನಮ್ಮ ಜೀವನದಲ್ಲೂ ಇಂತಹ ಒಂದು ಹುಡುಗಿ ಬರಲಿ ಎಂದು ಅಂದುಕೊಂಡಿದ್ದು ಸುಳ್ಳಲ್ಲ. ಈ ಸಿನಿಮಾ ತಮಿಳಿನ ರಿಮೇಕ್ ಆದ್ರೂ ಕನ್ನಡಲ್ಲಿ ಭರ್ಜರಿ ಯಶಸ್ಸು ಸಿಕ್ಕಿತು. ಅದಕ್ಕೂ ಮುನ್ನ ಸಂಗೀತಾ ರವಿಚಂದ್ರನ್ ಅವರ ‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು.
ಯಾರೇ ನೀ ಅಭಿಮಾನಿಗೂ ನಾಯಕಿ
ಯಾರೇ ನೀನು ಚೆಲುವೆ ಸಿನಿಮಾ ಬಳಿಅಕ ಸಂಗೀತಾ ಕನ್ನಡದಲ್ಲಿ ‘ಯಾರೇ ನೀ ಅಭಿಮಾನಿ’ ಸಿನಿಮಾದಲ್ಲಿ ಶಿವರಾಜಕುಮಾರ್ ಮತ್ತು ರಮ್ಯಾ ಜೊತೆ ನಟಿಸಿದ್ದರು. ಈ ಸಿನಿಮಾ ಕೂಡ ಯಶಸ್ಸು ಗಳಿಸಿತ್ತು. ಆದರೆ ಈ ಸಿನಿಮಾ 2000ದಲ್ಲಿ ಬಿಡುಗಡೆಯಾಗಿತ್ತು. ಬಳಿಕ ಮತ್ತೆ ಯಾವುದೇ ಕನ್ನಡ ಸಿನಿಮಾಗಳಲ್ಲಿ ಸಂಗೀತ ನಟಿಸಿಲ್ಲ.
26ವರ್ಷದ ಬಳಿಕ ಮತ್ತೆ ಕನ್ನಡಕ್ಕೆ
ಇದೀಗ ಬರೋಬ್ಬರಿ 26ವರ್ಷಗಳ ಬಳಿಕ ಸಂಗೀತ ಮಾಧವನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಕಿಚ್ಚ ಸುದೀ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಕಿರಣ್ ವಿಶ್ವನಾಥ್ ಎನ್ನುವ ನಿರ್ದೇಶಕರು, ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾದಲ್ಲಿ ಸಂಗೀತ ತಾಯಿಯಾಗಿ ನಟಿಸುತ್ತಿದ್ದಾರೆ. ಹಾನಟಿ ಸೀಸನ್ ಒನ್ ವಿನ್ನರ್ ಪ್ರಿಯಾಂಕಾ ಆಚಾರ್ ಈ ಚಿತ್ರದ ನಾಯಕಿ.
ಅಮ್ಮನ ಪಾತ್ರದಲ್ಲಿ ಸಂಗೀತ
ಇಲ್ಲಿವರೆಗೂ ಸಿನಿಮಾ ನಾಯಕನ ಪಾತ್ರ ರಿವೀಲ್ ಆಗಿಲ್ಲ, ಆದ್ರೆ ತಾಯಿಯ ಪಾತ್ರದ ವಿಡಿಯೋ ರಿಲೀಸ್ ಆಗಿದೆ. ಪ್ರೊಡಕ್ಷನ್ ನಂ1 ಹೆಸರಿನ ಮೂಲಕ ಸದ್ಯಕ್ಕೆ ತಂಡವನ್ನು ಪರಿಚಯಿಸುತ್ತಿರುವ ನಿರ್ಮಾಣ ತಂಡ, ನಾಯಕನ ತಾಯಿ ಭಾಗ್ಯ ಎನ್ನುವ ಪಾತ್ರದಲ್ಲಿ ಸಂಗೀತಾರನ್ನು ಪರಿಚಯಿಸಿದೆ.
ಮದುವೆ ಬಳಿಕ ನಟನೆಯಿಂದ ದೂರ
ಸಂಗೀತ ಮದುವೆ ಬಳಿಕ ನಟನೆಯಿಂದ ಕೊಂಚ ದೂರ ಉಳಿದಿದ್ದರು. ಬಳಿಕ ಒಂದಷ್ಟು ಮಲಯಾಳಂ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದರು. ಇತ್ತೀಚಿಗೆ ಮೋಹನ್ ಲಾಲ್ ಜೊತೆ ನಟಿಸಿದ ‘ಹೃದಯಪೂರ್ವಂ’ ಸಿನಿಮಾದಲ್ಲಿ ಇವರ ನಟನೆಯನ್ನು ಜನ ಮೆಚ್ಚಿಕೊಂಡಿದ್ದರು. ಇದೀಗ ಕನ್ನಡ ಮತ್ತೆ ಕಮಲಿ ಬರುತ್ತಿರುವುದನ್ನು ನೋಡಿ ಕನ್ನಡಿಗರು ಖುಷಿ ಪಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

