MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ರಿಷಭ್ ಶೆಟ್ಟಿ ಒಲವಿನ ದಾಂಪತ್ಯಕ್ಕೆ ಒಂಭತ್ತರ ಸಂಭ್ರಮ.. My Superpower ಎಂದು ಪತ್ನಿಯನ್ನು ಕೊಂಡಾಡಿದ Divine Star

ರಿಷಭ್ ಶೆಟ್ಟಿ ಒಲವಿನ ದಾಂಪತ್ಯಕ್ಕೆ ಒಂಭತ್ತರ ಸಂಭ್ರಮ.. My Superpower ಎಂದು ಪತ್ನಿಯನ್ನು ಕೊಂಡಾಡಿದ Divine Star

Rishab Shetty- Pragathi Shetty: ಪ್ಯಾನ್ ಇಂಡಿಯಾ ಸ್ಟಾರ್ ಅಗಿರುವ ಕನ್ನಡದ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ರಿಷಭ್ ಶೆಟ್ಟಿ ಇಂದು 9ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ತನ್ನ ಜೀವನದ ಸೌಭಾಗ್ಯ ದೇವತೆಗೆ ಶುಭಾಶಯ ತಿಳಿಸಿದ್ದಾರೆ ಡಿವೈನ್ ಸ್ಟಾರ್. 

2 Min read
Author : Pavna Das
Published : Feb 09 2026, 03:14 PM IST
Share this Photo Gallery
  • FB
  • TW
  • Linkdin
  • Whatsapp
16
ರಿಷಬ್ ಶೆಟ್ಟಿ
Image Credit : Instagram

ರಿಷಬ್ ಶೆಟ್ಟಿ

ಕನ್ನಡ ಚಿತ್ರರಂಗದ ಜನಪ್ರಿಯ ನಟ , ನಿರ್ದೇಶಕ, ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಇಂದು ಅಂದ್ರೆ ಫೆಬ್ರುವರಿ 9ರಂದು ತಮ್ಮ 9ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಪತ್ನಿಗಾಗಿ ಡಿವೈನ್ ಸ್ಟಾರ್ ಸ್ಪೆಷಲ್ ವಿಶ್ ಮಾಡಿದ್ದಾರೆ.

26
ರಿಷಬ್ -ಪ್ರಗತಿ ವಾರ್ಷಿಕೋತ್ಸವ
Image Credit : Instagram

ರಿಷಬ್ -ಪ್ರಗತಿ ವಾರ್ಷಿಕೋತ್ಸವ

ರಿಷಬ್ ಮತ್ತು ಪ್ರಗತಿ ಪ್ರೀತಿಗೆ ಇತ್ತೀಚೆಗಷ್ಟೆ ಹತ್ತು ವರ್ಷಗಳು ತುಂಬಿದ್ದು, ಅದನ್ನು ಈ ಜೋಡಿ ಸಂಭ್ರಮದಿಂದ ಸೆಲೆಬ್ರೇಟ್ ಮಾಡಿದ್ದರು, ಅಭಿಮಾನಿಯಾಗಿ ಬಂದು ತಮ್ಮ ಜೀವನಕ್ಕೆ ಬೆಳಕಾವಳು ಎಂದಿದ್ದರು. ಇದೀಗ ಪತ್ನಿಗೆ ತನ್ನ ಬದುಕಿನ ಸೌಭಾಗ್ಯ ದೇವತೆ ಎಂದಿದ್ದಾರೆ ರಿಷಬ್.

Related Articles

Related image1
Now Playing
"ರಾಜಕೀಯ ಬೇಡ, ಸಿನಿಮಾನೇ ಪ್ರಾಣ": ಕನಕೋತ್ಸವದಲ್ಲಿ ರಿಷಬ್ ಶೆಟ್ಟಿ | Rishab Shetty speech | Suvarna News
Related image2
Temple Run ಬಳಿಕ ಫ್ಯಾಮಿಲಿ ಜೊತೆ ಗೋವಾದಲ್ಲಿ ವೆಕೇಶನ್ ಎಂಜಾಯ್ ಮಾಡಿದ Rishab Shetty
36
ಪತ್ನಿಗೆ ರಿಷಬ್ ವಿಶ್
Image Credit : Instagram

ಪತ್ನಿಗೆ ರಿಷಬ್ ವಿಶ್

ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಭತ್ತು ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ. ಅಲ್ಲಿ ನಲಿವಿದೆ, ನೋವಿದೆ, ನಗುವಿದೆ, ಸರಸವಿರಸಗಳಿವೆ.. ಎಲ್ಲವನ್ನು ತೂಗುವ ಸಮರಸವಿದೆ.. ಎಲ್ಲಕ್ಕೂ ಮಿಗಿಲಾಗಿ ಕೊನೆಯಾಗದ ಒಲವಿದೆ.. ಅ ಒಲವು ಬೀರಿದ ಬೆಳಕು, ತಂದ ನೆಮ್ಮದಿ, ತುಂಬಿದ ಆತ್ಮವಿಶ್ವಾಸಗಳೇ ಇಂದು ನನ್ನನ್ನು ನಾನಾಗಿಸಿದೆ. ನನ್ನ ಸತಿಯಾಗಿ, ಸಾಥಿಯಾಗಿ, ಸೌಭಾಗ್ಯ ದೇವತೆಯಾಗಿ, ಹಿಡಿಯಷ್ಟಿದ್ದ ಬದುಕನ್ನು ಕಡಲಷ್ಟು ಅಗಾಧವಾಗಿಸಿದ ನಿನಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು..

46
ನನ್ನ ಸೂಪರ್ ಪವರ್ ಎಂದ ನಟ
Image Credit : Instagram

ನನ್ನ ಸೂಪರ್ ಪವರ್ ಎಂದ ನಟ

ನನ್ನನ್ನು ಮುನ್ನಡೆಸುವ ಶಕ್ತಿಗೆ, ನಾನು ಅವಲಂಬಿಸಿರುವ ಶಕ್ತಿಗೆ, ವಾರ್ಷಿಕೋತ್ಸವದ ಶುಭಾಶಯಗಳು, ನನ್ನ ಮಹಾಶಕ್ತಿ. ನೀವು ನನ್ನ ಕೈ ಹಿಡಿದ ನಂತರ ಜೀವನವು ಉತ್ತಮವಾಗಿರುತ್ತದೆ.(To the force that drives me, to the strength I bank on, happy anniversary, my superpower. Life feels better when you hold my hand. )

56
ರಿಷಬ್ -ಪ್ರಗತಿ ಪ್ರೀತಿ
Image Credit : Instagram

ರಿಷಬ್ -ಪ್ರಗತಿ ಪ್ರೀತಿ

ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿ ರಿಕ್ಕಿ ಸಿನಿಮಾ ನೋಡಲು ಹೋದ ಪ್ರಗತಿ, ಮೊದಲ ಬಾರಿ ಥಿಯೇಟರ್ ನಲ್ಲಿ ರಿಷಬ್ ಪರಿಚಯ ಆಗಿತ್ತು, ಕುಂದಾಪುರದವರು ಎಂದು ಗೊತ್ತಾದ ಮೇಲೆ ರಿಷಬ್ ಫೇಸ್ ಬುಕ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಇಬ್ಬರ ಮಾತುಕತೆ ನಡೆದು, ಸ್ನೇಹವಾಗಿ, ಅದು ಪ್ರೇಮವಾಗಿ ಒಂದೇ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಈ ಜೋಡಿ.

66
ರಿಷಬ್ ಬೆನ್ನೆಲುಬಾಗಿ ನಿಂತಿರುವ ಪ್ರಗತಿ
Image Credit : Instagram

ರಿಷಬ್ ಬೆನ್ನೆಲುಬಾಗಿ ನಿಂತಿರುವ ಪ್ರಗತಿ

ಪ್ರಗತಿ ಶೆಟ್ಟಿ ಕೇವಲ ಒಬ್ಬ ಪತ್ನಿಯಾಗಿ, ಮಕ್ಕಳ ತಾಯಿಯಾಗಿ ಮಾತ್ರ ಉಳಿಯಲಿಲ್ಲ. ಬದಲಾಗಿ ಗಂಡನ ಎಲ್ಲಾ ಕೆಲಸಗಳಲ್ಲೂ ಸಹ ಬೆನ್ನೆಲುಬಾಗಿ ನಿಂತರು. ಕಾಂತಾರ ಮತ್ತು ಕಾಂತಾರಾ ಚಾಪ್ಟರ್ 1ರಲ್ಲಿ ಪೂರ್ತಿ ಸಿನಿಮಾದ ಕಾಸ್ಟ್ಯೂಮ್ ಡಿಸೈನ್ ಮಾಡಿರುವುದು ಪ್ರಗತಿ. ಆ ಮೂಲಕ ಪತಿಗೆ ಶಕ್ತಿಯಲ್ಲಿ ಜೊತೆಯಾದರು ಪ್ರಗತಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ರಿಷಬ್ ಶೆಟ್ಟಿ
ಕಾಂತಾರ ಚಲನಚಿತ್ರ
ಸ್ಯಾಂಡಲ್‌ವುಡ್
ಮದುವೆ

Latest Videos
Recommended Stories
Recommended image1
Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ
Recommended image2
Kichcha Sudeep: 'ಲಾಡು ತಿನ್ನುವ ಸಮಯದಲ್ಲಿ ಮೆಣಸಿನಕಾಯಿ ಯಾಕೆ' ಎಂದಿರೋ ಕಿಚ್ಚ ಸುದೀಪ್!
Recommended image3
ಕಾಲ ಬದಲಾದ್ರೂ ಈ ಸೌಂಡ್​ ಮಾತ್ರ ಬದಲಾಗಲ್ಲ ನೋಡಿ! Radhika Pandit ಕುತೂಹಲದ ಪೋಸ್ಟ್​
Related Stories
Recommended image1
Now Playing
"ರಾಜಕೀಯ ಬೇಡ, ಸಿನಿಮಾನೇ ಪ್ರಾಣ": ಕನಕೋತ್ಸವದಲ್ಲಿ ರಿಷಬ್ ಶೆಟ್ಟಿ | Rishab Shetty speech | Suvarna News
Recommended image2
Temple Run ಬಳಿಕ ಫ್ಯಾಮಿಲಿ ಜೊತೆ ಗೋವಾದಲ್ಲಿ ವೆಕೇಶನ್ ಎಂಜಾಯ್ ಮಾಡಿದ Rishab Shetty
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved