MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ

Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ

ಬಿಗ್‌ಬಾಸ್‌ 12ರ ವಿಜೇತ ಗಿಲ್ಲಿ ನಟ, ಖ್ಯಾತಿಯಿಂದಾಗಿ ಅಭಿಮಾನಿಗಳ ಒತ್ತಡವನ್ನು ಎದುರಿಸುತ್ತಿದ್ದಾರೆ. ಬಿಗ್‌ಬಾಸ್‌ ಮನೆಯಿಂದ ಹೊರಬಂದ ನಂತರದ ಮಾನಸಿಕ ಹೊಂದಾಣಿಕೆಯ  ಬಗ್ಗೆ ಸಾಧು ಕೋಕಿಲ ವಿವರಿಸಿದ್ದು, ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಗಿಲ್ಲಿ ನಟ ಕೂಡ ಕ್ಷಮೆಯಾಚಿಸಿದ್ದಾರೆ.

2 Min read
Author : Suchethana D
Published : Feb 09 2026, 01:25 PM IST
Share this Photo Gallery
  • FB
  • TW
  • Linkdin
  • Whatsapp
17
ಗಿಲ್ಲಿ ನಟನಿಗೆ ಡಿಮಾಂಡ್​
Image Credit : Asianet News

ಗಿಲ್ಲಿ ನಟನಿಗೆ ಡಿಮಾಂಡ್​

ಬಿಗ್​ಬಾಸ್​​ 12 (Bigg Boss 12)ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಗಿಲ್ಲಿ ನಟನಿಗೆ ಈಗ ಬಿಡುವೇ ಇಲ್ಲ. ಎಲ್ಲಾ ಕಡೆಗಳಲ್ಲಿಯೂ ಸಿಕ್ಕಾಪಟ್ಟೆ ಡಿಮಾಂಡ್​. ಇದೇ ಕಾರಣಕ್ಕೆ, ಈಗ ಗಿಲ್ಲಿಯ ಮೇಲೆ ಕೆಲವು ಆರೋಪಗಳೂ ಕೇಳಿಬರುತ್ತಿವೆ!

27
ಅಭಿಮಾನಿಗಳ ಆಸೆ
Image Credit : Instagram

ಅಭಿಮಾನಿಗಳ ಆಸೆ

ಸೆಲೆಬ್ರಿಟಿ ಆದ ಮೇಲೆ ಅಭಿಮಾನಿಗಳು ತಾವು ಹೇಳಿದಂತೆ ಕೇಳಬೇಕು ಎನ್ನುತ್ತಾರೆ. ಆದರೆ ಈಗಷ್ಟೇ ಬಿಗ್​ಬಾಸ್​​ನಿಂದ ಹೊರಕ್ಕೆ ಬಂದಿರುವ ಗಿಲ್ಲಿ ನಟನಿಗೆ ಸಾವಿರಾರು ಅಭಿಮಾನಿಗಳನ್ನು ಭೇಟಿ ಮಾಡುವುದು, ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಅವರು ಹೇಳಿದಂತೆ ಕೇಳುವುದು... ಇದ್ಯಾವುದೂ ಸಾಧ್ಯವಿಲ್ಲದ ಮಾತು. ಸಿಕ್ಕಾಪಟ್ಟೆ ಬಿಜಿ ಇರುವುದು ಒಂದೆಡೆಯಾದರೆ, ವೋಟ್​ ಹಾಕಿದ ನಮಗೆ ಹಾಗೆ ಮಾಡಿಲ್ಲ, ಹೀಗೆ ಮಾಡಿಲ್ಲ ಎನ್ನುವ ಆರೋಪಗಳು ಇನ್ನೊಂದೆಡೆ.

Related Articles

Related image1
Sri Raghavendra Mahathme: ರಾಯರ ಅಮ್ಮನಾಗಲು ಸಾಫ್ಟ್​ವೇರ್​ ಕೆಲಸ ಬಿಟ್ಟು ಬಂದ ಚೆಲುವೆ ಸ್ಟೋರಿ ಇದು!
Related image2
ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​: 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?
37
ಗಿಲ್ಲಿ ನಟ ಸುಸ್ತು
Image Credit : Instagram

ಗಿಲ್ಲಿ ನಟ ಸುಸ್ತು

ಇದಾಗಲೇ ಗಿಲ್ಲಿ ನಟ (Bigg Boss Gilli Nata) ಫುಲ್​ ಸುಸ್ತಾಗಿರುವ ಹಾಗೆ ಕಾಣಿಸುತ್ತಿದ್ದಾರೆ. ಎಲ್ಲರನ್ನೂ ಮ್ಯಾನೇಜ್​ ಮಾಡಿಕೊಂಡು ಹೋಗುವುದು ಸಾಮಾನ್ಯ ಜನರಿಗೆ ಆಗದ ಮಾತು. ಆದರೆ ಎಲ್ಲರನ್ನೂ ಹ್ಯಾಂಡಲ್​ ಮಾಡುವ ಅನಿವಾರ್ಯತೆ ಗಿಲ್ಲಿ ನಟನಿಗೆ ಉಂಟಾಗಿದೆ.

47
ಗಿಲ್ಲಿ ನಟನ ಮನಸ್ಥಿತಿ
Image Credit : instagram

ಗಿಲ್ಲಿ ನಟನ ಮನಸ್ಥಿತಿ

ಈಗ ಇದರ ನಡುವೆಯೇ, ಹಾಸ್ಯ ನಟ ಸಾಧು ಕೋಕಿಲ ಅವರು ಗಿಲ್ಲಿ ನಟನ ಮನಸ್ಥಿತಿ ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಏನಾಗಿದೆ ಎನ್ನುವುದನ್ನು ವಿವರಿಸಿದ್ದಾರೆ.

57
ಸಾಧು ಕೋಕಿಲ ಏನಂದ್ರು?
Image Credit : Instagram

ಸಾಧು ಕೋಕಿಲ ಏನಂದ್ರು?

ಬಿಗ್​ಬಾಸ್​ ಮನೆಯೊಳಗಿನ ಪ್ರಪಂಚಕ್ಕೂ, ಹೊರಗಿನ ಪ್ರಪಂಚಕ್ಕೂ ತುಂಬಾ ವ್ಯತ್ಯಾಸ ಇದೆ. ಗಿಲ್ಲಿ ನಟ ಅಷ್ಟೊಂದು ತಿಂಗಳು ಬಿಗ್​ಬಾಸ್​ ಮನೆಯಲ್ಲಿ ಇದ್ದುದರಿಂದ ಅವರು ಹೊರಗೆ ಬಂದ ತಕ್ಷಣ, ಹೊರಗಿನ ಪ್ರಪಂಚಕ್ಕೆ ಕೂಡಲೇ ಅಡ್ಜಸ್ಟ್​ ಆಗಬೇಕು ಎಂದರೆ ಅದು ತುಂಬಾ ಕಷ್ಟ. ಅಷ್ಟೂ ತಿಂಗಳು ಹೊರಗಿನ ಪ್ರಪಂಚದ ಗೌಜಿ, ಗದ್ದಲ ಇರುವುದಿಲ್ಲ. ಆದ್ದರಿಂದ ಅವರಿಗೆ ಕೂಡಲೇ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಗಿಲ್ಲಿ ನಟನ ಮಾನಸಿಕ ಸ್ಥಿತಿಯನ್ನು ವಿವರಿಸಿದ್ದಾರೆ.

67
ನಮಗೆ ಅರ್ಥವಾಗ್ತಿಲ್ಲ
Image Credit : Social Media

ನಮಗೆ ಅರ್ಥವಾಗ್ತಿಲ್ಲ

ಗಿಲ್ಲಿ ನಟ ಹಾಸ್ಯ ಕಲಾವಿದ. ಸದಾ ಮಾತಿನಿಂದಲೇ ಎಲ್ಲರನ್ನೂ ಮೋಡಿ ಮಾಡುವವರು. ಆದರೆ ಗಿಲ್ಲಿ ಹೊರಗಡೆ ಬಂದ ಮೇಲೆ ಫುಲ್​ ಸೈಲೆಂಟ್​ ಆಗಿದ್ದಾರೆ. ಆದರೆ ನಿಜವಾಗಿ ಹೇಳಬೇಕು ಎಂದರೆ ಅವರ ಮನಸ್ಥಿತಿಯೇ ಹಾಗೆ ಆಗಿ ಬಿಟ್ಟಿರುತ್ತದೆ. ಕೂಡಲೇ ಅಡ್ಜಸ್ಟ್​ ಆಗಬೇಕು ಎಂದರೆ ಅದು ಸುಲಭದ ಮಾತಲ್ಲ. ಆದರೆ ಅದು ನಮಗೆ ಅರ್ಥವಾಗದೇ ಇರುವುದು ಬೇಸರದ ಸಂಗತಿ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ ಸಾಧು ಕೋಕಿಲ.

77
ಕ್ಷಮೆ ಕೋರಿದ ಗಿಲ್ಲಿ
Image Credit : Asianet News

ಕ್ಷಮೆ ಕೋರಿದ ಗಿಲ್ಲಿ

ಇದಾಗಲೇ ಗಿಲ್ಲಿ ನಟ ಕೂಡ, ನನಗೆ ಎಲ್ಲಾ ಕಡೆಗಳಿಂದಲೂ ಕರೆ ಬರುತ್ತಿರುವ ಕಾರಣ, ಎಲ್ಲಾ ಅಭಿಮಾನಿಗಳನ್ನು ಭೇಟಿಯಾಗಲು ಆಗುತ್ತಿಲ್ಲ ಎಂದಿದ್ದಾರೆ. ಇದಾಗಲೇ ಅಭಿಮಾನಿಯೊಬ್ಬರಿಗೆ ಕ್ಷಮೆಯನ್ನೂ ಕೋರಿದ್ದಾರೆ. ಒಟ್ಟಿನಲ್ಲಿ ಸೆಲೆಬ್ರಿಟಿ ಜೀವನ ಎಂದರೆ ಸುಖ ಮಾತ್ರವಲ್ಲ, ಎಷ್ಟೊಂದು ಕಷ್ಟವೂ ಇರುತ್ತದೆ ಎನ್ನುವುದು ಗಿಲ್ಲಿ ನಟನಿಂದ ಜನರು ತಿಳಿದುಕೊಳ್ಳಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಗಿಲ್ಲಿ ನಟ
ಮನರಂಜನಾ ಸುದ್ದಿ
ಟಿವಿ ಶೋ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
ಇದ್ದರೆ ಇರಬೇಕು ಇಂಥ ಗೆಳೆಯ ಎನ್ನೋ Amruthadhaare ಆನಂದ್​ಗೆ​ ಹುಟ್ಟುಹಬ್ಬ: ನಟನ ಇಂಟರೆಸ್ಟಿಂಗ್​ ಮಾಹಿತಿ
Recommended image2
ಬ್ಯಾಕ್‌ಸ್ಟೇಜ್‌ನಲ್ಲಿ ಸತ್ಯ ಬಾಯಿಬಿಟ್ಟ ಗಿಲ್ಲಿ ನಟ; Bigg Boss ಟ್ರೋಫಿ ಗೆದ್ಮೇಲೆ ಹೀಗಾ?
Recommended image3
‌Photos: ಮ್ಯಾನಿಫೆಸ್ಟೇಶನ್‌ ಎಫೆಕ್ಟ್‌: ಸೀಮಂತ ಸಂಭ್ರಮದಲ್ಲಿ Lakshmi Nivasa Serial ನಟಿ ಮಾನಸಾ ಮನೋಹರ್!
Related Stories
Recommended image1
Sri Raghavendra Mahathme: ರಾಯರ ಅಮ್ಮನಾಗಲು ಸಾಫ್ಟ್​ವೇರ್​ ಕೆಲಸ ಬಿಟ್ಟು ಬಂದ ಚೆಲುವೆ ಸ್ಟೋರಿ ಇದು!
Recommended image2
ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​: 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved