ಪ್ರಿಯಾಂಕ ಉಪೇಂದ್ರ ಮನೆಯಲ್ಲಿ ಅದ್ದೂರಿ ವರಮಹಾಲಕ್ಷ್ಮಿ ಪೂಜೆ
ಸ್ಯಾಂಡಲ್ ವುಡ್ ಜನಪ್ರಿಯ ಜೋಡಿಗಳಾದ ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಯಿತು.

ಇಂದು ಎಲ್ಲೆಡೆ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಜನರು ಸಡಗರ ಸಂಭ್ರಮದಿಂದ ಹಬ್ಬಕ್ಕೆ ತಯಾರಿ ಮಾಡಿ ಆಚರಿಸುತ್ತಿದ್ದಾರೆ. ಹೆಂಗಳೆಯರು ಹೊಸ ಸೀರೆ, ಬಳೆ ಧರಿಸಿ ಲಕ್ಷ್ಮೀ ಪೂಜೆ ಮಾಡಿ ಸಂಭ್ರಮಿಸುತ್ತಿದ್ದಾರೆ.
ಚಂದನವನದ ತಾರೆಯರು ಸಹ ತಮ್ಮ ಮನೆಯಲ್ಲಿ ಹಬ್ಬವನ್ನು ಜೋರಾಗಿಯೇ ಆಚರಿಸುತ್ತಿದ್ದಾರೆ. ಸ್ಯಾಂಡಲ್ವುಡ್ ಸ್ಟಾರ್ ಜೋಡಿಗಳಾದ ಪ್ರಿಯಾಂಕಾ ಹಾಗೂ ಉಪೇಂದ್ರ ತಮ್ಮ ಮನೆಯಲ್ಲಿ ಹಬ್ಬವನ್ನು ಸಿಕ್ಕಾಪಟ್ಟೆ ಜೋರಾಗಿಯೇ ಆಚರಿಸಿದ್ದಾರೆ.
ಪ್ರಿಯಾಂಕಾ ಉಪೇಂದ್ರ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಿದ್ದಾರೆ. ಪ್ರಿಯಾಂಕ ಪೂಜೆಯ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಅವರು ಬೆಂಗಾಲಿಯಾಗಿದ್ದರು, ಮದುವೆಯಾದ ಬಳಿಕ ಗಂಡನ ಮನೆಯ ಎಲ್ಲಾ ಶಾಸ್ತ್ರ ಸಂಪ್ರದಾಯಗಳನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ. ಪ್ರತಿಯೊಂದು ಹಬ್ಬವನ್ನು ಸಹ ಪ್ರಿಯಾಂಕಾ ಅದ್ಧೂರಿಯಾಗಿಯೇ ಆಚರಿಸುತ್ತಾರೆ.
ಇತ್ತೀಚೆಗೆ ನಾಗರಪಂಚಮಿ ಹಬ್ಬವನ್ನ ಸಹ ಮನೆಮಂದಿ ಸೇರಿ ಅದ್ಧೂರಿಯಾಗಿ ಆಚರಿಸಿದ್ದಾರೆ. ನವರಾತ್ರಿ ಸಮಯದಲ್ಲೂ ಸಹ ಪ್ರಿಯಾಂಕ ಕಾಳಿ ದೇವಿ ಪೂಜೆ ಮಾಡುತ್ತಾರೆ.
ಹಬ್ಬದ ಸಂಭ್ರಮಕ್ಕೆ ಪ್ರಿಯಾಂಕ ಹಸಿರು ಮತ್ತು ಕೆಂಪು ಬಣ್ಣದ ಸೀರೆ ಜೊತೆಗೆ ಆಭರಣಗಳನ್ನು ಧರಿಸಿ ಲಕ್ಷ್ಮೀ ದೇವಿಯಂತೆ ಮಿಂಚಿದರೆ, ಉಪೇಂದ್ರ ಪಂಚೆ ಶಲ್ಯ ಧರಿಸಿದ್ದರು. ಇಬ್ಬರು ಜೊತೆಯಾಗಿ ಕುಳಿತು ಪೂಜೆ ಮಾಡಿದ್ದಾರೆ.
ಪ್ರಿಯಾಂಕಾ ಹಾಗೂ ಉಪೇಂದ್ರ ಇಬ್ಬರೂ ಕೂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಿಯಾಂಕಾ ತಿಮರೋ2 ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಇನ್ನು ಉಪೇಂದ್ರ ಅರ್ಜುನ್ ಜನ್ಯ ಅವರ 45 ಸಿನಿಮಾದಲ್ಲಿ ಶಿವರಾಜಕುಮಾರ್ ಹಾಗೂ ರಾಜ್ ಬಿ ಶೆಟ್ಟಿ ಜೊತೆ ನಟಿಸುತ್ತಿದ್ದಾರೆ.