MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಉಪೇಂದ್ರ ಚಿತ್ರ ನೋಡಿ, ಒಂದು ಕೋಟಿ ಗೆಲ್ಲಿ: ವೀಕ್ಷಕರಿಗೆ ಭರ್ಜರಿ ಆಫರ್​- ಯಾವಾಗ, ಹೇಗೆ?

ಉಪೇಂದ್ರ ಚಿತ್ರ ನೋಡಿ, ಒಂದು ಕೋಟಿ ಗೆಲ್ಲಿ: ವೀಕ್ಷಕರಿಗೆ ಭರ್ಜರಿ ಆಫರ್​- ಯಾವಾಗ, ಹೇಗೆ?

ನಟ ಉಪೇಂದ್ರ ಅವರ 1999ರ 'ಉಪೇಂದ್ರ'  ಸಿನಿಮಾವು ಜೂನ್ 4 ರಂದು ಮರು-ಬಿಡುಗಡೆಯಾಗುತ್ತಿದೆ. ಈ ವಿಶೇಷ ಪ್ರದರ್ಶನದ ಅಂಗವಾಗಿ, ಸಿನಿಮಾ ವೀಕ್ಷಿಸಿ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಅದೃಷ್ಟಶಾಲಿ ಪ್ರೇಕ್ಷಕರಿಗೆ ಒಂದು ಕೋಟಿ ರೂಪಾಯಿ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ. ಡಿಟೇಲ್ಸ್​ ​ ಇಲ್ಲಿದೆ.

2 Min read
Author : Suchethana D
Published : May 13 2026, 12:36 PM IST
Share this Photo Gallery
  • FB
  • TW
  • Linkdin
  • Whatsapp
16
ಉಪೇಂದ್ರ ಅವರ ಉಪೇಂದ್ರ ಸಿನಿಮಾ
Image Credit : Social Media

ಉಪೇಂದ್ರ ಅವರ ಉಪೇಂದ್ರ ಸಿನಿಮಾ

ನಟ ಉಪೇಂದ್ರ ಅವರ ಸಿನಿಮಾ ಅಂದ್ರೆ ಅದರಲ್ಲಿ ಹೆಚ್ಚಿನವು ವೀಕ್ಷಕರ ತಲೆಗೆ ಹುಳು ಬಿಡುವುದೇ ಆಗಿದೆ. ರಾಜಕೀಯ ಪಕ್ಷ ಕಟ್ಟಿದ್ರೂ ಅಲ್ಲಿನ್ನೂ ಸಕ್ಸಸ್​ ಕಾಣದ ಉಪೇಂದ್ರ ಅವರು, ನಟನಾಗಿ ಮಾತ್ರ ಜನಮನದಲ್ಲಿ ಸದಾ ನೆಲೆಸಿರುತ್ತಾರೆ. ಇದಕ್ಕೆ ಒಂದು ಕಾರಣ ಎಂದರೆ ಇವರ ಕ್ರಿಯೇಟಿವಿಟಿ. ಕೆಲವೊಮ್ಮೆ ಒಮ್ಮೆ ನೋಡಿದ್ರೆ ಅರ್ಥವಾಗಲ್ಲ, ಇದು ಬುದ್ಧಿವಂತರಿಗೆ ಮಾತ್ರ. ಬೇರೆಯವರು ಅನೇಕ ಬಾರಿ ಸಿನಿಮಾ ನೋಡಬೇಕು ಎಂದು ಮೆಸೇಜ್​ ಕೊಟ್ಟು, ಕೆಲವು ವೀಕ್ಷಕರು ಅರ್ಥ ಆಗದಿದ್ದರೂ ಆಗಿದೆ ಎಂದು ಹೇಳುವುದೂ ಉಂಟು. ಅಂಥ ಒಂದು ಕುತೂಹಲ ಕೆರಳಿಸುವ ನಟ ಉಪೇಂದ್ರ.

Add Asianetnews Kannada as a Preferred SourcegooglePreferred
26
ವೀಕ್ಷಕರಿಗೆ ಭರ್ಜರಿ ಆಫರ್​
Image Credit : X

ವೀಕ್ಷಕರಿಗೆ ಭರ್ಜರಿ ಆಫರ್​

ಇದೀಗ ನಟ ಉಪೇಂದ್ರ ಅವರ ಎರಡನೆಯ ಸಿನಿಮಾ ಉಪೇಂದ್ರ ನೋಡುಗರಿಗೆ ಭರ್ಜರಿ ಆಫರ್​ ನೀಡಿದೆ ನಿರ್ಮಾಣ ಸಂಸ್ಥೆ. 1999ರಲ್ಲಿ ರಿಲೀಸ್​ ಆಗಿದ್ದ ಉಪೇಂದ್ರ ಚಿತ್ರವು ಸೈಕಲಾಜಿಕಲ್ ಡ್ರಾಮಾ ಥ್ರಿಲ್ಲರ್ ಆಗಿರುವ ಉಪೇಂದ್ರ ಚಿತ್ರವು ನಟ ಉಪೇಂದ್ರ ಅವರ ಅಭಿನಯ ಹಾಗೂ ನಿರ್ದೇಶನದ ಎರಡನೇ ಸಿ‌ನಿಮಾ ಆಗಿದೆ.

Related Articles

Related image1
ಅಂದು ನಡೆದ ಘಟನೆಯಿಂದ ಆ ನಟನ ಸಿನಿಮಾ ಇಂದಿಗೂ ನೋಡ್ತಿಲ್ಲ ಎಂದ ಯಶ್​: ಯಾರು ಆ ನಟ? ಆಗಿದ್ದೇನು
Related image2
ಅವಕಾಶ ಇದ್ರೆ ಹೇಳಿ ಪ್ಲೀಸ್​: ಬಾಡಿಗೆ ಹಣ ನಂಬಿ ಬದುಕುತ್ತಿರುವೆ- ನೋವು ತೋಡಿಕೊಂಡ ನಟ ದಿಗಂತ್​
36
ಒಂದು ಕೋಟಿ ಬಹುಮಾನ
Image Credit : Social Media

ಒಂದು ಕೋಟಿ ಬಹುಮಾನ

ಇಶ್​ ಮೈರಾ ಪ್ರೊಡ್ಯೂಸರ್​ ಕಂಪೆನಿ ಅಡಿಯಲ್ಲಿ ಪರಮೇಶ್ವರ್ ಬಿ ಅವರು ಇದೀಗ ವೀಕ್ಷಕರಿಗೆ ಕೋಟಿ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ. ಆಸಾಧ್ಯ ಅನ್ನೋದನ್ನು ಸಾಧ್ಯ ಮಾಡ್ತೀವಿ ಎಂದು ಹೇಳುವ ಮೂಲಕ ಇಂಥದ್ದೊಂದು ಆಫರ್​ ಕೊಟ್ಟಿದ್ದಾರೆ. ಉಪೇಂದ್ರ ಸಿನಿಮಾ ನಿರ್ಮಾಪಕರಾದ ಶಿಲ್ಪಾ ಶ್ರೀನಿವಾಸ್ ಅವರ ಅನುಮತಿ ಮೇರೆಗೆ ಇಂಥದ್ದೊಂದು ಸಾಹಸಕ್ಕೆ ಕೈಹಾಕಲಾಗಿದೆ.

46
ಉಪೇಂದ್ರ ರೀ ರಿಲೀಸ್​
Image Credit : others

ಉಪೇಂದ್ರ ರೀ ರಿಲೀಸ್​

ಅಷ್ಟಕ್ಕೂ ಈ ಸಿನಿಮಾವನ್ನು ಇದೀಗ ರೀ ರಿಲೀಸ್​ (Upendra Movie Re- Release) ಮಾಡಲಾಗುತ್ತಿದೆ. ಜೂನ್​ 4ರಂದು ಸದ್ಯ ಡೇಟ್​ ಫಿಕ್ಸ್​ ಆಗಿದೆ. ಈ ಸಿನಿಮಾ ರಾಜ್ಯಾದ್ಯಂತ ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿಂಗಲ್ ಸ್ಕ್ರೀನ್ ಗಳಲ್ಲಿ ಮಾತ್ರ ರಿಲೀಸ್​ ಮಾಡಲು ನಿರ್ಧರಿಸಲಾಗಿದೆ.

56
ಒಂದು ಕೋಟಿ ಗೆಲ್ಲುವ ಅವಕಾಶ
Image Credit : Asianet News

ಒಂದು ಕೋಟಿ ಗೆಲ್ಲುವ ಅವಕಾಶ

ಮುಂದಿನದ್ದೇ ಇರುವುದು ಕುತೂಹಲ. ಸಿನಿಮಾ ನೋಡಿ ಮುಗಿದ ಮೇಲೆ ಪ್ರತಿ ಥಿಯೇಟರ್ ನಲ್ಲಿ 10 ನಿಮಿಷ ಪ್ರಶ್ನೋತ್ತರ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ‌ಸರಿಯಾದ ಉತ್ತರ ನೀಡಿದವರಿಗೆ ಆ ಶೋನ‌ ಸಂಪೂರ್ಣ ಕಲೆಕ್ಷನ್ ದುಡ್ಡನ್ನು ಬಹುಮಾನವಾಗಿ ನೀಡಲಾಗುತ್ತದೆ ಎನ್ನುವುದು ಯೋಜನೆ. ಇಷ್ಟ್ಏ ಅಲ್ಲದೇ, ಈ ಸಿನಿಮಾ ಪ್ರದರ್ಶನದ 25ನೇ ದಿನ ಅದೇ ರೀತಿ ಉತ್ತರ ನೀಡಿದ ಒಬ್ಬ ಪ್ರೇಕ್ಷಕನಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಆಯೋಜಕ ಪರಮೇಶ್ವರ್ ಬಿ ಹೇಳಿದ್ದಾರೆ.

66
ಏನಿದರ ಉದ್ದೇಶ?
Image Credit : Zee Kannada FB

ಏನಿದರ ಉದ್ದೇಶ?

ಇಂಥದ್ದೊಂದು ಯೋಜನೆ ಸ್ಯಾಂಡಲ್​ವುಡ್​ ಇತಿಹಾಸದಲ್ಲಿಯೇ ಹೊಸತು. ಸಿನಿಮಾ ಥಿಯೇಟರ್​ನಿಂದ ವಿಮುಖರಾಗ್ತಿರೋ ಜನರಿಗೆ ಕನ್ನಡ ಸಿನಿಮಾ ಇತಿಹಾಸ ಮತ್ತು ಸಾಧನೆಯನ್ನು ತಿಳಿಸುವುದು, ಹೊಸ ಅಲೆಯ ಸಿನಿಮಾ ಮೇಕರ್​ಗಳನ್ನು ಹಾಗೇ ಪ್ರೇಕ್ಷಕರನ್ನು ಪ್ರೋತ್ಸಾಹಿಸುವುದು ಹಾಗೂ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತಂದು ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳನ್ನು ಉಳಿಸಿಕೊಳ್ಳುವುದು. ಸಿನಿಮಾಗಳಿಲ್ಲದ ಬರಗಾಲದಲ್ಲಿ ಥಿಯೇಟರ್​ಗಳಿಗೆ ಸಿನಿಮಾಗಳನ್ನು ಪೂರೈಸುವುದಾಗಿದೆ ಎಂದು ಪರಮೇಶ್ವರ್​ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಉಪೇಂದ್ರ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ

Latest Videos
Recommended Stories
Recommended image1
16 ವರ್ಷದ ಬಳಿಕ ಸಿಕ್ಕಿತ್ತು ಸಕ್ಸಸ್; ಅಂಬರೀಶ್ ಮಾತು ನೆನೆದು ಭಾವುಕರಾಗಿದ್ರು ದಿಲೀಪ್ ರಾಜ್
Recommended image2
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ಹಿಟ್ಲರ್ ಕಲ್ಯಾಣ ಖ್ಯಾತಿಯ ದಿಲೀಪ್ ರಾಜ್ ನಿಧನ
Recommended image3
ನೀನಿಲ್ಲದೆ 12 ವರ್ಷ… ‘ಶೃಂಗಾರ ಕಾವ್ಯ’ ನಟ ರಘುವೀರ್ ನೆನೆದು ಭಾವುಕರಾದ ಪುತ್ರಿ ಮೋಕ್ಷ
Related Stories
Recommended image1
ಅಂದು ನಡೆದ ಘಟನೆಯಿಂದ ಆ ನಟನ ಸಿನಿಮಾ ಇಂದಿಗೂ ನೋಡ್ತಿಲ್ಲ ಎಂದ ಯಶ್​: ಯಾರು ಆ ನಟ? ಆಗಿದ್ದೇನು
Recommended image2
ಅವಕಾಶ ಇದ್ರೆ ಹೇಳಿ ಪ್ಲೀಸ್​: ಬಾಡಿಗೆ ಹಣ ನಂಬಿ ಬದುಕುತ್ತಿರುವೆ- ನೋವು ತೋಡಿಕೊಂಡ ನಟ ದಿಗಂತ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved