- Home
- Entertainment
- Sandalwood
- Happy Birthday Shivarajkumar: 60ನೇ ವಯಸ್ಸಿಗೆ ಕೈಯಲ್ಲಿ 10 ಸಿನಿಮಾಗಳಿರುವ ಹ್ಯಾಟ್ರಿಕ್ ಹೀರೋ!
Happy Birthday Shivarajkumar: 60ನೇ ವಯಸ್ಸಿಗೆ ಕೈಯಲ್ಲಿ 10 ಸಿನಿಮಾಗಳಿರುವ ಹ್ಯಾಟ್ರಿಕ್ ಹೀರೋ!
ನಾಗರಾಜ ಶಿವಪುಟ್ಟಸ್ವಾಮಿ 60 ವರ್ಷ ಪೂರೈಸಿದ್ದಾರೆ. ಎರಡು ವರ್ಷ ಫ್ರೀ ಇಲ್ಲದಷ್ಟು ಸಿನಿಮಾ ಮಾಡುತ್ತಿರುವ ಏಕೈಕಾ ನಟ....

ವೇದಾ: ಗೀತಾ ಪಿಕ್ಚರ್ಸ್‌ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದ್ದು. ಇದು ಶಿವಣ್ಣ ಅವರ 125ನೇ ಸಿನಿಮಾ. ಹರ್ಷ ಮಾಸ್ಟರ್ ಮತ್ತೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನ ಮತ್ತು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಸಿನಿಮಾಗೆ ಸಹಿ ಮಾಡಿದ್ದಾರೆ ಆದರೆ ಹೆಸರು ರಿವೀಲ್ ಮಾಡಿಲ್ಲ.
45 - ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿ ಶಿವಣ್ಣ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರಕ್ಕೆ 45 ಎಂದು ಹೆಸರಿಟ್ಟಿದ್ದಾರೆ.
ಅಶ್ವತ್ಥಾಮ -ಸೈಕಲಾಜಿಕಲ್ ಥ್ರಿಲರ್ ಸಿನಿಮಾ ಇದಾಗಿದ್ದು ಸಚಿನ್ ನಿರ್ದೇಶನ ಮಾಡಲಿದ್ದಾರೆ. ನಿರ್ಮಾಪಕರು ಯಾರೆಂದು ಕೊಂಚ ಗೊಂದಲವಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಅಥವಾ ಅನೂಪ್ ಭಂಡಾರಿ ನಾ ಎಂದು ನೋಡಬೇಕಿದೆ.
ಡಿಫರೆಂಟ್ ಡೈರೆಕ್ಟರ್ ಶ್ರೀನಿ ನಿರ್ದೇಶನ ಮಾಡುತ್ತಿರುವ ಫೋಸ್ಟ್ ಸಿನಿಮಾದಲ್ಲಿ ಶಿವಣ್ಣ ಅಭಿನಯಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಪಾತ್ರವನ್ನು ಸಸ್ಪೆನ್ಸ್ ಆಗಿಟ್ಟಿದ್ದಾರೆ.
ಸುಯೋಧನ - ಈ ಸಿನಿಮಾವನ್ನು ಶಿವಣ್ಣ ಸಹಿ ಮಾಡಿರುವುದಾಗಿ ತಿಳಿದು ಬಂದಿದೆ. ನಿರ್ದೇಶಕ, ನಿರ್ಮಾಪಕರು ಮತ್ತು ಚಿತ್ರತಂಡದ ಮಾಹಿತಿಯನ್ನು ರಿವೀಲ್ ಮಾಡಿಲ್ಲ.
ಕೊಟ್ರೀಶ್ ಕುಮಾರ್ ನಿರ್ದೇಶನ ಸಿನಿಮಾ ಒಂದಿದೆ ಆನಂತರ ತಮಿಳು ಸಿನಿಮಾ ಜೈಲರ್. ಇತ್ತೀಚಿಗೆ ತಲೈವ ರಜನಿಕಾಂತ್ ಅವರ 169ನೇ ಸಿನಿಮಾ ಕೂಡ ಸಹಿ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.