ಗೋವಾದಲ್ಲಿ ದೀಪಾವಳಿ ಎಂಜಾಯ್ ಮಾಡುತ್ತಿರುವ ಅಮಲಾ ಪೌಲ್; 'ಇದು ಹಬ್ಬದ ಬಟ್ಟೆ ನಾ?'
ಗೋವಾದಿಂದ ಅಭಿಮಾನಿಗಳಿಗೆ ಹಬ್ಬದ ಶುಭಕೋರಿ ಟ್ರೋಲ್ ಆದ ಹೆಬ್ಬುಲಿ ನಟಿ ಅಮಲಾ ಪೌಲ್

ಹೆಬ್ಬುಲಿ (Hebbuli) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಟ ಅಮಲಾ ಪೌಲ್ (Amala Paul) ಸದ್ಯ ಗೋವಾದಲ್ಲಿದ್ದಾರೆ.
ಗೋವಾದಲ್ಲಿ (Goa) ಹಾಲಿಡೆ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
'ದೀಪಗಳ ಹಬ್ಬ ನಿಮ್ಮ ಜೀವದಲ್ಲಿ ಶ್ರೇಯಸ್ಸು, ಐಶ್ವರ್ಯ ಹಾಗೂ ಆರೋಗ್ಯ ಕೊಡಲಿ. ಇದು ವರ್ಷಗಳಿಂದ ತಲೆ ಮಾರುಗಳಿಂದ ಶುಭ ಕೋರುವುದು ಹೀಗೆಯೇ' ಎಂದು ಅಮಲಾ ಬರೆದುಕೊಂಡಿದ್ದಾರೆ.
'ಶುಭ ಕೋರುವ ರೀತಿ ಬದಲಾಗಿಲ್ಲ ಆದರೆ ಜನರ ಸ್ಟ್ಯಾಂಡರ್ಸ್ ಬದಲಾಗಿದೆ, ರೀತಿ ನೀತಿಗಳು ಬದಲಾಗಿದೆ, ಇಡೀ ವಿಶ್ವವೇ ಬದಲಾಗಿದೆ' ಎಂದಿದ್ದಾರೆ ಅಮಲಾ.
'ಈ ಎರಡು ವರ್ಷಗಳಲ್ಲಿ ನಾವು ಕಳೆದುಕೊಂಡಿರುವ ಜೀವಗಳ ಬಗ್ಗೆ ಸಹಾನುಭೂತಿಯುಳ್ಳ ವ್ಯಕ್ತಿಗಳಾಗೋಣ. ಅವರ ಜೀವನಕ್ಕೆ ಮತ್ತೆ ಬೆಳಕು ತರುವ ಕೆಲಸ ಮಾಡೋಣ' ಎಂದು ಬರೆದಿದ್ದಾರೆ.
ಹಳದಿ ಬಣ್ಣದ (Yellow Outfit) ಮಾಡ್ರನ್ ಜಮ್‌ಸೂಟ್ ಧರಿಸಿರುವ ಅಮಲಾ ಲುಕ್ ಬಗ್ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಹಬ್ಬದ ದಿನವೂ ನೀವು ಈ ರೀತಿ ಅಲಂಕಾರ ಮಾಡಿಕೊಳ್ಳಬೇಕಾ? ಹಬ್ಬದ ದಿನ ಮನೆಯಲ್ಲಿ ಮಹಾಲಕ್ಷ್ಮಿ ರೀತಿ ಇರಲು ಏನು ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.