- Home
- Entertainment
- Sandalwood
- ಕಿರುತೆರೆಯಿಂದ ಹಿರಿತೆರೆಗೆ ಬಂದ ರಾಕಿಂಗ್ ಸ್ಟಾರ್ ಯಶ್ ನನಗೆ ಸ್ಫೂರ್ತಿ: ನಿಹಾರ್ ಮುಖೇಶ್
ಕಿರುತೆರೆಯಿಂದ ಹಿರಿತೆರೆಗೆ ಬಂದ ರಾಕಿಂಗ್ ಸ್ಟಾರ್ ಯಶ್ ನನಗೆ ಸ್ಫೂರ್ತಿ: ನಿಹಾರ್ ಮುಖೇಶ್
ತೀರ್ಥರೂಪ ತಂದೆಯವರಿಗೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ವೇಳೆ ನಿಹಾರ್, ಕಿರುತೆರೆಯಿಂದ ಸಿನಿಮಾರಂಗಕ್ಕೆ ಬಂದು ದೊಡ್ಡ ಹೆಸರು ಮಾಡಿರುವ ಯಶ್ ನನ್ನಂಥವರಿಗೆ ಸ್ಫೂರ್ತಿ. ಪೃಥ್ವಿ ಎಂಬ ಪಾತ್ರ ನನ್ನ ವೀಕ್ಷಕರಿಗೂ ಇಷ್ಟವಾಗುವಂತಿದೆ ಎಂದರು.

ಸ್ಯಾಂಡಲ್‌ವುಡ್‌ಗೆ ಎಂಟ್ರಿ
ತೆಲುಗಿನ ‘ಗುಪ್ಪೆಡಂತ ಮನಸು’ ಸೀರಿಯಲ್ ಮೂಲಕ ಜನಪ್ರಿಯರಾದ ಕನ್ನಡಿಗ ನಿಹಾರ್ ಮುಖೇಶ್ ಇದೀಗ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ.
ಯಶ್ ನನ್ನಂಥವರಿಗೆ ಸ್ಫೂರ್ತಿ
ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ವೇಳೆ ನಿಹಾರ್, ‘ಕಿರುತೆರೆಯಿಂದ ಸಿನಿಮಾರಂಗಕ್ಕೆ ಬಂದು ದೊಡ್ಡ ಹೆಸರು ಮಾಡಿರುವ ಯಶ್ ನನ್ನಂಥವರಿಗೆ ಸ್ಫೂರ್ತಿ. ಈ ಸಿನಿಮಾದಲ್ಲಿನ ಪೃಥ್ವಿ ಎಂಬ ಪಾತ್ರ ನನ್ನ ಸೀರಿಯಲ್ ವೀಕ್ಷಕರಿಗೂ ಇಷ್ಟವಾಗುವಂತಿದೆ’ ಎಂದರು.
ಕಥೆಗಳಲ್ಲಿ ಜೀವ ತುಂಬುತ್ತೇನೆ
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್, ‘ಸುತ್ತಲಿನ ಪಾತ್ರಗಳು ನನ್ನನ್ನು ಚಿಂತನೆಗೆ ಹಚ್ಚುತ್ತವೆ. ಅವುಗಳಿಗೆ ಕಥೆಗಳಲ್ಲಿ ಜೀವ ತುಂಬುತ್ತೇನೆ. ಈ ಸಿನಿಮಾದಲ್ಲಿ ಪೃಥ್ವಿ ಎಂಬ ಪಾತ್ರದ ಹುಡುಕಾಟವೇ ಪ್ರಧಾನ. ಡಿವಿಜಿ ಅವರ ‘ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು’ ಎಂಬ ಮಾತೇ ಸಿನಿಮಾದ ತಿರುಳು’ ಎಂದರು.
ನನ್ನ ಪಾತ್ರ ಫುಲ್ ತೀರ್ಥ ತಗೊಳ್ಳೋದು
ರಾಜೇಶ್ ನಟರಂಗ, ‘ತೀರ್ಥರೂಪ ತಂದೆಯವರಿಗೆ ಸಿನಿಮಾದಲ್ಲಿ ನನ್ನ ಪಾತ್ರ ಫುಲ್ ತೀರ್ಥ ತಗೊಳ್ಳೋದು. ಜೊತೆಯಾಗಿರುವ ಗಂಡು ಹೆಣ್ಣಿಗೆ ಸಮಾಜ ಅನೇಕ ಬಣ್ಣ ಹಚ್ಚುತ್ತದೆ. ನಿಜವಾಗಿ ಆ ಸಂಬಂಧ ಏನಿರಬಹುದು ಎಂಬ ಸಂಕೀರ್ಣತೆಯಲ್ಲಿ ಕಥೆ ನಡೆಯುತ್ತದೆ’ ಎಂದರು.
ರಚನಾ ಇಂದರ್ ನಾಯಕಿ
ಚಿತ್ರದ ತಾರಾಗಣದಲ್ಲಿ ಹಿರಿಯ ನಟಿ ಸಿತಾರ ಮುಖ್ಯಪಾತ್ರದಲ್ಲಿದ್ದಾರೆ. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ನಾಯಕಿ. ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ಈ ಸಿನಿಮಾ ನಿರ್ಮಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

