ಭಾರತೀಯ ಸೇನೆಯ ಕಥೆ ಹೇಳುವ ಕನ್ನಡದ ಸೂಪರ್ ಹಿಟ್ ಸಿನಿಮಾಗಳು
Kannada Movies: ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ತೋರಿಸಬಹುದಾದ ಭಾರತೀಯ ಸೇನೆಯ ಕಥಾವಸ್ತುವನ್ನು ಹೊಂದಿರುವ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ. ಮುತ್ತಿನಹಾರ, ಸೈನಿಕ, ಸಾರ್ವಭೌಮ, ಮತ್ತೆ ಮುಂಗಾರು ಸೇರಿದಂತೆ ಹಲವು ಸಿನಿಮಾಗಳನ್ನು ಈ ಪಟ್ಟಿ ಒಳಗೊಂಡಿದೆ.

ಭಾರತೀಯ ಸೇನೆಯ ಕಾರ್ಯಾಚರಣೆ ಹೇಗಿರುತ್ತೆ ಎಂಬುದನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ಆದ್ರೆ ಸಿನಿಮಾಗಳಲ್ಲಿ ಸೇನೆಯ ಕಾರ್ಯಾಚರಣೆಯ ದೃಶ್ಯಗಳನ್ನು ಮರುಸೃಷ್ಟಿ ಮಾಡಲಾಗಿರುತ್ತದೆ. ಕನ್ನಡದಲ್ಲಿಯೂ ಇಂತಹ ಹಲವು ಸಿನಿಮಾಗಳು ಬಂದಿವೆ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಈ ಸಿನಿಮಾಗಳನ್ನು ತೋರಿಸಿ.
1.ಮುತ್ತಿನಹಾರ
1990ರಲ್ಲಿ ಬಿಡುಗಡೆಯಾದ ಮುತ್ತಿನ ಹಾರ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ಸುಹಾಸಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಭಾರತೀಯ ಸೇನೆಯ ಸೈನಿಕ ಅಚ್ಚಪ್ಪನ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದಾರೆ. ಅಚ್ಚಪ್ಪ ಯುದ್ದದ ಸನ್ನಿವೇಶದಲ್ಲಿ ವೈರಿ ಸೇನೆಯಿಂದ ಬಂಧನಕ್ಕೊಳಗಾಗುತ್ತಾರೆ. ಅಚ್ಚಪ್ಪ ಭಾರತಕ್ಕೆ ಹಿಂದಿರುಗುತ್ತಾರಾ? ಈ ಸಂದರ್ಭ ಅವರ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.
2.ಸೈನಿಕ
ಸಿ.ಪಿ.ಯೋಗೇಶ್ವರ್ ನಟನೆಯ ಸೈನಿಕ ಸಿನಿಮಾ ನೋಡುಗರಲ್ಲಿ ದೇಶಭಕ್ತಿಯನ್ನು ಹೆಚ್ಚಿಸುತ್ತದೆ. ಚಿತ್ರದ ಯುದ್ಧದ ಸನ್ನಿವೇಶಗಳನ್ನು ಅತ್ಯದ್ಭುತವಾಗಿ ತೋರಿಸಲಾಗಿದೆ. ಓರ್ವ ಸೈನಿಕನ ಜೀವನ ಹೇಗಿರುತ್ತೆ ಎಂದು ತಿಳಿದುಕೊಳ್ಳಲು ಈ ಸಿನಿಮಾ ನೋಡಬಹುದು. ಈ ಚಿತ್ರ 2002ರಲ್ಲಿ ಬಿಡುಗಡೆಯಾಗಿತ್ತು. ಸಿ.ಪಿ.ಯೋಗಿಶ್ವರ್, ಸಾಕ್ಷಿ ಶಿವಾನಂದ್, ದೊಡ್ಡಣ್ಣ, ಟೆನಿಸ್ ಕೃಷ್ಣ,,ಸೋನಾಲಿ, ವಸುಮಾಲಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
3.ಸಾರ್ವಭೌಮ
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಸಾರ್ವಭೌಮ' ಸಿನಿಮಾದಲ್ಲಿಯೂ ಭಾರತೀಯ ಸೇನೆಯ ಕಥಾ ಹಂದರವನ್ನು ಒಳಗೊಂಡಿದೆ. ಪಾಕಿಸ್ತಾನ ತನ್ನ ವಶದಲ್ಲಿರುವ ಭಾರತದ ಸೈನಿಕರನ್ನು ಹೇಗೆ ನಡೆಸಿಕೊಳ್ಳಲಾಗುತ್ತೆ ಎಂಬುದನ್ನು ತೋರಿಸಲಾಗಿದೆ. 2004ರಲ್ಲಿ ಸಾರ್ವಭೌಮ ಸಿನಿಮಾ ಬಿಡುಗಡೆಗೊಂಡಿತ್ತು.
4.ಮತ್ತೆ ಮುಂಗಾರು
ದ್ವಾರಕಿ ನಿರ್ದೇಶಿಸಿದ ಮತ್ತು ಇ. ಕೃಷ್ಣಪ್ಪ ನಿರ್ಮಾಣದ ಸಿನಿಮಾ ಮತ್ತೆ ಮುಂಗಾರು ನಿಮಗೆ ವೈರಿ ದೇಶದ ನೀಚತನವನ್ನು ತೋರಿಸುತ್ತದೆ. ಪಾಕಿಸ್ತಾನದಲ್ಲಿ 21 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಾರಾಯಣ ಮಂದಗದ್ದೆಯ ನಿಜ ಜೀವನದ ಕಥೆಯನ್ನು ಈ ಸಿನಿಮಾ ಹೊಂದಿದೆ. ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ 2010ರಲ್ಲಿ ಬಿಡುಗಡೆಯಾಗಿತ್ತು.