ತಾರಾ ಮನೆಯ ಗೆಟ್ ಟುಗೆದರ್ ಪಾರ್ಟಿಯಲ್ಲಿ ಸುಧಾರಾಣಿ ಮಗಳು ಮಿಂಚಿದ್ದು ಹೇಗೆ?
ಸ್ಯಾಂಡಲ್‌ವುಡ್‌ನ ಎವರ್ ಗ್ರೀನ್ ನಟಿ ಸುಧಾರಾಣಿ ಸಿನಿಮಾ, ಸೀರಿಯಲ್‌ನಲ್ಲಿ ಎಷ್ಟು ಬ್ಯುಸಿ ಇರ್ತಾರೋ ಫ್ಯಾಮಿಲಿಗೂ ತುಂಬಾನೇ ಸಮಯ ಕೊಡುತ್ತಾರೆ. ಅಮ್ಮನಷ್ಟೇ ಚೆಲುವೆ ಆಗಿರುವ ಸುಧಾರಾಣಿಯ ಮಗಳು ನಿಧಿ ಕೂಡ ಫೇಮಸ್ ಕಲಾವಿದೆ ಆಗಿದ್ದಾರೆ.

ಸ್ಯಾಂಡಲ್‌ವುಡ್‌ನ ಎವರ್ ಗ್ರೀನ್ ನಟಿ ಸುಧಾರಾಣಿ ಸಿನಿಮಾ, ಸೀರಿಯಲ್‌ನಲ್ಲಿ ಎಷ್ಟು ಬ್ಯುಸಿ ಇರ್ತಾರೋ ಫ್ಯಾಮಿಲಿಗೂ ತುಂಬಾನೇ ಸಮಯ ಕೊಡುತ್ತಾರೆ. ಗಂಡ, ಮಗಳೊಟ್ಟಿಗೆ ಸಮಯ ಕಳೆಯುವುದನ್ನು ಮಿಸ್ ಮಾಡುವುದಿಲ್ಲ. ಅದರಲ್ಲೂ ಮಗಳೊಟ್ಟಿಗೆ ಜಾಲಿ ಮಾಡುವುದನ್ನು ಮರೆಯಲ್ಲ. ಹಬ್ಬ ಹರಿದಿನಗಳಲ್ಲಿ ಇಬ್ಬರು ಜೊತೆಯಾಗಿ ಮನೆ ಅಲಂಕಾರ ಮಾಡಿ, ಹಬ್ಬವನ್ನು ಎಂಜಾಯ್ ಮಾಡುತ್ತಾರೆ.
ಇತ್ತಿಚೆಗಷ್ಟೇ ಡಾಕ್ಟರೇಟ್ ಪದವಿ ಪಡೆದ ನಟಿ ತಾರಾ ಅನುರಾಧ ಮನೆಯಲ್ಲಿ ನಡೆದ ಗೆಟ್ ಟು ಗೆದರ್ ಪಾರ್ಟಿ ತಾರೆಯರ ಸಮಾಗಮ ನಡೆದಿದ್ದು, ಕನ್ನಡ ಚಿತ್ರರಂಗದ ಹಿರಿಯ, ಕಿರಿಯ ನಟಿಯರೆಲ್ಲಾ ಆಗಮಿಸಿ ಸಂಭ್ರಮಿಸಿದ್ದರು.
ಈ ಗೆಟ್ ಟು ಗೆದರ್ ಪಾರ್ಟಿಯಲ್ಲಿ ನಟಿ ಸುಧಾರಾಣಿ ಹಾಗೂ ಅವರ ಮಗಳು ನಿಧಿ ಇದ್ದರು. ಈ ವೇಳೆ ಸುಧಾರಾಣಿ ಮಗಳು ನಿಧಿ ರಾವ್ ಹಾಗೂ ನಟಿ ಭಾವನ ರಾವ್ ಗಾಳಿಪಟ ಚಿತ್ರದ ನಧೀಮ್ ಧೀಮ್ ತನ ಹಾಡಿಗೆ ಭರತನಾಟ್ಯ ಡ್ಯಾನ್ಸ್ ಮಾಡಿದ್ದಾರೆ.
ನಿಧಿ ರಾವ್ ಹಾಗೂ ಭಾವನ ರಾವ್ ಮಾಡಿದ ಭರತನಾಟ್ಯ ಡ್ಯಾನ್ಸ್ ನೋಡಿ ಗೆಟ್ ಟು ಗೆದರ್ ಪಾರ್ಟಿಯಲ್ಲಿದ್ದ ತಾರೆಯರೆಲ್ಲ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಸುಧಾರಾಣಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜೊತೆಗೆ ನೆಚ್ಚಿನ ಗೆಳತಿಯರಾದ ಮಾಳವಿಕಾ, ಶೃತಿ ಜೊತೆಗಿನ ಫೋಟೋ ಹಾಗೂ ಹಿರಿಯ ನಟಿ ಜಯಮಾಲಾರನ್ನು ತಬ್ಬಿಕೊಂಡಿರುವ ಫೋಟೋಗಳನ್ನು ಸುಧಾರಾಣಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಅಮ್ಮನಷ್ಟೇ ಚೆಲುವೆ ಆಗಿರುವ ಸುಧಾರಾಣಿಯ ಮಗಳು ನಿಧಿ ಕೂಡ ಫೇಮಸ್ ಕಲಾವಿದೆ ಆಗಿದ್ದಾರೆ. ಸುಧಾರಾಣಿ ಅವರಂತೆಯೇ ನಿಧಿ ಭರತನಾಟ್ಯ ಕಲಾವಿದೆಯಾಗಿದ್ದಾರೆ. ಈಗಾಗಲೇ ರಂಗಪ್ರವೇಶ ಮಾಡಿದ್ದಾರೆ.
ಭರತನಾಟ್ಯ ಮತ್ತು ಸಂಗೀತದಲ್ಲಿ ಪ್ರಾವಿಣ್ಯತೆ ಪಡೆದಿರುವ ನಿಧಿ, ನಟನೆಯಲ್ಲಿಯೂ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಒಳ್ಳೊಳ್ಳೆ ಸಿನಿಮಾ ಆಫರ್ ಬರುತ್ತಿದ್ದು, ಶೀಘ್ರದಲ್ಲೇ ನಟನೆಗೆ ಎಂಟ್ರಿಕೊಡಬಹುದು ಎನ್ನಲಾಗುತ್ತಿದೆ.