- Home
- Entertainment
- Sandalwood
- ಜೀನ್ಸ್ ಟಾಪ್ನಲ್ಲಿ ಸೆಕ್ಸಿಯಾಗಿ ಮಿಂಚಿದ Pranitha: ಮಮ್ಮಿಯಾದ್ರೂ ನೀವು ಹಾಟ್ ಫಿಗರ್ ಎಂದ ಫ್ಯಾನ್ಸ್!
ಜೀನ್ಸ್ ಟಾಪ್ನಲ್ಲಿ ಸೆಕ್ಸಿಯಾಗಿ ಮಿಂಚಿದ Pranitha: ಮಮ್ಮಿಯಾದ್ರೂ ನೀವು ಹಾಟ್ ಫಿಗರ್ ಎಂದ ಫ್ಯಾನ್ಸ್!
ಪೋರ್ಕಿ ಚಿತ್ರದ ಮೂಲಕ ಪ್ರಣಿತಾ ಸುಭಾಷ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಸದ್ಯ ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾರೆ.

ನಟಿ ಪ್ರಣಿತಾ ಸುಭಾಷ್ ಮಾಡ್ರೆನ್ ಡ್ರೆಸ್ನಲ್ಲಿ ಮಿಂಚುತ್ತಿದ್ದು, ಇನ್ಸ್ಟಾಗ್ರಾಮ್ನಲ್ಲಿ ಈ ಬ್ಯೂಟಿಫುಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಜೀನ್ಸ್ ಟಾಪ್ ತೊಟ್ಟ ನಟಿ ಪ್ರಣಿತಾ ಬಣ್ಣದ ಚಿಟ್ಟೆಯಂತೆ ಕಾಣ್ತಿದ್ದಾರೆ. ಮದುವೆಯಾಗಿ ಮಗುವಾದ್ರೂ ನಟಿಯ ಗ್ಲಾಮರ್ ಮಾತ್ರ ಕಡಿಮೆ ಆಗಿಲ್ಲ, ಮಮ್ಮಿಯಾದ್ರೂ ನೀವು ಹಾಟ್ ಫಿಗರ್ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಫೋಟೋಗಳನ್ನು ನೋಡಿದ್ರೆ ಶೀಘ್ರದಲ್ಲೇ ನಟಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವ ಎಲ್ಲ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಪ್ರಣಿತಾ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿಗೆ ಮುದ್ದಾದ ಮಗು ಕೂಡ ಇದೆ. ಸದ್ಯ ಮಗುವಿನ ಲಾಲನೆ-ಪಾಲನೆಯಲ್ಲಿ ನಟಿ ಪ್ರಣಿತಾ ಬ್ಯುಸಿ ಆಗಿದ್ದು, ಮಗುವಿನ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಪ್ರಣಿತಾಗೆ ಒಂದು ಮಗು ಇದ್ದರೂ ಸಹ ತಮ್ಮ ಗ್ಲಾಮರಸ್ ಉಳಿಸಿಕೊಂಡಿದ್ದಾರೆ. ಇವರು ಅಮ್ಮನಾಗಿದ್ದಾರಾ ಎನ್ನುವಂತೆ ಇದ್ದಾರೆ. ವರ್ಕೌಟ್ ಮೂಲಕ ತಮ್ಮ ಫಿಟ್‍ನೆಸ್ ಅನ್ನು ಕಾಯ್ದುಕೊಂಡಿದ್ದಾರೆ.
ನಟಿಗೆ ಸ್ಯಾಂಡಲ್‍ವುಡ್‍ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿ ಎಂದು ಕಾಮೆಂಟ್ ಹಾಕ್ತಾರೆ. ನಟಿ ಎಲ್ಲಾ ಭಾಷೆಯಲ್ಲೂ ಹೆಚ್ಚಿನ ಫ್ಯಾನ್ಸ್ ಹೊಂದಿದ್ದಾರೆ.
ಪ್ರಣಿತಾ ಸುಭಾಷ್ ಸೆನ್ಸೇಷನಲ್ ಕಮೆಂಟ್ ಮಾಡಿ ಕೆಲವೊಮ್ಮೆ ಸುದ್ದಿ ಆಗ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಕೈಗಳಿಗೂ ಸಿಕ್ಕಿದ್ದುಂಟು. ಎನ್‌ಟಿಆರ್ ಮತ್ತು ಕೊರಟಾಲ ಶಿವ ಸಿನಿಮಾದಲ್ಲಿ ಪ್ರಣಿತಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ ಎನ್ನುವ ಸುದ್ದಿ ಕೂಡ ಹರಿದಾಡ್ತಿದೆ.