- Home
- Entertainment
- Sandalwood
- Birthday Girl Gowri: ಮುದ್ದಿನ ಮಗಳು ಗೌರಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ನಟಿ ಶ್ರುತಿ
Birthday Girl Gowri: ಮುದ್ದಿನ ಮಗಳು ಗೌರಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ನಟಿ ಶ್ರುತಿ
ಚಂದನವನದ ಹಿರಿಯ ನಟಿ ಶ್ರುತಿ ಅವರ ಪುತ್ರಿ ಗೌರಿ ಶ್ರುತಿ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಮಗಳಿಗೆ ಶ್ರುತಿ ಮುದ್ದಾಗಿ ಶುಭಾಷಯ ಕೋರಿದ್ದಾರೆ.

ಸ್ಯಾಂಡಲ್ ವುಡ್ ಹಿರಿಯ ನಟಿ ಶ್ರುತಿ (Sandalwood Actress Shruthi) ಅವರ ಪುತ್ರಿ ಗೌರಿ ಶ್ರುತಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇವತ್ತು ಗೌರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಮ್ಮ ಶ್ರುತಿ ಸಂಭ್ರಮದಲ್ಲಿದ್ದಾರೆ.
ಮಗಳ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶ್ರುತಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಮಗಳ ಜೊತೆಗಿನ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದು, ಮಗಳಿಗೆ ವಿಶೇಷವಾಗಿ ಶುಭಾಶಯಗಳನ್ನು (birthday wishes)ತಿಳಿಸಿದ್ದಾರೆ. ಸದ್ಯ ಈ ಫೋಟೊಗಳ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮಗಳನ್ನು ಮುದ್ದು ಮಾಡುತ್ತಿರುವ ಎರಡು ಫೋಟೊಗಳನ್ನು ಶೇರ್ ಮಾಡಿರುವ ಶ್ರುತಿ, ಜನುಮ ದಿನದ ಶುಭಾಶಯಗಳು ಮಗಳೆ, ನಿನ್ನ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಯಶಸ್ಸು ಸಿಗಲಿ, ಹಾಗೆ ಎಲ್ಲರ ಪ್ರೀತಿ, ಆಶೀರ್ವಾದವು ಸಿಗಲಿ, once again happiest bday ಮಗುವೇ ಎಂದು ಬರೆದುಕೊಂಡಿದ್ದಾರೆ.
ಗೌರಿ (Gowri Shruthi) ಹುಟ್ಟುಹಬ್ಬಕ್ಕೆ ಹರ್ಷಿಕಾ ಪೂಣಚ್ಚ, ಮಾಳವಿಕಾ ಅವಿನಾಶ್ ಸೇರಿ ಹಲವು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. ಆದಷ್ಟು ಬೇಗ ಸಿನಿಮಾಗೆ ಎಂಟ್ರಿ ಕೊಡಿ, ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಳ್ಳಿ ಎಂದು ಶುಭ ಹಾರೈಸಿದ್ದಾರೆ.
ಗೌರಿ ಈಗಷ್ಟೇ ತಮ್ಮ ಡಿಗ್ರಿ ಮುಗಿಸಿದ್ದಾರೆ. ಸಿನಿಮಾಕ್ಕೆ ಎಂಟ್ರಿ ಕೊಡದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. ಇನ್’ಸ್ಟಾಗ್ರಾಂನಲ್ಲಿ ತಮ್ಮ ಫೋಟೊಗಳು, ಹಾಡುಗಳನ್ನು ಹಾಡುವ ಮೂಲಕವೇ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಪಡೆದಿದ್ದಾರೆ ಗೌರಿ.
ಗೌರಿ ಶ್ರುತಿ ಸಿನಿಮಾಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಗಾಳಿ ಮಾತು ಹೆಚ್ಚಾಗಿ ಕೇಳಿ ಬರುತ್ತಲೇ ಇರುತ್ತೆ. ಇದರ ಜೊತೆಗೆ ಗೌರಿ ಕೂಡ ಸಿನಿಮಾ ಮಂದಿಯ ಜೊತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಅಮ್ಮ ಶ್ರುತಿ ಜೊತೆ ವಿವಿಧ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಇದಿಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಗೌರಿ ನಾಟಕಗಳಲ್ಲಿ ಸಹ ಅಭಿನಯಿಸಿದ್ದಾರೆ. ಜೊತೆ ಥಿಯೇಟರ್ ಕೂಡ ಕಲಿಯುತ್ತಿದ್ದಾರೆ. ಜೊತೆಗೆ ಜಿಮ್, ವರ್ಕೌಟ್ ಕೂಡ ಮಾಡುತ್ತಿರುತ್ತಾರೆ. ಇದನ್ನ ನೋಡಿದ್ರೆ ಶೀಘ್ರದಲ್ಲೇ ನಟಿ ಚಂದನವನಕ್ಕೆ ಎಂಟ್ರಿ ಕೊಡಲಿದ್ದಾರೆ ಅನ್ನೋದಂತೂ ಗ್ಯಾರಂಟಿ.