ಅಪ್ಪು ಪತ್ನಿ ಅಶ್ವಿನಿ ಮತ್ತು ಮಕ್ಕಳಿಗೆ ಧನ್ಯವಾದ ತಿಳಿಸಿದ ಶಿವರಾಜ್‌ಕುಮಾರ್!
ಗೀತಕ್ಕೆ ನಿರ್ಮಾಣ ಸಂಸ್ಥೆ, ಶಿವಣ್ಣ ಸಿನಿಮಾ ಮೋಷನ್ ಪೋಸ್ಟರ್ ಲಾಂಚ್‌ಗೆ ಸಾಥ್ ಕೊಟ್ಟ ಅಪ್ಪು ಕುಟುಂಬ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆ 125ನೇ ಸಿನಿಮಾ ವೇದಾ ಮೋಷನ್ ಪೋಸ್ಟರ್ ಲಾಂಚ್ ಕಾರ್ಯಕ್ರಮದಲ್ಲಿ ಡಾ. ರಾಜ್‌ಕುಮಾರ್ ಇಡೀ ಕುಟುಂಬ ಭಾಗಿಯಾಗಿತ್ತು.
ವೇದಾ ಚಿತ್ರದ ಮೂಲಕ ಶಿವಣ್ಣ ಪತ್ನಿ ಗೀತಾ ಅವರು ಗೀತಾ ಪಿಕ್ಚರ್ ಹೆಸರಿನ ನಿರ್ಮಾಣ ಸಂಸ್ಥೆಯ ಲೋಗೋ ಅನಾವರಣ ಮಾಡಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ಅಂದು ಗೀತಾ ಅವರ ಹುಟ್ಟುಹಬ್ಬ.
ಸಿನಿಮಾ ಮತ್ತು ಕ್ರಿಕೆಟ್ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಸಂಭ್ರಮಕ್ಕೆ ಡಾ ರಾಜ್‌ಕುಮಾರ್ ಕುಟುಂಬದ ನಾಲ್ಕೂ ಜನರೇಷನ್ ಹಾಜರಿದ್ದಿದ್ದು ಹೈಲೈಟ್.
ವೇದಿಕೆ ಮೇಲಿಂದ ಅಪ್ಪು ನೆನಪು ಮಾಡಿಕೊಂಡ ಶಿವಣ್ಣ ಅಶ್ವಿನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಪ್ಪು ಮಕ್ಕಳನ್ನು ವೇದಿಕೆ ಮೇಲೆ ಬರಲು ಮುದ್ದಾಗಿ ಕರೆದಿದ್ದಾರೆ.
ಕ್ಯಾಮೆರಾದಿಂದ ದೂರ ಉಳಿಯುವ ಅಶ್ವಿನಿ ವೇದಿಕೆ ಮೇಲೆ ಬರಲು ನಿರಾಕರಿಸಿದಕ್ಕೆ ಸ್ವತಃ ಶಿವಣ್ಣನೇ ವೇದಿಕೆಯಿಂದ ಇಳಿದು ವೆಲ್ಕಮ್ ಮಾಡಿದ್ದಾರೆ.
ಸಹೋದರಿ ಪೂರ್ಣಿಮಾ, ಪುತ್ರಿ ಧನ್ಯಾ ರಾಮ್‌ಕುಮಾರ್, ಪುತ್ರ ಧಿರೇನ್ ರಾಮ್, ರಾಘಣ್ಣ ಪುತ್ರ ಯುವರಾಜ್‌ಕುಮಾರ್,ಶಿವಣ್ಣ ಕಿರಿಯ ಪುತ್ರಿ ನಿರ್ಮಾಪಕಿ ನಿವೇದಿತಾ ವೇದಿಕೆ ಮೇಲೆ ಫೋಟೋಗೆ ಒಟ್ಟಿಗೆ ನಿಂತರು.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ವಿಶೇಷ ಗೌರವ ಸಲ್ಲಿಸದೆ ಚಿತ್ರರಂಗದಲ್ಲಿ ಯಾವ ಕೆಲಸವೂ ಆರಂಭವಾಗುವುದಿಲ್ಲ. ಅಪ್ಪಾಜಿ ಅಮ್ಮ ನೆನಪಿನಲ್ಲಿ ಗೀತಾ ಅವರು ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ.