- Home
- Entertainment
- Sandalwood
- ಸಪ್ತಮಿ ಗೌಡ ರೆಸಾರ್ಟ್ 'ಕಾಜಾಣಾ' ಓಪನ್: ವಿಶೇಷತೆಗಳ ಆಗರ- ಫ್ಯಾನ್ಸ್ಗೆ ಆಹ್ವಾನ; ಕ್ಯೂಟ್ ಫೋಟೋಸ್ ಇಲ್ಲಿವೆ
ಸಪ್ತಮಿ ಗೌಡ ರೆಸಾರ್ಟ್ 'ಕಾಜಾಣಾ' ಓಪನ್: ವಿಶೇಷತೆಗಳ ಆಗರ- ಫ್ಯಾನ್ಸ್ಗೆ ಆಹ್ವಾನ; ಕ್ಯೂಟ್ ಫೋಟೋಸ್ ಇಲ್ಲಿವೆ
'ಕಾಂತಾರ' ಖ್ಯಾತಿಯ ನಟಿ ಸಪ್ತಮಿ ಗೌಡ ಮಲೆನಾಡಿನಲ್ಲಿ ಫಾರ್ಮ್‌ಹೌಸ್ ಖರೀದಿಸಿದ್ದಾರೆ. ಇದು ತಮ್ಮ ತಂದೆಯ ಕನಸಿನ ಪ್ರಾಜೆಕ್ಟ್ ಆಗಿದ್ದು, 'ಕಾಜಾಣಾ' ಎಂದು ಹೆಸರಿಡಲಾಗಿದೆ. ಇದರ ಗೃಹಪ್ರವೇಶದ ವಿಡಿಯೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ನಟಿ ಸಪ್ತಮಿ ಗೌಡ
ಕಾಂತಾರ ಸಿನಿಮಾದ ಮೂಲಕ ಭಾರತದಾಚೆಗೂ ಛಾಪು ಮೂಡಿಸಿರುವ ನಟಿ ಸಪ್ತಮಿ ಗೌಡ (Sapthami Gowda). ಸಿನಿಮಾದಲ್ಲಿ ಸಾಕಷ್ಟು ಬಿಜಿ ಇರುವ ನಟಿ ಈಗ ಫಾರ್ಮ್‌ಹೌಸ್ ಒಂದನ್ನು ಖರೀಸಿದ್ದು, ಅದರ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಫಾರ್ಮ್‌ಹೌಸ್, ರೆಸಾರ್ಟ್
ಮಲೆನಾಡಿನ ಮಡಿಲಲ್ಲಿ ಫಾರ್ಮ್‌ಹೌಸ್, ರೆಸಾರ್ಟ್ ಖರೀದಿ ಮಾಡಲಾಗಿದ್ದು, ಇದು ತಮ್ಮ ತಂದೆಯ ಕನಸಿನ ಪ್ರಾಜೆಕ್ಟ್, ಅದಕ್ಕೆ ಈಗ ಕಾಜಾಣಾ ಎಂದು ಹೆಸರು ಇರಿಸಿರುವುದಾಗಿ ನಟಿ ಹೇಳಿದ್ದಾರೆ.
ಗೃಹಪ್ರವೇಶ
ಇದರ ಗೃಹಪ್ರವೇಶ, ಗಣೇಶ ಪ್ರತಿಷ್ಠಾಪನೆ ಎಲ್ಲವೂ ನಡೆಯುತ್ತಿದ್ದು, ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ ನಟಿ. ನಮ್ಮ ಅಪ್ಪನ ಪ್ಯಾಷನ್ ಪ್ರಾಜೆಕ್ಟ್, ಅವರ ಕನಸಿನ ಕೂಸು ಇದು ಎಂದಿದ್ದಾರೆ.
ಆರ್ಕಿಟೆಕ್ಟ್, ಎಂಜಿನಿಯರ್ ಇಲ್ಲ
ಎರಡು ವರ್ಷಗಳಿಂದ ಪ್ರತಿನಿತ್ಯ ಇಲ್ಲಿ ಬಂದು ಕೆಲಸ ಮಾಡಿದ್ದಾರೆ. ಆರ್ಕಿಟೆಕ್ಟ್, ಎಂಜಿನಿಯರ್ ಯಾರೂ ಇಲ್ಲದೇ ಈ ಪ್ರಾಜೆಕ್ಟ್ ಪೂರ್ಣಗೊಳಿಸಿರುವುದು ವಿಶೇಷ ಎಂದಿದ್ದಾರೆ ನಟಿ.
ಎಲ್ಲರಿಗೂ ಆಹ್ವಾನ
ನೀವು ಎಲ್ಲರೂ ಇಲ್ಲಿಗೆ ಬರಬಹುದು ಎಂದು ಇದೇ ವೇಳೆ ನಟಿ ಹಾಗೂ ಸಹೋದರಿ ಆಹ್ವಾನ ಕೊಟ್ಟಿದ್ದಾರೆ.
ನಟಿಯ ಕುರಿತು
ಇನ್ನು ನಟಿಯ ಕುರಿತು ಹೇಳುವುದಾದರೆ, ಇವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್. ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಸಪ್ತಮಿ, ಉತ್ತಮ ಈಜುಗಾರ್ತಿ ಕೂಡ ಹೌದು. ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ ಈಜುಗಾರ್ತಿಯಾಗಿದ್ದ ಸಪ್ತಮಿ, ನ್ಯಾಷನಲ್ ಲೆವೆನ್‌ನಲ್ಲೂ ಭಾಗವಹಿಸಿದ್ದರು. ಇವರು 2020ರಲ್ಲಿ ತೆರೆಕಂಡ ಡಾಲಿ ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮೊದಲ ಸಿನಿಮಾ ತೆರೆಕಂಡ ಎರಡು ವರ್ಷಗಳ ಬಳಿಕ ಸಪ್ತಮಿ 2022ರಲ್ಲಿ 'ಕಾಂತಾರ' ಸಿನಿಮಾದಲ್ಲಿ ನಟಿಸಿದರು. ಚಿತ್ರದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರದ ಮೂಲಕ ಗಮನ ಸೆಳೆದರು. ನಂತರ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್ ವಾರ್' ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಯುವ ಸಿನಿಮಾದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

