- Home
- Entertainment
- Sandalwood
- 'ಎರಡು ಪ್ಲೇಟ್ ದೋಸೆ' ಲುಕ್‌ನಲ್ಲಿ ಮಿಂಚಿದ 'ಪುಟ್ಟಗೌರಿ': ಇಲ್ಲಿವೆ ಸಾನ್ಯ ಅಯ್ಯರ್ ಬೋಲ್ಡ್ ಪೋಟೋಸ್
'ಎರಡು ಪ್ಲೇಟ್ ದೋಸೆ' ಲುಕ್‌ನಲ್ಲಿ ಮಿಂಚಿದ 'ಪುಟ್ಟಗೌರಿ': ಇಲ್ಲಿವೆ ಸಾನ್ಯ ಅಯ್ಯರ್ ಬೋಲ್ಡ್ ಪೋಟೋಸ್
Sanya Iyer: 'ಬಿಗ್ ಬಾಸ್ ಕನ್ನಡ' ಖ್ಯಾತಿಯ ಸಾನ್ಯ ಅಯ್ಯರ್ 'ಎರಡು ಪ್ಲೇಟ್ ದೋಸೆ' ರ್ಯಾಪ್ ಸಾಂಗ್ ಬಿಡುಗಡೆಯಾಗಿ ಒಂದು ತಿಂಗಳಾದ ಬೆನ್ನಲ್ಲೇ ಹೊಸ ಫೋಟೋಶೂಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳ ಜೊತೆ ಸಂಪರ್ಕ
'ಪುಟ್ಟಗೌರಿ' ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದ, ಬಳಿಕ 'ಬಿಗ್ ಬಾಸ್ ಕನ್ನಡ' ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದ ಸಾನ್ಯ ಅಯ್ಯರ್ ಸದ್ಯ ಸಿನಿಮಾಗಳಿಗಿಂತ ಫೋಟೋಶೂಟ್, ಫ್ಯಾಷನ್ ಈವೆಂಟ್ ಹಾಗೂ ಸೋಷಿಯಲ್ ಮೀಡಿಯಾ ಚಟುವಟಿಕೆಗಳಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. 'ಗೌರಿ' ಚಿತ್ರದ ಬಳಿಕ ಅವರ ಹೊಸ ಸಿನಿಮಾ ಘೋಷಣೆಯಾಗದಿದ್ದರೂ, ಅಭಿಮಾನಿಗಳ ಜೊತೆ ಸಂಪರ್ಕವನ್ನು ಮಾತ್ರ ಅವರು ನಿರಂತರವಾಗಿ ಉಳಿಸಿಕೊಂಡಿದ್ದಾರೆ.
ರ್ಯಾಪ್ ಸಾಂಗ್ ಫೋಟೋಶೂಟ್
ಸುಮಾರು ಒಂದು ತಿಂಗಳ ಹಿಂದೆ ಬಿಡುಗಡೆಯಾಗಿದ್ದ 'ಎರಡು ಪ್ಲೇಟ್ ದೋಸೆ' ಕನ್ನಡ ರ್ಯಾಪ್ ಸಾಂಗ್‌ನಲ್ಲಿ ಸಾನ್ಯ ಅಯ್ಯರ್ ವಿಶೇಷವಾಗಿ ಕಾಣಿಸಿಕೊಂಡಿದ್ದರು. ರ್ಯಾಪರ್ ಗುಬ್ಬಿ ಧ್ವನಿಯಲ್ಲಿ ಮೂಡಿಬಂದ ಈ ಹಾಡು ಬೆಂಗಳೂರಿನ ಜೀವನಶೈಲಿ, ಕಾಫಿ ಸಂಸ್ಕೃತಿ ಹಾಗೂ ಯುವಕರ ಬದುಕನ್ನು ಆಧುನಿಕ ಶೈಲಿಯಲ್ಲಿ ಕಟ್ಟಿಕೊಟ್ಟಿತ್ತು. ಹಾಡಿನಲ್ಲಿ ಸಾನ್ಯ ಅವರ ಸ್ಟೈಲಿಶ್ ಲುಕ್ ಕೂಡ ಸಾಕಷ್ಟು ಗಮನ ಸೆಳೆದಿತ್ತು. ಈಗ, ಹಾಡು ಬಿಡುಗಡೆಯಾಗಿ ಒಂದು ತಿಂಗಳು ಕಳೆದ ಬೆನ್ನಲ್ಲೇ ಸಾನ್ಯ ಅಯ್ಯರ್ ಅದೇ ರ್ಯಾಪ್ ಸಾಂಗ್‌ನ ಫೋಟೋಶೂಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೋಲ್ಡ್ ಲುಕ್‌ನಲ್ಲಿ ಸಾನ್ಯ
ಪ್ರೀಮಿಯರ್ ಪದ್ಮಿನಿ ಕಾರನ್ನು ಹಿನ್ನೆಲೆಯಾಗಿ ಬಳಸಿಕೊಂಡು ಸೆರೆಹಿಡಿದಿರುವ ಈ ಚಿತ್ರಗಳಲ್ಲಿ ಸಾನ್ಯ ವಿಭಿನ್ನ ಹಾಗೂ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಹಾಡಿನಲ್ಲಿರುವ 'South girls are baddies' ಎಂಬ ಸಾಲಿನ ವೇಳೆ ಕಾಣಿಸಿಕೊಳ್ಳುವ ಅವರ ಸ್ಟೈಲಿಂಗ್ ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಹಾಡಿನಲ್ಲಿ ಕಂಡ ಅದೇ ಲುಕ್‌ನ ಫೋಟೋಗಳನ್ನು ಹಂಚಿಕೊಂಡಿರುವ ಸಾನ್ಯ, ರ್ಯಾಪ್ ಸಾಂಗ್‌ಗೆ ಮತ್ತೊಮ್ಮೆ ಪ್ರಚಾರ ನೀಡುವ ಪ್ರಯತ್ನ ಮಾಡಿದ್ದಾರೆ.
'ಎರಡು ಪ್ಲೇಟ್ ದೋಸೆ'
ಫೋಟೋಗಳ ಜೊತೆಗೆ ಅವರು, 'Been a month and we’re still serving YERD PLATE DOSE. Available on all streaming platforms, do watch it on YouTube .' ಎಂದು ಬರೆದುಕೊಂಡಿದ್ದು, ಹಾಡಿಗೆ ಸಿಗುತ್ತಿರುವ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 'ಎರಡು ಪ್ಲೇಟ್ ದೋಸೆ' ಹಾಡು ಈಗಲೂ ಯೂಟ್ಯೂಬ್ ಸೇರಿದಂತೆ ವಿವಿಧ ಮ್ಯೂಸಿಕ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಲಭ್ಯವಿದ್ದು, ಯುವ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಬೆಂಗಳೂರಿನ ಸ್ಥಳೀಯ ಸೊಗಡು, ದೋಸೆ ಮತ್ತು ಕಾಫಿ ಸಂಸ್ಕೃತಿಯನ್ನು ಆಧುನಿಕ ರ್ಯಾಪ್ ಶೈಲಿಯಲ್ಲಿ ಪರಿಚಯಿಸುವ ಈ ಹಾಡು ಸೋಷಿಯಲ್ ಮೀಡಿಯಾದಲ್ಲೂ ಗಮನ ಸೆಳೆದಿದೆ.
ಮಿಶ್ರ ಪ್ರತಿಕ್ರಿಯೆ
ಬಾಲನಟಿಯಾಗಿ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಮೂಲಕ ಅಭಿನಯ ಆರಂಭಿಸಿದ್ದ ಸಾನ್ಯ ಅಯ್ಯರ್, ನಂತರ 'ಬಿಗ್ ಬಾಸ್ ಕನ್ನಡ ಸೀಸನ್'ನಲ್ಲಿ ಸ್ಪರ್ಧಿಯಾಗಿ ಜನಪ್ರಿಯತೆ ಗಳಿಸಿದರು. ಬಳಿಕ ಸಮರ್ಜಿತ್ ಲಂಕೇಶ್‌ಗೆ ನಾಯಕಿಯಾಗಿ 'ಗೌರಿ' ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದರು. ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಸಾನ್ಯ ತಮ್ಮ ಗ್ಲಾಮರ್, ಸ್ಟೈಲ್ ಹಾಗೂ ಸೋಷಿಯಲ್ ಮೀಡಿಯಾ ಚಟುವಟಿಕೆಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಲೇ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

