ಬಿಗ್ ಬಾಸ್ ಮಾಜಿ ಸ್ಪರ್ಧಿ ರೂಪೇಶ್ ಶೆಟ್ಟಿ ಜೈ ಸಿನಿಮಾ ಬಿಡುಗಡೆಗೂ ಮುನ್ನವೇ ಸದ್ದು ಮಾಡ್ತಿದೆ. ಕಿಚ್ಚ ಸುದೀಪ್ ಸಿನಿಮಾದ ಮೊದಲ ಟಿಕೆಟ್ ಖರೀದಿ ಮಾಡಿದ್ದಾರೆ. ಕಿಚ್ಚನ ಆಶೀರ್ವಾದ ರೂಪೇಶ್ ಉತ್ಸಾಹವನ್ನು ಡಬಲ್ ಮಾಡಿದೆ.

ಅಭಿನಯ ಚಕ್ರವರ್ತಿ ಸುದೀಪ್ (Sudeep), ಯುವ ಕಲಾವಿದರಿಗೆ ಸದಾ ಪ್ರೇರಣೆಯಾಗಿ ನಿಲ್ತಾರೆ. ಹೊಸಬರನ್ನು ಪ್ರೋತ್ಸಾಹಿಸುವ ಸ್ಯಾಂಡಲ್ವುಡ್ ಮಾಣಿಕ್ಯ, ಕಲಾವಿದರನ್ನು ಬೆನ್ನು ತಟ್ಟುವ ಕೆಲ್ಸ ಮಾಡ್ತಿದ್ದಾರೆ. ಈಗ ನಟ ರೂಪೇಶ್ ಶೆಟ್ಟಿ (Roopesh Shetty) ಅವರ ಜೈ ಸಿನಿಮಾಕ್ಕೂ ಸುದೀಪ್ ಶ್ರೀರಕ್ಷೆ ನೀಡಿದ್ದಾರೆ. ಸುದೀಪ್, ಜೈ ಸಿನಿಮಾ (Jai Cinema)ದ ಮೊದಲ ಟಿಕೆಟ್ ಖರೀದಿ ಮಾಡಿದ್ದಾರೆ.

ಜೈ ಸಿನಿಮಾ ಟಿಕೆಟ್ ಖರೀದಿ ಮಾಡಿದ ಸುದೀಪ್ :

ಬಿಗ್ ಬಾಸ್ ಮಾಜಿ ಸ್ಪರ್ಧಿ ರೂಪೇಶ್ ಶೆಟ್ಟಿ ಹೊಸ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾ ಹೆಸರು ಜೈ. ನವೆಂಬರ್ 14 ರಂದು ಈ ಸಿನಿಮಾ ತೆರೆಗೆ ಬರ್ತಿದೆ. ತುಳು ಹಾಗೂ ಕನ್ನಡದಲ್ಲಿ ಬರ್ತಿರುವ ಈ ಸಿನಿಮಾವನ್ನು ರೂಪೇಶ್ ಶೆಟ್ಟಿ ತಾವೇ ನಿರ್ದೇಶನ ಮಾಡಿ ನಟಿಸಿದ್ದಾರೆ. ಈ ಸಿನಿಮಾದ ಮೊದಲ ಟಿಕೆಟನ್ನು ಕಿಚ್ಚ ಸುದೀಪ್ ಖರೀದಿ ಮಾಡಿದ್ದಾರೆ. ಸದ್ಯ ಸುದೀಪ್ ಮಾರ್ಕ್ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಶೂಟಿಂಗ್ ಸೆಟ್ ಗೆ ರೂಪೇಶ್ ಶೆಟ್ಟಿ ಅವರನ್ನು ಕರೆಸಿಕೊಂಡಿದ್ದ ಸುದೀಪ್, ರೂಪೇಶ್ ಅವರಿಗೆ 501 ರೂಪಾಯಿ ನೀಡಿ ಮೊದಲ ಟಿಕೆಟ್ ಖರೀದಿ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಮೊದಲ ಟಿಕೆಟನ್ನು ಸುದೀಪ್ ಗೆ ನೀಡಿ ಖುಷಿಯಾಗಿದ್ದಾರೆ.

ಗರ್ಲ್‌ಫ್ರೆಂಡ್ ಘಟನೆ ನಿಜ ಜೀವನದಲ್ಲೂ ನಡೆದಿತ್ತೆಂದ ರಶ್ಮಿಕಾ, ರಕ್ಷಿತ್‌ಗ್ಯಾಕೆ ಕನೆಕ್ಟ್ ಮಾಡ್ತಿದ್ದಾರೆ ಫ್ಯಾನ್ಸ್?

ನನ್ನ ಸಿನಿಮಾದ ಮೊದಲ ಟಿಕೆಟ್ ಇದು. ಜೈ ಸಿನಿಮಾಕ್ಕೆ ಸುದೀಪ್ ಅವರ ಕೈನಿಂದ ಸಪೋರ್ಟ್ ಪಡೆಯಬೇಕು ಎನ್ನುವ ಕನಸು ನನಗಿತ್ತು. ಹಾಗಾಗಿ ನಾನು, ನನ್ನ ಮೊದಲ ಟಿಕೆಟನ್ನು ಸುದೀಪ್ ಅವರಿಗೆ ನೀಡ್ತಿದ್ದೇನೆ ಅಂತ ರೂಪೇಶ್ ಶೆಟ್ಟಿ ಹೇಳ್ತಿದ್ದಂತೆ ಸುದೀಪ್, ನಾನು ಟಿಕೆಟ್ ಖರೀದಿ ಮಾಡ್ತೇನೆ ಎನ್ನುತ್ತ ಟಿಕೆಟ್ ಗೆ ಹಣ ನೀಡಿ, ಮೊದಲ ಟಿಕೆಟ್ ಖರೀದಿ ಮಾಡಿದ್ದಾರೆ. 501 ರೂಪಾಯಿಯನ್ನು ರೂಪೇಶ್ ಶೆಟ್ಟಿಗೆ ನೀಡಿದ ಸುದೀಪ್, ಆಲ್ ದಿ ಬೆಸ್ಟ್ ಎಂದಿದ್ದಾರೆ.

ಜೈ ಸಿನಿಮಾಕ್ಕೆ ಮೆಚ್ಚುಗೆ : 

ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಸಿನಿಮಾಕ್ಕೆ ಈಗಾಗಲೇ ಒಳ್ಳೆ ರಿವ್ಯೂ ಸಿಕ್ಕಿದೆ. ರೂಪೇಶ್ ಶೆಟ್ಟಿ, ಸು ಫ್ರಮ್ ಸೋ ಸಿನಿಮಾದಂತೆ ಪೇಯ್ಡ್ ಪ್ರೀಮಿಯರ್ ಶೋ ನಡೆಸಿದ್ದಾರೆ. ಅಕ್ಟೋಬರ್ 24 ರಂದು ಮಸ್ಕಟ್ ನಲ್ಲಿ, ಅಕ್ಟೋಬರ್ 26 ರಂದು ಗೋವಾದಲ್ಲಿ ಪ್ರೀಮಿಯರ್ ಶೋ ನಡೆದಿದೆ. ಅಷ್ಟೇ ಅಲ್ಲ ಬುಧವಾರ ಬೆಂಗಳೂರಿನಲ್ಲಿ ಪ್ರೀಮಿಯರ್ ನಡೆದಿದೆ. ಕರ್ನಾಟಕದ ಇನ್ನೂ ಕೆಲ ಭಾಗದಲ್ಲಿ ಪೇಯ್ಡ್ ಪ್ರೀಮಿಯರ್ ನಡೆದಿದ್ದು, ಚಿತ್ರ ನೋಡಿದ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಒಳ್ಳೆ ಸಿನಿಮಾ ಎನ್ನುವ ರಿವ್ಯೂ ಸಿಕ್ಕಿದೆ.

ಬಿಗ್‌ ಬಾಸ್‌ ಕನ್ನಡದಲ್ಲಿ ಮಿಂಚುತ್ತಿರೋ ರಾಶಿಕಾ ಶೆಟ್ಟಿ ಅಂತಿಂಥವರಲ್ಲಾರೀ.. ರಮ್ಯಾ-ರಕ್ಷಿತಾ ಜತೆ ನಟಿಸಿದ್ರು ಗೊತ್ತಾ?

ಜೈ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಜೊತೆ ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ನಟಿಸಿದ್ದಾರೆ. ಇದು ಈ ಸಿನಿಮಾದ ಇನ್ನೊಂದು ವಿಶೇಷ. ರೂಪೇಶ್ ಶೆಟ್ಟಿಗೆ ಸಂಪೂರ್ಣ ಬೆಂಬಲ ನೀಡಿರುವ ಸುನೀಲ್ ಶೆಟ್ಟಿ, ರೂಪೇಶ್ ಶೆಟ್ಟಿಯಿಂದ ಸಂಭಾವನೆ ಪಡೆದಿಲ್ಲ ಎನ್ನಲಾಗಿದೆ. ಪ್ರಚಾರದ ಜೊತೆ ಟ್ರೇಲರ್ ರಿಲೀಸ್ ಗೂ ಸುನೀಲ್ ಶೆಟ್ಟಿ ಬಂದಿದ್ದರು. ಇದು ಸಿನಿಮಾ ಪ್ರಸಿದ್ಧಿಯನ್ನು ಡಬಲ್ ಮಾಡಿದೆ. ಸಿನಿಮಾದಲ್ಲಿಅದ್ವಿತಿ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಅರವಿಂದ್ ಬೋಳಾರ್ ಸೇರಿದಂತೆ ಅನೇಕ ಕಲಾವಿದರಿದ್ದು, ಸಿನಿಮಾ ಟ್ರೇಲರ್ ಈಗಾಗಲೇ ಎಲ್ಲರನ್ನು ಆಕರ್ಷಿಸಿದೆ. ಹಳ್ಳಿಯ ರಾಜಕೀಯವನ್ನು ಹೇಳ ಹೊರಟಿರುವ ಈ ಸಿನಿಮಾದಲ್ಲಿ ಮಂಗಳೂರು ಕನ್ನಡ ಬಳಕೆಯಾಗಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದ್ದು, ಸಿನಿಮಾ ವೀಕ್ಷಕರನ್ನು ಸೆಳೆಯುತ್ತಾ ಕಾದು ನೋಡ್ಬೇಕು.

View post on Instagram