ಮಾಸ್ತಿ ವೆಂಕಟೇಶ ಅಯ್ಯಂಗಾರರ ಕಾಕನಕೋಟೆ ಪುಸ್ತಕ ಕೂಡ ಸಿನಿಮಾ ಮಾಡಲಾಗಿತ್ತು. ಈ ಚಿತ್ರದಲ್ಲಿ ಲೋಕೇಶ್, ಶ್ರೀನಾಥ್ ನಟಿಸಿದ್ದರು.
ಕುವೆಂಪು ಅವರ ಕಾನೂರು ಹೆಗ್ಗಡತಿ ಪುಸ್ತಕ ಗಿರಿಶ್ ಕಾರ್ನಾಡ್ ನಿರ್ದೇಶನದಲ್ಲಿ ಸಿನಿಮಾವಾಗಿ ಮೂಡಿ ಬಂದಿತ್ತು.ಚಿತ್ರದಲ್ಲಿ ತಾರಾ, ನಟಿಸಿದ್ದರು.
ಹಲವು ಕಥೆಗಳನ್ನು ಒಳಗೊಂಡ ಪೂರ್ಣ ಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟ್ ಆಫೀಸ್ ಪುಸ್ತಕದ ಕಥೆಗಳು ಮೂರು ಸಿನಿಮಾಗಳಾಗಿ ಬಿಡುಗಡೆಯಾಗಿದ್ದವು.
ತ್ರೀವೇಣಿಯವರ ಶರಪಂಜರ ಪುಸ್ತಕ ಪುಟ್ಟಣ್ಣ ಕಣಗಾಲ್ ಅವರ ಸೂಪರ್ ಹಿಟ್ ಸಿನಿಮಾವಾಗಿ ಗೆದ್ದಿತ್ತು. ಈ ಚಿತ್ರದಲ್ಲಿ ನಾಯಕಿಯಾಗಿ ಕಲ್ಪನಾ ನಟಿಸಿದ್ದರು.
ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹೇಮಾವತಿ ಪುಸ್ತಕ ಕೂಡ ಸಿನಿಮಾವಾಗಿ ಬದಲಾಗಿತ್ತು. ಎಸ್ ಸಿದ್ದಲಿಂಗಯ್ಯ ನಿರ್ದೇಶನ ಮಾಡಿದ ಸಿನಿಮಾ ಇದಾಗಿತ್ತು.
ತರಾಸು ಅವರು ಬರೆದಿರುವ ಮಸಣದ ಹೂ ಪುಸ್ತಕವು ಪುಟ್ಟಣ್ಣ ಕಣಗಲ್ ನಿರ್ದೇಶನದಲ್ಲಿ ಸಿನಿಮಾವಾಗಿತ್ತು. ಈ ಸಿನಿಮಾದಲಿ ಅಂಬರೀಶ್ ಮತ್ತು ಅಪರ್ಣ ನಟಿಸಿದ್ದರು.
ಎಸ್ . ಎಲ್ ಭೈರಪ್ಪನವರು ಬರೆದ ವಂಶವೃಕ್ಷ ಪುಸ್ತಕವು ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ವಿಷ್ಣುವರ್ಧನ್, ಗಿರೀಶ್ ಕಾರ್ನಾಡ್ ನಟಿಸಿದ್ದರು.
ಶ್ರೀಕೃಷ್ಣ ಆಲನಹಳ್ಳಿ ಬರೆದಿರುವ ಈ ಕಥೆ ಅದೇ ಹೆಸರಿನಲ್ಲಿ ಸಿನಿಮಾವಾಗಿತ್ತು. ಈ ಸಿನಿಮಾದಲ್ಲಿ ಲೋಕೇಶ್, ರೀಟಾ ಆಂಚನ್ ಹಾಗೂ ಮಾನು ನಟಿಸಿದ್ದರು.
ವಾಣಿಯವರು ಬರೆದ ಎರಡು ಕನಸು ಪುಸ್ತಕ ಅದೇ ಹೆಸರಿನಲ್ಲಿ ಡಾ. ರಾಜಕುಮಾರ್, ಕಲ್ಪನಾ ಮತ್ತು ಮಂಜುಳಾ ಅಭಿನಯದ ಸೂಪರ್ ಹಿಟ್ ಸಿನಿಮಾವಾಗಿತ್ತು.
ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಪುಸ್ತಕ ಕೂಡ ಸಿನಿಮಾ ರೂಪ ತಾಳಿದ್ದು, ಬಿ ಜಯಶ್ರೀಯವರು ಮೂಕಜ್ಜಿಯಾಗಿ ನಟಿಸಿದ್ದರು. ಪಿ. ಶೇಷಾದ್ರಿ ನಿರ್ದೇಶನ ಮಾಡಿದ್ದರು.
Su From So Movie ಭಾನು ಪಾತ್ರಧಾರಿ ಸಂಧ್ಯಾ ಅರೆಕೆರೆ ಪತಿ ಕೂಡ ನಟ! ಯಾರದು?
ನಾನ್ಯಾಕೆ ಕನ್ನಡ ಸಿನಿಮಾದಿಂದ ದೂರವಾದೆ? ಬಾಲಯ್ಯ ಬಳಿ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ
ಮೇಘನಾ ಗಾಂವ್ಕರ್ ಸಿನಿ ಜರ್ನಿಗೆ 15 ವರ್ಷ…ಇಲ್ಲಿದೆ ನೋಡಿ ನಟಿಯ ಜನಪ್ರಿಯ ಸಿನಿಮಾಗಳು
ನಟಿ ರಾಧಿಕಾ ಪಂಡಿತ್ ತಂದೆ ಕೂಡ ನಟ! ಕೃಷ್ಣಪ್ರಸಾದ್ ನಟಿಸಿದ ಸಿನಿಮಾ ಸೂಪರ್ ಹಿಟ್!