ನಟಿ Ramyaಗೆ ವಯಸ್ಸೇ ಆಗಲ್ವಾ! Sandalwood Queen ಗೆ 42 ಅಂದ್ರೆ ನಂಬ್ತೀರಾ???
Divya Spandana: ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರು ಇತ್ತೀಚೆಗೆ ಬ್ಲ್ಯಾಕ್ ಬಣ್ಣದ ಮಿನಿ ಡ್ರೆಸ್ಸಲ್ಲಿ ಫೋಟೊ ಶೇರ್ ಮಾಡಿದ್ದು, ನಟಿ 42ರಲ್ಲೂ ಇಷ್ಟು ಯಂಗ್ ಮತ್ತು ಸ್ಟೈಲಿಶ್ ಆಗಿರೋದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಈ ಫೋಟೊಗಳು ವೈರಲ್ ಆಗುತ್ತಿವೆ.

ದಿವ್ಯ ಸ್ಪಂದನ
ನಟಿ ದಿವ್ಯ ಸ್ಪಂದನ, ಕನ್ನಡಿಗರ ಪಾಲಿನ ಸ್ಯಾಂಡಲ್’ವುಡ್ ಕ್ವೀನ್ ರಮ್ಯಾ. ಸಿನಿಮಾದಿಂದ ದೂರ ಉಳಿದರೂ ಸಹ ಇಂದಿಗೂ ಜನರ ಹೃದಯದಲ್ಲಿ ನಟಿ ಮೋಸ್ಟ್ ಫೇವರಿಟ್ ನಟಿಯಾಗಿ ಉಳಿದುಕೊಂಡಿದ್ದಾರೆ. ಕೋಟ್ಯಾಂತರ ಜನ ಫ್ಯಾನ್ಸ್ ಗಳನ್ನು ನಟಿ ಇಂದಿಗೂ ಹೊಂದಿದ್ದಾರೆ.
ರಮ್ಯಾ ಹೊಸ ಲುಕ್
ಇದೀಗ ನಟಿ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸದಾದ ಫೋಟೊಗಳನ್ನು ಶೇರ್ ಮಾಡಿದ್ದು ನಟಿಯ ಹೊಸ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯಕ್ಕಂತೂ ಈ ಫೋಟೊ ವೈರಲ್ ಆಗುತ್ತಿದೆ.
ನಿಜವಾಗ್ಲೂ ರಮ್ಯಾ ವಯಸ್ಸು 42ರ?
ನಟಿ ರಮ್ಯಾ ಅವರು ವಿ ನೆಕ್ ಇರುವಂತಹ ಸುಂದರವಾದ ಶಾರ್ಟ್ ಬ್ಲ್ಯಾಕ್ ಡ್ರೆಸ್ ಧರಿಸಿದ್ದು, ಈ ಲುಕ್ ನಲ್ಲಿ ನಟಿಯನ್ನು ನೋಡಿದ್ರೆ ಅವರಿಗೆ 42 ವರ್ಷ ವಯಸ್ಸಾಗಿದೆ ಅನ್ನೋದೆ ಗೊತ್ತಾಗೋದಿಲ್ಲ. ಅಷ್ಟೊಂದು ಫಿಟ್ ಮತ್ತು ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ ನಟಿ.
ಶ್ವಾನ ಪ್ರೇಮಿ ರಮ್ಯಾ
ನಟಿ ರಮ್ಯಾ ಶ್ವಾನ ಪ್ರೇಮಿಯಾಗಿದ್ದು, ಈ ಫೋಟೊಗಳಲ್ಲೂ ಸಹ ಇಂಡಿ ಶ್ವಾನ ಕಾಣಿಸಿಕೊಂಡಿದ್ದು, ಯಾವುದೋ ಮ್ಯಾಗಜಿನ್ ಗಾಗಿ ನಟಿ ಫೋಟೊ ಶೂಟ್ ಮಾಡಿದಂತಿದೆ. ಈ ಫೋಟೊದಲ್ಲಿ ನಟಿ ಇನ್ನೂ 10 ವರ್ಷ ಸಣ್ಣವರಂತೆ ಕಾಣಿಸುತ್ತಿದ್ದಾರೆ.
ಅಭಿಮಾನಿಗಳು ಫಿದಾ
ಮೋಹಕ ತಾರೆಯ ಫೋಟೊ ನೋಡಿ ನಟಿ ಅಮೃತಾ ಅಯ್ಯಂಗಾರ್, ವಾಸುಕಿ ವೈಭವ್, ಕಿಶನ್ ಬಿಳಗಲಿ ಸೇರಿ ಹಲವಾರು ಸೆಲೆಬ್ರಿಟಿಗಳು, ಅಭಿಮಾನಿಗಳು ಕಾಮೆಂಟ್ ಮಾಡಿ, ನಟಿಯ ಅಂದವನ್ನು ಹೊಗಳಿ, ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಸಿನಿಮಾಗೆ ಯಾವಾಗ?
ನಟಿ ರಮ್ಯಾ ಚಂದನವನಕ್ಕೆ ಮತ್ತೆ ಎಂಟ್ರಿ ಕೊಡಲಿದ್ದಾರೆ ಎಂದು ಹಲವಾರು ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ಆದರೆ ಇಲ್ಲಿವರೆಗೂ ನಟಿ ಸಿನಿಮಾಗಳನ್ನು ಒಪ್ಪಿಕೊಂಡು ಕೊನೆಗೆ ಅದರಿಂದ ಹೊರ ಬರುತ್ತಿದ್ದು, ಯಾವಾಗ ಮೋಹಕ ತಾರೆಯನ್ನು ತೆರೆ ಮೇಲೆ ನೋಡೋದು ಎಂದು ಜನ ಕಾಯುತ್ತಿದ್ದಾರೆ.
ರಮ್ಯಾ ಕರಿಯರ್
ಅಭಿ ಸಿನಿಮಾ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಮ್ಯಾ, ಕೊನೆಯದಾಗಿ ನಾಗರಹಾವು ಸಿನಿಮಾದಲ್ಲಿ 2016ರಲ್ಲಿ ನಟಿಸಿದ್ದರು. ಹತ್ತು ವರ್ಷದಿಂದ ನಟಿ ಸಿನಿಮಾದಿಂದ ದೂರವೇ ಉಳಿದಿದ್ದಾರೆ.