- Home
- Entertainment
- Sandalwood
- Srinagara Kitty Birthday: ನಟ ಶ್ರೀನಗರ ಕಿಟ್ಟಿಗೆ ಹುಟ್ಟುಹಬ್ಬದ ದಿನ; ಪತ್ನಿ-ಮಗಳೊಂದಿಗೆ ಮನೆಯಲ್ಲೇ ಸರಳ ಸಂಭ್ರಮ!
Srinagara Kitty Birthday: ನಟ ಶ್ರೀನಗರ ಕಿಟ್ಟಿಗೆ ಹುಟ್ಟುಹಬ್ಬದ ದಿನ; ಪತ್ನಿ-ಮಗಳೊಂದಿಗೆ ಮನೆಯಲ್ಲೇ ಸರಳ ಸಂಭ್ರಮ!
ನಟ ಶ್ರೀನಗರ ಕಿಟ್ಟಿಯವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಅತ್ಯಂತ ಸರಳವಾಗಿ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಹಾಗೂ ಆತ್ಮೀಯರು, ಕುಟುಂಬಸ್ಥರು ಸೇರಿ ಕಿಟ್ಟಿ ಅವರ ಹುಟ್ಟುಹಬ್ಬವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್ ನಟ, 'ಇಂತಿ ನಿನ್ನ ಪ್ರೀತಿಯʼ ಸಿನಿಮಾದ ಮೂಲಕ ಕರ್ನಾಟಕದ ಮನೆಮನೆಮಾತಾಗಿರುವ ಕಲಾವಿದ ಶ್ರೀನಗರ ಕಿಟ್ಟಿಗೆ (Srinagara Kitty) ಇಂದು (8 ಜುಲೈ) ಹುಟ್ಟಹಬ್ಬದ ಸಂಭ್ರಮ. ʻಸವಾರಿʼ, ʻಸಂಜು ವೆಡ್ಸ್ ಗೀತಾʼ ನಂತಹ ಸೂಪರ್ ಹಿಟ್ ಸಿನಿಮಾಗಳ ನಟನೆಯ ಮೂಲಕ ಜನಮನ್ನಣೆ ಗಳಿಸಿರುವ ಶ್ರೀನಗರ ಕಿಟ್ಟಿಯವರು ಇಂದು ತಮ್ಮ ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ನಟ ಶ್ರೀನಗರ ಕಿಟ್ಟಿಯವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಅತ್ಯಂತ ಸರಳವಾಗಿ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಹಾಗೂ ಆತ್ಮೀಯರು, ಕುಟುಂಬಸ್ಥರು ಸೇರಿ ಕಿಟ್ಟಿ ಅವರ ಹುಟ್ಟುಹಬ್ಬವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ.
ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಜೊತೆ ಸಿಂಪಲ್ ಸೆಲೆಬ್ರೇಷನ್
ಹೌದು, ನಟ ಶ್ರೀನಗರ ಕಿಟ್ಟಿ ಯಾವುದೇ ಆಡಂಬರವಿಲ್ಲದೇ ಕುಟುಂಬಸ್ಥರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಇದೀಗ ವೈರಲ್ ಅಗುತ್ತಿದೆ. ಪತಿ ಶ್ರೀನಗರ ಕಿಟ್ಟಿ ಅವರ ಹುಟ್ಟುಹಬ್ಬಕ್ಕೆ ಪತ್ನಿ ಭಾವನಾ ಬೆಳಗೆರೆ ಅವರು ಪ್ರೀತಿಯಿಂದ ಶುಭಕೋರಿದ್ದಾರೆ.
ಪತಿಯ ಕೆನ್ನೆಯನ್ನು ಮುದ್ದಿಸಿ ಕ್ಯಾಮೆರಾ ಮುಂದೆಯೇ ತಮ್ಮ ಅಪರಿಮಿತ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದು, ಈ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
ಕುಟುಂಬದ ಜೊತೆ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಸ್ಯಾಂಡಲ್‌ವುಡ್ ನಟ ಶ್ರೀನಗರ ಕಿಟ್ಟಿಗೆ ಪತ್ನಿ ಭಾವನಾ ಬೆಳಗೆರೆ ಹಾಗೂ ಮಗಳು ಪರಿಣಿತಾ ಶುಭ ಕೋರಿದ್ದು ಇದೀಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ವೈರಲ್ ಆಗಿ ಕರ್ನಾಟಕದ ಸುತ್ತ ಸುತ್ತತೊಡಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

