ಅರೆರೆ ನಟ ವಿಜಯ್ ರಾಘವೇಂದ್ರಗೆ ಇದೇನಾಯ್ತು.. ಈ ಪಾತ್ರ ಮಾಡೋದು ಸವಾಲು ಎಂದಿದ್ಯಾಕೆ?
ವೀರಗಾಸೆ ಇತಿಹಾಸದ ಹಿನ್ನೆಲೆಯುಳ್ಳ 'ರುದ್ರಾಭಿಷೇಕಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಮೊದಲ ಬಾರಿಗೆ ತಂದೆ-ಮಗನ ದ್ವಿಪಾತ್ರದಲ್ಲಿ ನಟಿಸಿದ್ದು, ವೀರಗಾಸೆ ಕಲಾವಿದನ ಸವಾಲಿನ ಪಾತ್ರ ನಿರ್ವಹಿಸಿದ್ದಾರೆ.

ತುಂಬಾ ಸವಾಲಾಗಿತ್ತು
‘ನನಗೆ ವೀರಗಾಸೆ ಪಾತ್ರ ಮಾಡುವುದು ತುಂಬಾ ಸವಾಲಾಗಿತ್ತು. ಈ ಚಿತ್ರದ ಮೂಲಕ ಮೊದಲ ಬಾರಿಗೆ ತಂದೆ, ಮಗನಾಗಿ ಎರಡೂ ಪಾತ್ರಗಳನ್ನು ನಿಭಾಯಿಸಿದ್ದೇನೆ’ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ. ಅವರು ನಟಿಸಿರುವ ‘ರುದ್ರಾಭಿಷೇಕಂ’ ಚಿತ್ರದ ‘ಹೃದಯ...’ ಹಾಡು ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಎರಡೂ ಪಾತ್ರಗಳನ್ನು ನಿಭಾಯಿಸಿದ್ದೇನೆ
ವೀರಗಾಸೆ ಕಲಾವಿದನ ಪಾತ್ರ ಮಾಡುವುದು ದೊಡ್ಡ ಸವಾಲಾಗಿತ್ತು. ಪೂರ್ವಜರ ಕಾಲದ ಘಟನೆಗಳು ಇಂದಿನ ತಲೆಮಾರಿಗೆ ಹೇಗೆ ಕನೆಕ್ಟ್ ಆಗುತ್ತವೆ ಎಂಬುದನ್ನು ಈ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ತಂದೆ, ಮಗನಾಗಿ ಎರಡೂ ಪಾತ್ರಗಳನ್ನು ನಿಭಾಯಿಸಿದ್ದೇನೆ ಎಂದರು ವಿಜಯ್ ರಾಘವೇಂದ್ರ.
ವಿಭಿನ್ನ ಶೇಡ್‌ಗಳಲ್ಲಿ ಪ್ರಿಯಾಂಕಾ ತಿಮ್ಮೇಶ್
ಚಿತ್ರದಲ್ಲಿ ಶಿವಭಕ್ತೆಯಾಗಿ, ಹಳ್ಳಿ ಹುಡುಗಿಯಾಗಿ ಮತ್ತು ಸಿಟಿ ಹುಡುಗಿ.. ಹೀಗೆ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ನಾನು ಈ ಸಿನಿಮಾವನ್ನು ಒಪ್ಪಿಕೊಳ್ಳಲು ವಿಜಯ್ ರಾಘವೇಂದ್ರ ಅವರ ಸೌಮ್ಯ ಸ್ವಭಾವ ಮತ್ತು ಚಿತ್ರದ ಕಥಾಹಂದರ ಮುಖ್ಯ ಕಾರಣ ಎಂದು ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ ಹೇಳುತ್ತಾರೆ.
ಇತಿಹಾಸವನ್ನು ಹೇಳುವ ಚಿತ್ರ
ಈ ಚಿತ್ರವನ್ನು ವಸಂತ್ ಕುಮಾರ್ ನಿರ್ದೇಶಿಸಿದ್ದಾರೆ. ವೀರಗಾಸೆ ಕಲೆಯನ್ನು ಆರಾಧಿಸುತ್ತ ಬಂದಿರುವ ಕುಟುಂಬದ ಕತೆ ಜೊತೆಗೆ ವೀರಭದ್ರ ದೇವರ ಇತಿಹಾಸವನ್ನು ಹೇಳುವ ಚಿತ್ರವಿದು. ಪ್ರಿಯಾಕಾ ತಿಮ್ಮೇಶ್ ನಾಯಕಿ. ಬಲ ರಾಜವಾಡಿ, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ನಟಿಸಿದ್ದಾರೆ.
50ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್
ಮಂಜುನಾಥ ಕೆ.ಎನ್, ಎನ್.ಜಯರಾಮಪ್ಪ, ಕೆ.ವೆಂಕಟೇಶ್, ಬಿ.ಚಿದಾನಂದ ಮೂರ್ತಿ, ಸುರೇಶ್ ಬಾಬು, ಬಿ.ಕೆ.ಅಶ್ವಥ್ ನಾರಾಯಣ, ಶಿವಕುಮಾರ್, ಕೆ.ಎಸ್.ರವಿಕುಮಾರ್, ಕುಸುಮ ವಸಂತ್ ಕುಮಾರ್ ಸೇರಿದಂತೆ 9 ಜನ ಈ ಚಿತ್ರದ ನಿರ್ಮಾಪಕರು. ಇನ್ನು 50ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

