- Home
- Entertainment
- Sandalwood
- Yash Radhika Pandit Photos: ಇದ್ರೆ ಈ ಥರ ಇರಬೇಕು ಅನಿಸೋ ಈ ಜೋಡಿಗೆ ಯಾವ ಕೆಟ್ಟ ದೃಷ್ಟಿಯೂ ಬೀಳದಿರಲಿ!
Yash Radhika Pandit Photos: ಇದ್ರೆ ಈ ಥರ ಇರಬೇಕು ಅನಿಸೋ ಈ ಜೋಡಿಗೆ ಯಾವ ಕೆಟ್ಟ ದೃಷ್ಟಿಯೂ ಬೀಳದಿರಲಿ!
ಪ್ರೀತಿ, ಪ್ರೇಮ ವಿಷಯದಲ್ಲಿ ಕೆಲವರನ್ನು ನೋಡಿದಾಗ ಇದ್ದರೆ ಇವರ ಥರ ಇರಬೇಕಪ್ಪಾ ಅಂತ ಅನಿಸಬಹುದು. ಸದ್ಯ ಅನುಷ್ಮಾ ಶರ್ಮಾ-ವಿರಾಟ್ ಕೊಹ್ಲಿ, ತಮಿಳಿನಲ್ಲಿ ಜ್ಯೋತಿಕಾ-ಸೂರ್ಯ ಮುಂತಾದವರು ಲವ್‌ಲೀ ಜೋಡಿ ಅಂತ ಅನಿಸಿಕೊಳ್ತಾರೆ. ಇನ್ನು ಕನ್ನಡದಲ್ಲಿ ರಾಧಿಕಾ ಪಂಡಿತ್-ಯಶ್ ಜೋಡಿ ಕೂಡ ಫೇಮಸ್.

ಅಮೆರಿಕದಲ್ಲಿರುವ ರಾಧಿಕಾ ಪಂಡಿತ್-ಯಶ್!
ಸದ್ಯ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಅಮೆರಿಕ ಪ್ರವಾದಲ್ಲಿದ್ದಾರೆ. ರಾಧಿಕಾ ಪಂಡಿತ್ ಅವರನ್ನು ಯಶ್ ಎತ್ತಿಕೊಂಡಿರುವ ಕ್ಯೂಟ್ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಕುಟುಂಬಕ್ಕೆ ಸಮಯ ಕೊಡ್ತಾರೆ!
ಎಷ್ಟೇ ಸಿನಿಮಾ ಕೆಲಸ ಇದ್ದರೂ ಕೂಡ ನಟ ಯಶ್ ಅವರು ಕುಟುಂಬಕ್ಕೆ ಸಮಯ ಕೊಡುತ್ತಾರೆ. ಕುಟುಂಬದ ಜೊತೆ ಅವರು ಹಾಲಿಡೇ ಎಂಜಾಯ್ ಮಾಡುತ್ತಾರೆ, ಪಾರ್ಟಿ ಮಾಡ್ತಾರೆ.
ಸೀರಿಯಲ್‌ನಿಂದ ಸಂಸಾರದವರೆಗೆ...
ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರು 2004ರಲ್ಲಿ ಭೇಟಿಯಾಗಿದ್ದರು. ʼನಂದಗೋಕುಲʼ ಧಾರಾವಾಹಿಯಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು. ಆ ಬಳಿಕ ʼಮೊಗ್ಗಿನ ಮನಸುʼ ಸಿನಿಮಾದಲ್ಲಿ ಇವರು ಹೀರೋ, ಹೀರೋಯಿನ್ ಆಗಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು.
ಸೂಪರ್ ಹಿಟ್ ಸಿನಿಮಾಗಳು
ನಟ ಯಶ್, ರಾಧಿಕಾ ಪಂಡಿತ್ ಒಟ್ಟಿಗೆ ಮಾಡಿದ ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಐದು ವರ್ಷಗಳಿಗೂ ಅಧಿಕ ಕಾಲ ಪ್ರೀತಿಸಿದ್ದ ಈ ಜೋಡಿ ಎಲ್ಲರ ಎದುರು ಅದ್ದೂರಿಯಾಗಿ ಮದುವೆಯಾಗಿದೆ, ಎರಡು ಮಕ್ಕಳ ಪಾಲಕರಾಗಿ ಬಡ್ತಿ ಪಡೆದಿದೆ.
ಮದುವೆಯಾದ್ಮೇಲೆ ನಟನೆಯಿಂದ ದೂರ!
ಕರಿಯರ್‌ನಲ್ಲಿ ಉತ್ತುಂಗ ಶ್ರೇಣಿಯಲ್ಲಿದ್ದರೂ ಕೂಡ, ಮದುವೆ ಬಳಿಕ ರಾಧಿಕಾ ಪಂಡಿತ್ ಅವರು ಕುಟುಂಬದ ಕಡೆಗೆ ಮುಖ ಮಾಡಿದರು. ಸದ್ಯ ಇವೆಂಟ್‌ಗಳಲ್ಲಿ ಭಾಗಿಯಾಗುತ್ತ, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಲಿರುತ್ತಾರೆ.