- Home
- Entertainment
- Sandalwood
- ಆಸ್ಪತ್ರೆಯ 36 ಸಾವಿರ ಕಟ್ಟಲಾರದೆ ಒದ್ದಾಡಿದ ನಟಿ ಖುಷ್ಬು…. ನೆರವು ನೀಡಿ ಕಾಪಾಡಿದ್ದು ರವಿಚಂದ್ರನ್ ತಂದೆ!
ಆಸ್ಪತ್ರೆಯ 36 ಸಾವಿರ ಕಟ್ಟಲಾರದೆ ಒದ್ದಾಡಿದ ನಟಿ ಖುಷ್ಬು…. ನೆರವು ನೀಡಿ ಕಾಪಾಡಿದ್ದು ರವಿಚಂದ್ರನ್ ತಂದೆ!
ಒಂದಾನೊಂದು ಕಾಲದಲ್ಲಿ ನಟಿ ಖುಷ್ಭು ಸುಂದರ್ ತಾಯಿ ಆಸ್ಪತ್ರೆಯಲ್ಲಿದ್ದಾಗ, ಹಣ ಕಟ್ಟಲು ನಟಿ ಕಷ್ಟಪಡುತ್ತಿದ್ದರೆ, ಕ್ರೇಜಿ ಸ್ಟಾರ್ ರವಿಚಂದ್ರನ್ ಹಣ ನೀಡಿ ಸಹಾಯ ಮಾಡಿದ್ದರಂತೆ.

ಖುಷ್ಭು ಸುಂದರ್ (Khushboo) ತಮಿಳು ಚಿತ್ರರಂಗದ ಖ್ಯಾತ ನಟಿ. ಇವರು ಕನ್ನಡಲ್ಲೂ ಒಂದಷ್ಟು ಸಿನಿಮಾಗಳನ್ನು ಮಾಡಿದ್ದು, ಎಲ್ಲವೂ ಸೂಪರ್ ಹಿಟ್. ಅದರಲ್ಲೂ ಖುಷ್ಭು ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೋಡಿ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.
ರವಿಚಂದ್ರನ್ (V Ravichandran) ಜೊತೆ ಖುಷ್ಭು ರಣಧೀರ, ಯುಗಪುರುಷ, ಅಂಜದಗಂಡು, ಶಾಂತಿ ಕ್ರಾಂತಿ ಸಿನಿಮಾಗಳಲ್ಲಿ ನಟಿಸಿದ್ದರು. ಇವರಿಬ್ಬರ ಕಾಂಬಿನೇಷನ್ ನ ಯಾವುದೋ ಈ ಗೊಂಬೆ ಯಾವುದೋ ಹಾಡು ಹಾಡು ಯಾರೇ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ ಹಾಡು ಸಿಕ್ಕಾಪಟ್ಟೆ ಫೇಮಸ್.
ಕ್ರೇಜಿ ಸ್ಟಾರ್ ರವಿಚಂದ್ರನ್ ಒಬ್ಬ ಒಳ್ಳೆಯ ನಟ ಮಾತ್ರವಲ್ಲ, ಒಬ್ಬ ಒಳ್ಳೆಯ ಮನುಷ್ಯ ಅನ್ನೋದು ಹಲವಾರು ಬಾರಿ ಸಾಬೀತಾಗಿದೆ. ಕೆಲದಿನಗಳ ಹಿಂದೆ ಹಿರಿಯ ನಟಿಯೊಬ್ಬರು, ರವಿಚಂದ್ರನ್ ಅವರ ಸಿನಿಮಾಗಳಲ್ಲಿ ನಟ-ನಟಿಯರಿಗೆ ಪೇಮೆಂಟ್, ಪ್ರತಿದಿನ ಸರಿಯಾದ ಟೈಮಿಗೆ ಸಿಗುತ್ತಿತ್ತು, ತಡವಾದರೆ, ಮ್ಯಾನೇಜರನ್ನೇ ಕೆಲಸದಿಂದ ತೆಗೆದು ಹಾಕುತ್ತಿದ್ದರು, ಅಷ್ಟು ಕಟ್ಟು ನಿಟ್ಟು ಹಾಗೂ ಉತ್ತಮ ಮನುಷ್ಯ ಎಂದಿದ್ದರು.
ಇದೀಗ ನಟಿ ಖುಷ್ಭು ಸಹ ಸಂದರ್ಶನವೊಂದರಲ್ಲಿ ನಟ ರವಿಚಂದ್ರನ್ ಅವರ ಸಹಾಯ ಮಾಡುವ ಗುಣದ ಬಗ್ಗೆ ಹೆಮ್ಮೆಯಿಂದ ಮಾತನಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಕ್ರೇಜ್ ಸ್ಟಾರ್ ನಟಿ ಖುಷ್ಭು ಅವರಿಗೆ ಮಾಡಿದ ಸಹಾಯ ಎಂಥದ್ದು ಗೊತ್ತಾ? ಇಲ್ಲಿವೆ ನೋಡಿ ಸಂಪೂರ್ಣ ವಿವರ.
ಇದು ಖುಷ್ಭು ಸಿನಿಮಾದ ಆರಂಭ ದಿನಗಳಲ್ಲಿ ನಡೆದ ಘಟನೆ. ರವಿಚಂದ್ರನ್ ಜೊತೆ ಒಂದು ಸಿನಿಮಾ ಶೂಟಿಂಗ್ (Cinema Shooting) ನಡೆಯುತ್ತಿದ್ದ ಸಮಯ. ಆಗ ಖುಷ್ಭುಗೆ ಕೇವಲ 17 ವಯಸ್ಸು, ಆದರೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆ ಸಮಯದಲ್ಲಿ ಖುಷ್ಭು ತಾಯಿ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಬಿಲ್ 36 ಸಾವಿರ ರೂಪಾಯಿ ಆಗಿತ್ತು.
ತಾಯಿ ಆಸ್ಪತ್ರೆಯಲ್ಲಿ ಒಂದು ವಾರದಿಂದ ಇದ್ದರು, ಆಸ್ಪತ್ರೆಯವರು ಬಿಲ್ ಕಟ್ಟಿ ಅಮ್ಮನನ್ನು ಮನೆಗೆ ಕರೆದುಕೊಂಡು ಹೋಗಿ ಎಂದಿದ್ದರಂತೆ. ಆದರೆ ಆ ಕಾಲದಲ್ಲಿ 36 ಸಾವಿರ ರೂಪಾಯಿ ಹೊಂದಿಸೋಕೆ ಖುಷ್ಭುಗೆ ಸಾಧ್ಯವಾಗಲಿಲ್ಲ. ಹೇಗಪ್ಪಾ ಹಣ ಹೊಂದಿಸಿ, ಅಮ್ಮನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಲಿ ಎಂದು ಯೋಚನೆ ಮಾಡುತ್ತಿದ್ದರಂತೆ. ಶೂಟಿಂಗ್ ಸೆಟ್ ನಲ್ಲೂ ನಟಿ ಅದೇ ಯೋಚನೆಯಲ್ಲಿದ್ದರಂತೆ.
ಈ ಘಟನೆ ನಡೆದದ್ದು 1987ರಲ್ಲಿ, ರಣಧೀರ ಸಿನಿಮಾ (Ranadheera Film) ಶೂಟಿಂಗ್ ಸಮಯದಲ್ಲಿ, ರವಿಚಂದ್ರನ್, ಸಿನಿಮಾ ನಿರ್ದೇಶಕರೂ ಆಗಿದ್ದರು, ಅವರ ತಂದೆ ಎನ್ ವೀರಸ್ವಾಮಿ ಸಿನಿಮಾ ನಿರ್ಮಾಪಕರಾಗಿದ್ದರು. ಆ ಸಂದರ್ಭದಲ್ಲಿ ಖುಷ್ಭು ಅವರ ಬೇಸರದಲ್ಲಿರೋದು, ಮಧ್ಯಾಹ್ನ ಎಲ್ಲೋ ಹೋಗಿ ಬರೋದನ್ನು ಗಮನಿಸಿದ ರವಿಚಂದ್ರನ್, ಖುಷ್ಭು ಅವರ ಸ್ಟಾಫ್ ಜೊತೆ ಸಮಸ್ಯೆ ಬಗ್ಗೆ ಕೇಳಿ ತಿಳಿದುಕೊಂಡರಂತೆ.
ರವಿಚಂದ್ರನ್ ಇದನ್ನು ತಮ್ಮ ತಂದೆ ವೀರಸ್ವಾಮಿಯವರ (N Veeraswamy) ಬಳಿ ಹೇಳಿದ್ದಾರೆ. ಆಸ್ಪತ್ರೆಯ ವಿವರಗಳನ್ನು ಸಹ ಕೇಳಿದ್ದಾರೆ. ನಂತರ ತಾವೇ ಖುದ್ಧಾಗಿ ಆಸ್ಪತ್ರೆಗೆ ತೆರಳಿದ ವೀರಸ್ವಾಮಿ, ಖುಷ್ಭು ಅವರ ತಾಯಿಯ ಬಳಿ ಅಹಗೂ ಆಸ್ಪತ್ರೆ ವೈದ್ಯರ ಬಳಿ ಮಾತನಾಡಿ, ಆಸ್ಪತ್ರೆ ಬಿಲ್ ಕಟ್ಟಿ, ಅಮ್ಮನನ್ನು ಡಿಸ್ಚಾರ್ಜ್ ಮಾಡಿ, ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದರಂತೆ. ಈ ವಿಷಯ ಖುಷ್ಭು ಅವರಿಗೂ ಗೊತ್ತಿರಲಿಲ್ಲವಂತೆ.
ಆ ದಿನದ ಶೂಟಿಂಗ್ ಮುಗಿದ ಬಳಿಕ ರವಿಚಂದ್ರನ್ ಹಾಗೂ ವೀರಸ್ವಾಮಿಯವರು ಖುಷ್ಭು ಬಳಿ ಬಂದು, ಅಮ್ಮ ಆಸ್ಪತ್ರೆಯಲ್ಲಿದ್ದರು, ಇಷ್ಟು ದೊಡ್ಡ ವಿಷ್ಯವನ್ನು ಯಾಕೆ ಹೇಳಿಲ್ಲ. ನಮ್ಮ ಬಳಿ ಯಾಕೆ ಸಹಾಯ ಕೇಳಿಲ್ಲ ಎಂದು. ಅದಕ್ಕೆ ಖುಷ್ಭು, ನನಗೆ ನಿಮ್ಮ ಬಳಿ ಹೇಗೆ ಸಹಾಯ ಕೇಳಬೇಕು ಅನ್ನೋದು ಗೊತ್ತಾಗಲಿಲ್ಲ ಎಂದಿದ್ದಾರೆ. ಅದಕ್ಕೆ ರವಿಚಂದ್ರನ್ ಹಾಗೂ ಅವರ ತಂದೆ, ನಾವು ಒಟ್ಟಾಗಿ ಕೆಲಸ ಮಾಡ್ತಿದ್ದೀವಿ ಅಂದ್ರೆ ಒಂದೇ ಫ್ಯಾಮಿಲಿಯಂತೆ ಸಹಾಯ ಕೇಳೋದ್ರಲ್ಲಿ ತಪ್ಪೆ ಇಲ್ಲ ಎಂದಿದ್ದರಂತೆ.