MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಟಾಲಿವುಡ್ ಗೆ ಹಾರ್ತಿದ್ದಾರೆ ಕನ್ನಡದ ಬೆಡಗಿ, ತಿರುಪತಿ ದರ್ಶನ ಪಡೆದ ಶರಣ್ಯ ಶೆಟ್ಟಿ

ಟಾಲಿವುಡ್ ಗೆ ಹಾರ್ತಿದ್ದಾರೆ ಕನ್ನಡದ ಬೆಡಗಿ, ತಿರುಪತಿ ದರ್ಶನ ಪಡೆದ ಶರಣ್ಯ ಶೆಟ್ಟಿ

Sharanya Shetty : ಕೃಷ್ಣಂ ಪ್ರಣಯ ಸಿಖಿ ಚಿತ್ರದ ಮೂಲಕ ಹೆಚ್ಚು ಪ್ರಸಿದ್ಧಿಗೆ ಬಂದ ಶರಣ್ಯ ಶೆಟ್ಟಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಶರಣ್ಯ ಶೆಟ್ಟಿ ಶೀಘ್ರವೇ ಟಾಲಿವುಡ್ ಗೆ ಹಾರ್ತಿದ್ದಾರೆ. 

2 Min read
Author : Roopa Hegde
Published : Apr 23 2026, 02:06 PM IST
Share this Photo Gallery
  • FB
  • TW
  • Linkdin
  • Whatsapp
17
ತಿರುಪತಿ ದರ್ಶನ ಪಡೆದ ಶರಣ್ಯ
Image Credit : Asianet News

ತಿರುಪತಿ ದರ್ಶನ ಪಡೆದ ಶರಣ್ಯ

ಹಿಂದಿನ ವರ್ಷ 2025ರಲ್ಲಿ ಶರಣ್ಯ ಶೆಟ್ಟಿ ಫಾರೆಸ್ಟ್ ಚಿತ್ರದಲ್ಲಿ ನಟಿಸಿದ್ದರು. ಅದಾದ್ಮೇಲೆ ಶರಣ್ಯ ಅಭಿನಯದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ ಶರಣ್ಯ ಸಿನಿಮಾಗಳಿಗೆ ಸಹಿ ಹಾಕೋದ್ರಲ್ಲಿ ಬ್ಯುಸಿ ಇದ್ದಾರೆ. ತೆಲುಗು ಸಿನಿಮಾದಲ್ಲಿ ಶರಣ್ಯ ನಟಿಸಲಿದ್ದಾರೆ. ತೆಲುಗಿನಲ್ಲಿ ಶರಣ್ಯ ಅವರದ್ದು ಇದೇ ಮೊದಲ ಸಿನಿಮಾ. ಸಿನಿಮಾ ಅನೌನ್ಸ್ ಮಾಡುವ ಮುನ್ನ ಶರಣ್ಯ ತಿರುಪತಿ ದರ್ಶನ ಪಡೆದಿದ್ದಾರೆ.

27
ಶರಣ್ಯ ಹೇಳಿದ್ದೇನು?
Image Credit : Asianet News

ಶರಣ್ಯ ಹೇಳಿದ್ದೇನು?

ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ದ ಶರಣ್ಯ, ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಇದೇ ಮೊದಲ ಬಾರಿ ತೆಲುಗು ಸಿನಿಮಾದಲ್ಲಿ ನಟಿಸಲಿದ್ದೇನೆ. ಸಿನಿಮಾಗೆ ಸಹಿ ಮಾಡುವ ಮೊದಲು ತಿರುಪತಿ ದರ್ಶನಕ್ಕೆ ಬಂದಿದ್ದೇನೆ. ದರ್ಶನ ಚೆನ್ನಾಗಾಗಿದೆ. ಶೀಘ್ರವೇ ಯಾವ ಸಿನಿಮಾ, ಯಾರ ಜೊತೆ ಎಂಬುದನ್ನು ತಿಳಿಸ್ತೇನೆ ಅಂತ ಶರಣ್ಯ ಶೆಟ್ಟಿ ಹೇಳಿದ್ದಾರೆ.

Related Articles

Related image1
ಒಟಿಟಿ ದೈತ್ಯರಾದ ನೆಟ್‌ಫ್ಲಿಕ್ಸ್-ಅಮೆಜಾನ್ ಪ್ರೈಮ್ ನಡುವೆ 'ಟಾಕ್ಸಿಕ್‌'ಗೆ ಯುದ್ಧ; ಯಾರ ಪಾಲಾಗಲಿದೆ ಯಶ್ ಸಿನಿಮಾ?
Related image2
ಬುರ್ಖಾ ಧರಿಸಿ ನಾವೆಲ್ಲಾ ಹೋಗಬೇಕಿತ್ತು: ಆತಂಕದ ದಿನಗಳ ನೆನೆದ ಹಿರಿಯ ನಟಿ ತಾರಾ ಅನುರಾಧಾ
37
ಕನ್ನಡದಲ್ಲಿ ಬರ್ತಿದ್ಯಾ ಸಿನಿಮಾ?
Image Credit : Asianet News

ಕನ್ನಡದಲ್ಲಿ ಬರ್ತಿದ್ಯಾ ಸಿನಿಮಾ?

ಇನ್ನು ಶರಣ್ಯ ಶೆಟ್ಟಿ ಕನ್ನಡ ಸಿನಿಮಾ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಶರಣ್ಯ ತೆಲುಗು ಮಾತ್ರವಲ್ಲ ಕನ್ನಡ ಸಿನಿಮಾದಲ್ಲೂ ಶೀಘ್ರವೇ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗ ಸಿನಿಮಾ ಹೆಸರು ಹೇಳೋದಾಗಿ ಶರಣ್ಯ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಜನತೆಗೆ ಧನ್ಯವಾದ ಹೇಳಿದ್ದಾರೆ ಶರಣ್ಯ. ಶರಣ್ಯ ಜೊತೆ ಅವರ ಪಾಲಕರು ತಿರುಪತಿ ದರ್ಶನ ಪಡೆದಿದ್ದು, ಮಗಳ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.

47
ಸೋಶಿಯಲ್ ಮೀಡಿಯಾದಲ್ಲಿ ಶರಣ್ಯ ಶೆಟ್ಟಿ
Image Credit : Asianet News

ಸೋಶಿಯಲ್ ಮೀಡಿಯಾದಲ್ಲಿ ಶರಣ್ಯ ಶೆಟ್ಟಿ

ಶರಣ್ಯ ಸೋಶಿಯಲ್ ಮೀಡಿಯಾದಲ್ಲೂ ತಿರುಪತಿ ದರ್ಶನದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ನೆನಪಿಡುವ ದಿನ. ನನ್ನ ಕುಟುಂಬದ ಜೊತೆ ಮುದಿನ ಎಲ್ಲಾ ಹೊಸ ಪ್ರಯಾಣಕ್ಕಾಗಿ ತಿರುಪತಿಯ ಆಶೀರ್ವಾದ ಪಡೆದೆ. ಅಲ್ಲಿನ ಕಂಪನ ಸ್ವರ್ಗದಂತೆ ಭಾಸವಾಗುತ್ತದೆ. ಸರ್ವೇ ಜನಾಹ ಸುಕಿನೋಬವಂತು ಅಂತ ಶರಣ್ಯ ಶೆಟ್ಟಿ ಶೀರ್ಷಿಕೆ ಹಾಕಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

57
ಸರಳ ಸುಂದರಿ
Image Credit : Asianet News

ಸರಳ ಸುಂದರಿ

ಶರಣ್ಯ ಶೆಟ್ಟಿ ಸರಳ ಸುಂದರಿ. ಅವ್ರಿಗೆ ಯಾವುದೇ ವಿಶೇಷ ಮೇಕಪ್ ಅಗತ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್ ಆಗಿರುವ ಶರಣ್ಯ, ಆಗಾಗ ಸುಂದರ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿರುತ್ತಾರೆ. ಸಿರಿಯಲ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ ಶರಣ್ಯ, ಯಶಸ್ವಿಯಾಗಿ ತಮ್ಮ ನಟನಾ ಬದುಕು ಮುಂದುವರೆಸಿದ್ದಾರೆ.

67
ಗಟ್ಟಿಮೇಳದಲ್ಲಿ ಖಳನಾಯಕಿ
Image Credit : Asianet News

ಗಟ್ಟಿಮೇಳದಲ್ಲಿ ಖಳನಾಯಕಿ

ಶರಣ್ಯ ಶೆಟ್ಟಿ ಜೀ ಕನ್ನಡದ ಗಟ್ಟಿಮೇಳ ಸೀರಿಯಲ್ ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಂತ್ರ ಸ್ಯಾಂಡಲ್ವುಡ್ ಜಗತ್ತಿಗೆ ಎಂಟ್ರಿಯಾದ್ರು. ಶರಣ್ಯ ಶೆಟ್ಟಿ ಕೃಷ್ಣಂ ಪ್ರಣಯ ಸಖಿ, ಫಾರೆಸ್ಟ್ ಸಿನಿಮಾಗಿಂತ ಮೊದಲು ಹುಟ್ಟುಹಬ್ಬದ ಶುಭಾಶಯಗಳು, ನಗುವಿನ ಹೂಗಳ ಮೇಲೆ ಸಿನಿಮಾದಲ್ಲಿ ನಟಿಸಿದ್ದರು. ಈಗ ಅವ್ರ ಬಳಿ ಒಂದು ಕನ್ನಡ ಹಾಗೂ ಇನ್ನೊಂದು ತೆಲುಗು ಸಿನಿಮಾ ಇದೆ. ಅದ್ರ ಹೆಸರನ್ನು ಶೀಘ್ರವೇ ಅನೌನ್ಸ್ ಮಾಡಲಿದ್ದಾರೆ. ಶರಣ್ಯ ಶೆಟ್ಟಿ ಅಭಿಮಾನಿಗಳು ಖುಷಿಯಾಗಿದ್ದುಮ, ನಟಿಗೆ ಶುಭಕೋರಿದ್ದಾರೆ.

77
 ರಕ್ಷಿತ್ ಜೊತೆ ಥಳುಕು ಹಾಕಿಕೊಂಡಿದ್ದ ಹೆಸರು
Image Credit : Asianet News

ರಕ್ಷಿತ್ ಜೊತೆ ಥಳುಕು ಹಾಕಿಕೊಂಡಿದ್ದ ಹೆಸರು

ಶರಣ್ಯ ಶೆಟ್ಟಿ ಸಿನಿಮಾ ಹೊರತಾಗಿ ಕಾರ್ಯಕ್ರಮ, ಜಾಹೀರಾತಿನಲ್ಲಿ ಬ್ಯುಸಿಯಾಗಿದ್ದಾರೆ. ಮಾಡರ್ನ್ ಹಾಗೂ ಸಾಂಪ್ರದಾಯಿಕ ಎರಡೂ ಉಡುಗೆಯಲ್ಲಿ ಮಿಂಚುವ ಶರಣ್ಯ ಶೆಟ್ಟಿ, ರಕ್ಷಿತ್ ಶೆಟ್ಟಿ ವಿಷ್ಯಕ್ಕೆ ಚರ್ಚೆಗೆ ಬಂದಿದ್ದರು. ರಕ್ಷಿತ್ ಶೆಟ್ಟಿ ಮದುವೆ ಆಗ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಬುರ್ಖಾ ಧರಿಸಿ ನಾವೆಲ್ಲಾ ಹೋಗಬೇಕಿತ್ತು: ಆತಂಕದ ದಿನಗಳ ನೆನೆದ ಹಿರಿಯ ನಟಿ ತಾರಾ ಅನುರಾಧಾ
Recommended image2
ಒಟಿಟಿ ದೈತ್ಯರಾದ ನೆಟ್‌ಫ್ಲಿಕ್ಸ್-ಅಮೆಜಾನ್ ಪ್ರೈಮ್ ನಡುವೆ 'ಟಾಕ್ಸಿಕ್‌'ಗೆ ಯುದ್ಧ; ಯಾರ ಪಾಲಾಗಲಿದೆ ಯಶ್ ಸಿನಿಮಾ?
Recommended image3
ರಾಷ್ಟ್ರಪತಿ ಭವನದಲ್ಲಿ ಪ್ರಿಯಾಂಕ ಮೋಹನ್… ದ.ಕೊರಿಯಾ ಅಧ್ಯಕ್ಷರ ಭೇಟಿ ಮಾಡಿದ Made in Korea ನಟಿ
Related Stories
Recommended image1
ಒಟಿಟಿ ದೈತ್ಯರಾದ ನೆಟ್‌ಫ್ಲಿಕ್ಸ್-ಅಮೆಜಾನ್ ಪ್ರೈಮ್ ನಡುವೆ 'ಟಾಕ್ಸಿಕ್‌'ಗೆ ಯುದ್ಧ; ಯಾರ ಪಾಲಾಗಲಿದೆ ಯಶ್ ಸಿನಿಮಾ?
Recommended image2
ಬುರ್ಖಾ ಧರಿಸಿ ನಾವೆಲ್ಲಾ ಹೋಗಬೇಕಿತ್ತು: ಆತಂಕದ ದಿನಗಳ ನೆನೆದ ಹಿರಿಯ ನಟಿ ತಾರಾ ಅನುರಾಧಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved