ವಿದೇಶದಲ್ಲಿ ಬರ್ತಡೇ ಆಚರಿಸಿಕೊಂಡ ರಾಧಿಕಾ ಪಂಡಿತ್; ಫೋಟೋ ವೈರಲ್
ಫ್ಯಾಮಿಲಿ ಜೊತೆ ವಿದೇಶದಲ್ಲಿ ಕೇಕ್ ಕಟ್ ಮಾಡಿದ ರಾಧಿಕಾ ಪಂಡಿತ್. ತುಂಬಾ ಚಳಿ ಚಳಿ ಎಂದು ಬರೆದುಕೊಂಡ ಸಿಂಡ್ರೆಲಾ.....

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ 39ನೇ ಹುಟ್ಟುಹಬ್ಬವನ್ನು ವಿದೇಶದಲ್ಲಿ ಆಚರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.
'ತುಂಬಾ ಚಳಿ, ಕೇಕ್ ಮತ್ತು ಮುದ್ದಾಟ...ಎಲ್ಲವೂ ಪರ್ಫೆಕ್ಟ್. ಈ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿ ಮಾಡಿದ ಕುಟುಂಬಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಫೋಟೋದಲ್ಲಿ ರಾಧಿಕಾ ವೈಟ್ ಸ್ವೆಟರ್ ಧರಿಸಿರುವ ರಾಧಿಕಾ, ಕ್ರೀಮ್ ವಿತ್ ಜಾಕೆಟ್ ಧರಿಸಿ ಯಶ್ ಮಿಂಚಿದ್ದಾರೆ. ಐರಾ ಮತ್ತು ಯಥರ್ವ್ ಕಲರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂಧೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳು ತಮ್ಮಿಷ್ಟದ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರಿಸುವೆ ಎಂದು ಹೇಳಿದ್ದರು.
ಸುಖ ದಾಂಪತ್ಯ ಜೀವನದ ಗುಟ್ಟು ಮತ್ತು ಯಶಸ್ಸನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಕೇಳಿದಾಗ ಯಶಸ್ಸು ಮತ್ತು ಸೋಲು ಎರಡನ್ನು ಸಮಾನವಾಗಿ ಮ್ಯಾನೇಜ್ ಮಾಡಬೇಕು ಎಂದು ಸಲಹೆ ಕೂಡ ಕೊಟ್ಟಿದ್ದಾರೆ.
Radhika Pandit Ayra Yatharv Yash
ಕೊರೋನಾ ಲಾಕ್‌ಡೌನ್ ಸಮಯದಿಂದ ಹುಟ್ಟುಹಬ್ಬ ಆಚರಣೆಗೆ ರಾಧಿಕಾ ಪಂಡಿತ್ ಬ್ರೇಕ್ ಹಾಕಿದ್ದರು. ಮಕ್ಕಳಿದ್ದ ಕಾರಣ ಬೇಡ ಎನ್ನುತ್ತಿದ್ದರು. ಇದೇ ಮೊದಲು ಮನೆಯಿಂದ ದೂರ ಉಳಿದುಕೊಂಡು ಆಚರಿಸಿಕೊಳ್ಳುತ್ತಿರುವುದು ಎಂದಿದ್ದರು.
Yatharv Yash Radhika Pandit Ayra
ಪ್ರತಿ ಸಲ ರಾಧಿಕಾ ಫೋಟೋ ಅಪ್ಲೋಡ್ ಮಾಡಿದಾಗ ಹೈಲೈಟ್ ಆಗುವುದು ಐರಾ ಮತ್ತು ಯಶ್. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಕಿಡ್ ಪಟ್ಟ ಪಡೆದಿದ್ದು ಯಶ್ ಮಕ್ಕಳು.