ಮದುವೆ ವಾರ್ಷಿಕೋತ್ಸವ; ಮೊಮ್ಮಕ್ಕಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ರಾಧಿಕಾ ತಂದೆ-ತಾಯಿ
ರಾಧಿಕಾ ಪಂಡಿತ್ ತಂದೆ ತಾಯಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಮದುವೆ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಮೊಮ್ಮಕ್ಕಳ ಜೊತೆ ಸೇರಿ ರಾಧಿಕಾ ತದೆ ತಾಯಿ ಕೇಕ್ ಕತ್ತರಿಸಿದ್ದಾರೆ. ರಾಧಿಕಾ ಯಶ್ ಇಬ್ಬರು ಮಕ್ಕಳು ಹಾಗೂ ರಾಧಿಕಾ ಸಹೋದರನ ಇಬ್ಬರು ಮಕ್ಕಳು ಫೋಟೋದಲ್ಲಿದ್ದಾರೆ. ಈ ಸುಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಧಿಕಾ ಪಂಡಿತ್ ಸದ್ಯ ಅಭಿನಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇಬ್ಬರು ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ ಬಳಿಕ ರಾಧಿಕಾ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.
ಐರಾ ಮತ್ತು ಯಥರ್ವ್ ಜೊತೆ ಹೆಚ್ಚು ಸಮಯ ಕಳೆಯುತ್ತಿರುವ ನಟಿ ರಾಧಿಕಾ ಆಗಾಗ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ರಾಧಿಕಾ ಪತಿ ಯಶ್ ಕೆಜಿಎಫ್-2 ಸಿನಿಮಾ ಬಳಿಕ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಹಾಗಾಗಿ ಪತಿ-ಪತ್ನಿ ಇಬ್ಬರು ಮಕ್ಕಳ ಜೊತೆ ಪ್ರವಾಸ ಮಾಡುತ್ತಿದ್ದಾರೆ.
ರಾಧಿಕಾ ಇದೀಗ ಮತ್ತೊಂದು ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರಾಧಿಕಾ ತಂದೆ-ತಾಯಿ ಕೃಷ್ಣಪ್ರಸಾದ್ ಪಂಡಿತ್ ಹಾಗೂ ಮಂಗಳ ಪಂಡಿತ್ ಮೊಮ್ಮಕ್ಕಳ ಜೊತೆ ಇರುವ ಫೋಟೋ ಇದಾಗಿದೆ. ಹೌದು, ನಾಲ್ಕು ಜನ ಮುದ್ದಾದ ಮೊಮ್ಮಕ್ಕಳ ಜೊತೆ ರಾಧಿಕಾ - ತಂದೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ತಂದೆ ತಾಯಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಮದುವೆ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಮೊಮ್ಮಕ್ಕಳ ಜೊತೆ ಸೇರಿ ರಾಧಿಕಾ ತದೆ ತಾಯಿ ಕೇಕ್ ಕತ್ತರಿಸಿದ್ದಾರೆ. ರಾಧಿಕಾ ಯಶ್ ಇಬ್ಬರು ಮಕ್ಕಳು ಹಾಗೂ ರಾಧಿಕಾ ಸಹೋದರನ ಇಬ್ಬರು ಮಕ್ಕಳು ಫೋಟೋದಲ್ಲಿದ್ದಾರೆ. ಈ ಸುಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೋಟೋ ಶೇರ್ ರಾಧಿಕಾ, ಅಪ್ಪ ಅಮ್ಮನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ನನ್ನ ನೆಚ್ಚಿನ ಫ್ರೆಮ್ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.
ಇತ್ತೀಚಿಗಷ್ಟೆ ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿ ಕುಟುಂಬದ ಜೊತೆ ಕನಕಪುರ ರಸ್ತೆಯಲ್ಲಿರುವ ಅನಿಮಲ್ ಪಾರ್ಕ್‌ಗೆ ಭೇಟಿ ನೀಡಿದ್ದರು. ಯಶ್ ಇಡೀ ಕುಟುಂಬ ಅನಿಮಲ್ ಪಾರ್ಕ್‌ಗೆ ಭೇಟಿ ನೀಡಿದ ವಿಡಿಯೋವನ್ನು ಯಶ್ ಶೇರ್ ಮಾಡಿದ್ದರು.
ಯಶ್ ತನ್ನ ಕೈಯಲ್ಲಿ ಹಾವು ಸೇರಿದಂತೆ ವಿವಿಧ ಪ್ರಾಣಿಗಳನ್ನು ಕೈಯಲ್ಲಿ ಹಿಡಿದಿದ್ದರು. ಪ್ರಾಣಿ, ಪಕ್ಷಿ, ಕೀಟಗಳ ಜೊತೆ ಯಸ್ ಮತ್ತು ರಾಧಿಕಾ ಕುಟುಂಬ ಸಮಯ ಕಳೆದಿದ್ದರು. ಯಶ್ ಶೇರ್ ಮಾಡಿದ್ದ ಈ ವಿಡಿಯೋ ಸಿಕ್ಕಾಪಟ್ಟೆ ವೀಕ್ಷಣೆ ಪಡೆದುಕೊಂಡಿದೆ.