- Home
- Entertainment
- Sandalwood
- ಸತ್ಯ ನನ್ನ ಪರವಾಗಿದೆ, ಸದ್ಯದಲ್ಲೇ ಎಲ್ಲವನ್ನೂ ಹೇಳ್ತೇನೆ; ಪೋಸ್ಟ್ ವೈರಲ್ ಬೆನ್ನಲ್ಲೇ ನಟಿ ಕಾವ್ಯಾ ಗೌಡ ಹೇಳಿಕೆ!
ಸತ್ಯ ನನ್ನ ಪರವಾಗಿದೆ, ಸದ್ಯದಲ್ಲೇ ಎಲ್ಲವನ್ನೂ ಹೇಳ್ತೇನೆ; ಪೋಸ್ಟ್ ವೈರಲ್ ಬೆನ್ನಲ್ಲೇ ನಟಿ ಕಾವ್ಯಾ ಗೌಡ ಹೇಳಿಕೆ!
ಕಾವ್ಯಾ ಗೌಡ ಅವರು ಮಾಡಿರುವ ಈ ಪೋಸ್ಟ್ ಗೆ ಕಾರಣ ಪ್ರೇಮಾ ಅವರು ಮಾದ್ಯಮದ ಮುಂದೆ ನೀಡಿರುವ ಹೇಳಿಕೆಗಳು ವೈರಲ್ ಆಗಿರೋದು. ಕೆಲವರು ಪ್ರೇಮಾ ಪರವಾಗಿ ಮಾತನಾಡಿ ಕಾಮೆಂಟ್ ಮಾಡಿದ ಹಿನ್ನೆಲೆಯಲ್ಲಿ ಕಾವ್ಯಾ ಗೌಡ ಅವರು ಈ ಪೋಸ್ಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಅದೇನು ಹೇಳಿದ್ದಾರೆ ನೋಡಿ..

'ರಾಧಾ ರಮಣ' ಹಾಗೂ 'ಗಾಂಧಾರಿ' ಸೀರಿಯಲ್ ಖ್ಯಾತಿಯ ನಟಿ ಕಾವ್ಯಾ ಗೌಡ (Kavya Gowda) ಮತ್ತು ಅವರ ಪತಿ ಸೋಮಶೇಖರ್ ಮೇಲೆ, ಸೋಮಶೇಖರ್ ಅಣ್ಣ, ಅತ್ತಿಗೆ, ಅತ್ತಿಗೆಯ ತಂದೆ ಹಾಗೂ ತಂಗಿ ಹಲ್ಲೆ ನಡೆಸಿದ್ದಾರೆ. ಸೋಮಶೇಖರ್ ಮೇಲೆ ಚಾಕುವಿನಿಂದ ದಾಳಿಯಾಗಿದೆ, ಅವರೀಗ ಐಸಿಯುದಲ್ಲಿ ಇದ್ದಾರೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಆದರೆ, ಈ ಬಗ್ಗೆ ನಟಿ ಕಾವ್ಯಾ ಗೌಡ ಅವರು ಏನ್ ಹೇಳಿದ್ದಾರೆ? ಈ ಸ್ಟೋರಿ ನೋಡಿ..
'ಕಾವ್ಯಾ ಗೌಡ ಅವರ ಪತಿಯ ಅಣ್ಣನ ಹೆಂಡ್ತಿ ನನ್ನ ಮಗುವಿನ ಮೇಲೆ ದಾಳಿ ಮಾಡಿದ್ದಾರೆ. ದೊಣ್ಣೆಯಿಂದ ನನಗೆ ಹೊಡೆಯಲು ಬಂದಿದ್ದರು. ಚಪ್ಪಲಿ ಕೂಡ ಎತ್ತಿಕೊಂಡು ಹೊಡೆಯಲು ಬಂದಿದ್ದರು. ಅ*ತ್ಯಾಚಾ*ರ ಹಾಗೂ ಕೊಲೆ ಬೆದರಿಕೆಯನ್ನು ಕೂಡ ನನಗೆ ಹಾಕಲಾಗಿದೆ' ಎಂದು ಹೇಳಿದ್ದಾರೆ ಕಾವ್ಯಾ ಗೌಡ. ಜೊತೆಗೆ, ಈ ಬಗ್ಗೆ ಕಾವ್ಯಾ ಅವರು ಪೊಲೀಸ್ ದೂರು ಕೂಡ ದಾಖಲಿಸಿದ್ದಾರೆ. ಸದ್ಯ ಕಾವ್ಯಾ ಪತಿ ಸೋಮಶೇಖರ್ ದೂರು ದಾಖಲಿಸಿದ್ದು, ಮನೆ ಜಗಳ ಬೀದಿಗೆ ಬಂದು ಎಲ್ಲೆಡೆ ಸುದ್ದಿಯಾಗಿದೆ.
ಕಾವ್ಯಾ ದೂರಿಗೆ ಅವರ ಓರಗಿತ್ತಿ ಪ್ರೇಮಾ ಪ್ರತಿದೂರು ದಾಖಲಿಸಿದ್ದಾರೆ. 'ಕಾವ್ಯ ನನ್ನ ಮೇಲೆ ದಾಳಿ ನಡೆಸಿದ್ದಾರೆ, ನನ್ನ ಮಾಂಗಲ್ಯವನ್ನು ಕಿತ್ತು ಎಸೆದಿದ್ದಾರೆ, ಅವರೇ ನಮಗೆ ಅ*ತ್ಯಾಚಾ*ರ ಬೆದರಿಕೆ ಹಾಕಿದ್ದಾರೆ' ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ದೂರು-ಪ್ರತಿದೂರುಗಳನ್ನು ಸದ್ಯ ಪೊಲೀಸರು ಪರೀಶಿಲನೆ ನಡೆಸುತ್ತಿದ್ದಾರೆ. ಈ ಮಧ್ಯೆ ಕಾವ್ಯಾ ಗೌಡ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಹಾಗಿದ್ರೆ ಕಾವ್ಯಾ ಗೌಡ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಏನಿದೆ?
ಕಾವ್ಯಾ ಗೌಡ ಪೋಸ್ಟ್ ಮ್ಯಾಟರ್:-
ಆಸ್ತಿ ವಿಷಯದಲ್ಲಿ ನಡೆದಿರುವ ಕಲಹ ಇದೀಗ ದೊಡ್ಡಮಟ್ಟದಲ್ಲಿ ಸಾಗುತ್ತಿದ್ದು, ಈ ಹಿನ್ನೆಲೆಯಲಿ ಕಾವ್ಯಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ 'ನಾನು ಮೌನವಾಗಿದ್ದೇನೆ ಅಂದರೆ ಭಯದಿಂದಲ್ಲ, ಕಾಲದ ಮೇಲಿನ ನಂಬಿಕೆಯಿಂದ. ಇಂದು ಅಲ್ಲದಿದ್ದರೂ ನಾಳೆ ಕಾಲವೇ ಸತ್ಯವನ್ನು ಹೊರತರುತ್ತದೆ. ಇಂದು ನನ್ನ ಮಾತು ಕೇಳಿಸದಿದ್ದರೂ ಪರವಾಗಿಲ್ಲ, ನಾಳೆ ಕಾಲವೇ ನನ್ನ ಪರವಾಗಿ ಮಾತನಾಡುತ್ತದೆ.
ನೋವು ಸಹಿಸಿಕೊಂಡೆ, ಮೌನ ಆಯ್ಕೆ ಮಾಡಿಕೊಂಡೆ ,ಕಾರಣ ಕಾಲಕ್ಕೆ ನ್ಯಾಯ ಕೊಡಲು ಸಮಯ ಬೇಕು ಎನ್ನುವ ಕಾರಣಕ್ಕೆ ಅಷ್ಟೇ. ಕಾಲ ಕಷ್ಟ ಕೊಟ್ಟರೂ ಭಯ ಇಲ್ಲ. ಇಂದು ನನ್ನ ನೋವು ಕೆಲವರಿಗೆ ಅರ್ಥವಾಗದಿದ್ದರೂ, ನಾಳೆ ಕಾಲವೇ ಎಲ್ಲವನ್ನೂ ಹೇಳುತ್ತದೆ. ಮಹಾಕಾಳೇಶ್ವರನ ನನ್ನ ಜೊತೆ ಇದ್ದಾನೆ. ಓಂ ಸಾಯಿ ರಾಮ್' ಎಂದು ಕಾವ್ಯಾ ಗೌಡ ಬರೆದುಕೊಂಡಿದ್ದಾರೆ.
ತಮ್ಮ ನಡೆಗೆ ಸಮರ್ಥನೆ ಕೊಟ್ಟ ಕಾವ್ಯಾ ಗೌಡ
ಹೌದು, ಕಾವ್ಯಾ ಗೌಡ ಅವರು ಮಾಡಿರುವ ಈ ಪೋಸ್ಟ್ ಗೆ ಕಾರಣ ಪ್ರೇಮಾ ಅವರು ಮಾದ್ಯಮದ ಮುಂದೆ ನೀಡಿರುವ ಹೇಳಿಕೆಗಳು ವೈರಲ್ ಆಗಿರೋದು. ಕೆಲವರು ಪ್ರೇಮಾ ಪರವಾಗಿ ಮಾತನಾಡಿ ಕಾಮೆಂಟ್ ಮಾಡಿದ ಹಿನ್ನೆಲೆಯಲ್ಲಿ ಕಾವ್ಯಾ ಗೌಡ ಅವರು ಈ ಪೋಸ್ಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಕಾವ್ಯಾ ಗೌಡ 'ನಾನು ತಪ್ಪು ಮಾಡಿಲ್ಲ. ತಪ್ಪು ಮಾಡಿದವರಿಗೆ ಶೀಘ್ರದಲ್ಲೇ ಶಿಕ್ಷೆಯಾಗಲಿದೆ. ಕಾಲವೇ ಎಲ್ಲವನ್ನೂ ಹೇಳುತ್ತದೆ' ಎಂದು ಹೇಳಿರುವಂತಿದೆ ಅವರು ಮಾಡಿರುವ ಈ ಪೋಸ್ಟ್.
ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ನಟಿ ಕಾವ್ಯಾ ಗೌಡ ಅವರು 'ಇನ್ನು ಒಂದೆರಡು ದಿನಗಳಲ್ಲಿ ಸತ್ಯವನ್ನು ನಾನೇ ಮುಂದೆ ಬಂದು ಹೇಳ್ತೀನೆ. ಸದ್ಯಕ್ಕೆ ನನ್ನ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಆ ಕಾರಣಕ್ಕೆ ಆನು ಸೈಲೆಂಟ್ ಆಗಿದ್ದೇನೆ. ಆದರೆ, ಸದ್ಯದಲ್ಲೇ ಎಲ್ಲ ಸತ್ಯಸಂಗತಿಯನ್ನೂ ವನ್ನೂ ಜಗತ್ತಿನ ಮುಂದೆ ತೆರೆದಿಡಲಿದ್ದೇನೆ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

