ಮೇಘನಾ ರಾಜ್ ವರ್ಕೌಟ್; ಜಿಮ್ನಲ್ಲಿ ರಾಯನ್ ತುಂಟಾಟ ನೋಡಿ...
ವೈರಲ್ ಅಯ್ತು ರಾಯನ್ ರಾಜ್ ಸರ್ಜಾ ತುಂಟಾಟದ ಫೋಟೋ. ವರ್ಕೌಟ್ ಮಾಡೋಕೆ ಸ್ಫೂರ್ತಿ ಯಾರು ನೋಡಿ....
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ತತ್ಸಮ ತದ್ಭವ ಚಿತ್ರದ ಮೂಲಕ ಬಿಗ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಸಿನಿಮಾ ಚಿತ್ರೀಕರಣ ಈಗಾಗಲೆ ಆರಂಭವಾಗಿದೆ. ಹೀಗಾಗಿ ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸುತ್ತಿದ್ದಾರೆ ಅನ್ನೋದು ಈ ಫೋಟೋ ನೋಡಿದರೆ ತಿಳಿಯುತ್ತದೆ.
ಮೇಘನಾ ರಾಜ್ ದಿನ ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ. ಇಂದು ಸ್ಪೆಷಲ್ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದಾನೆ ಪುತ್ರ ರಾಯನ್ ರಾಜ್ ಸರ್ಜಾ.
'Motivation' ನನ್ನ ಜಿಮ್ ಪಾರ್ಟನರ್ ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ. ಜೊತೆಗೆ ಚಿರು ಇನ್ಸ್ಟಾಗ್ರಾಂ ಖಾತೆ ಕೂಡ ಟ್ಯಾಗ್ ಮಾಡಿದ್ದಾರೆ.
ಈ ಹಿಂದೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ವರ್ಕೌಟ್ ಮಾಡುತ್ತಿರುವ ಫೋಟೋಗಳು ಕೂಡ ವೈರಲ್ ಅಗಿತ್ತು. ಕಪಲ್ ಗೋಲ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.
ಯುಟ್ಯೂಬ್ ಚಾನೆಲ್ ಆರಂಭಿಸಿರುವ ಮೇಘನಾ ರಾಜ್ ವಿಡಿಯೋದಲ್ಲಿ ಆಗಾಗ ರಾಯನ್ನ ತೋರಿಸಿ ಆತನಿಗೆ ಇರುವ ಮ್ಯೂಸಿಕ್ ಇಂಟ್ರೆಸ್ಟ್ ಜನರಿಗೆ ತಿಳಿಯಲಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.