ಶಾಲೆಗೆ ಕಾಲಿಟ್ಟ ರಾಯನ್ ಸರ್ಜಾ; ಭಾವುಕರಾದ ಮೇಘನಾ ರಾಜ್!
ಸ್ಕೂಲ್‌ಗೆ ಕಾಲಿಟ್ಟ ಜ್ಯೂನಿಯರ್ ಚಿರು. ನಗು ಮುಖ ನೋಡಿ ಖುಷಿ ಪಟ್ಟ ಅಭಿಮಾನಿಗಳು. ಭಾವುಕರಾದ ಮೇಘನಾ ರಾಜ್....
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಪುತ್ರನನ್ನು ಸ್ಕೂಲ್‌ಗೆ ಕಳುಹಿಸಿದ್ದಾರೆ.
ರಾಯನ್ ರಾಜ್ ಮೊದಲ ದಿನ ಸ್ಕೂಲ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೇಘನಾ ರಾಜ್ ಭಾವುಕ ಪೋಸ್ಟ್ ಹಾಕಿದ್ದಾರೆ.
'ನಾವು ಪೋಷಕರಾದ ಮೇಲೆ ಮಕ್ಕಳು ಮಾತ್ರವಲ್ಲ ನಾವು ಕೂಡ ಜೀವನ ಪ್ರತಿಯೊಂದು ಮೈಲಿಗಲ್ಲು ದಾಟುತ್ತೀವಿ' ಎಂದು ಮೇಘನಾ ಬರೆದುಕೊಂಡಿದ್ದಾರೆ.
'ಇಂದು ನಮ್ಮ ಜೀವನದ ತುಂಬಾ ಸ್ಪೆಷಲ್ ದಿನವಾಗಿದೆ. ರಾಯನ್ ರಾಜ್ ಸರ್ಜಾ ಸ್ಕೂಲ್‌ನ ಮೊದಲ ದಿನ ಇಂದು. ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ'
ವಿದ್ಯಾಭ್ಯಾಸ, ಜ್ಞಾನ ಹಾಗೂ ಜೀವನ ಅತಿ ಅಮೂಲ್ಯವಾದ ಪಾಠಗಳನ್ನು ಕಲಿಯುವುದಕ್ಕೆ ರಾಯನ್ ಮೊದಲ ಹೆಜ್ಜೆ ಇಡುತ್ತಿದ್ದಾನೆ. ನಿಮ್ಮ ಆಶಿರ್ವಾದ ಮತ್ತು ಪ್ರೀತಿ ಅವನ ಮೇಲಿರಲ್ಲಿ ಎಂದು ಮೇಘನಾ ಹೇಳಿದ್ದಾರೆ.