- Home
- Entertainment
- Sandalwood
- 'ಸ್ಕ್ರೀನ್ ಮೇಲೆ ಮುಗುಳ್ನಗುವ ಈ ನಟಿ ನಿಜ ಜೀವನದಲ್ಲಿ ಇರೋದೇ ಬೇರೆ ತರ'.. ಕಿಯಾರಾ ಅಡ್ವಾಣಿಗೆ ಬೇಕಿತ್ತಾ ಇದು?
'ಸ್ಕ್ರೀನ್ ಮೇಲೆ ಮುಗುಳ್ನಗುವ ಈ ನಟಿ ನಿಜ ಜೀವನದಲ್ಲಿ ಇರೋದೇ ಬೇರೆ ತರ'.. ಕಿಯಾರಾ ಅಡ್ವಾಣಿಗೆ ಬೇಕಿತ್ತಾ ಇದು?
ಬಾಲಿವುಡ್‌ನ 'ಕ್ಯೂಟ್ ನಟಿ' ಎಂದೇ ಕರೆಸಿಕೊಳ್ಳುವ ಕಿಯಾರಾ ಅಡ್ವಾಣಿ ಸದ್ಯ ವಿವಾದವೊಂದರ ಸುಳಿಗೆ ಸಿಲುಕಿದ್ದಾರೆ. ಬೆಳ್ಳಿ ಪರದೆಯ ಮೇಲೆ ಸದಾ ಮುಗುಳ್ನಗುತ್ತಾ ಕಾಣಿಸಿಕೊಳ್ಳುವ ಈ ನಟಿ, ನಿಜ ಜೀವನದಲ್ಲಿ ಅಷ್ಟೇನೂ ವಿನಮ್ರವಾಗಿಲ್ಲ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಏನ್ ಮ್ಯಾಟರ್?

ನಟಿ ಕಿಯಾರಾ ಅಡ್ವಾಣಿ ಅಹಂಕಾರದ ಪರಮಾವಧಿನಾ? ವಿಮಾನದಲ್ಲಿ ನಡೆದ ಘಟನೆ ಬಿಚ್ಚಿಟ್ಟ ಇನ್ಫ್ಲುಯೆನ್ಸರ್: ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ!
ಬಾಲಿವುಡ್‌ನ 'ಕ್ಯೂಟ್ ನಟಿ' ಎಂದೇ ಕರೆಸಿಕೊಳ್ಳುವ ಕಿಯಾರಾ ಅಡ್ವಾಣಿ ಸದ್ಯ ವಿವಾದವೊಂದರ ಸುಳಿಗೆ ಸಿಲುಕಿದ್ದಾರೆ. ಬೆಳ್ಳಿ ಪರದೆಯ ಮೇಲೆ ಸದಾ ಮುಗುಳ್ನಗುತ್ತಾ ಕಾಣಿಸಿಕೊಳ್ಳುವ ಈ ನಟಿ, ನಿಜ ಜೀವನದಲ್ಲಿ ಅಷ್ಟೇನೂ ವಿನಮ್ರವಾಗಿಲ್ಲ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಇನ್ಫ್ಲುಯೆನ್ಸರ್ ಒಬ್ಬರು ತಮ್ಮ ತಾಯಿಯ ಜೊತೆ ಕಿಯಾರಾ ನಡೆದುಕೊಂಡ ರೀತಿಯನ್ನು ವಿವರಿಸಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಏನಿದು ಘಟನೆ?
ಕಾರ್ತಿಕೇಯ ತಿವಾರಿ ಎಂಬ ಇನ್ಫ್ಲುಯೆನ್ಸರ್ ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಜೈಪುರದಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕಾರ್ತಿಕೇಯ ತಮ್ಮ ತಾಯಿ ಮತ್ತು ಸಹೋದರನೊಂದಿಗೆ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅದೇ ವಿಮಾನದಲ್ಲಿ 'ಸತ್ಯಪ್ರೇಮ್ ಕಿ ಕಥಾ' ಚಿತ್ರದ ಜೋಡಿಗಳಾದ ಕಿಯಾರಾ ಅಡ್ವಾಣಿ ಮತ್ತು ಕಾರ್ತಿಕ್ ಆರ್ಯನ್ ಕೂಡ ಇದ್ದರು.
ಈ ಸಂದರ್ಭದಲ್ಲಿ ಸೀಟುಗಳ ಗೊಂದಲದಿಂದಾಗಿ ಕಾರ್ತಿಕೇಯ ಅವರ ತಾಯಿ ತಿಳಿಯದೇ ಕಿಯಾರಾ ಅಡ್ವಾಣಿ ಅವರಿಗೆ ಮೀಸಲಾಗಿದ್ದ ಸೀಟಿನಲ್ಲಿ ಕುಳಿತಿದ್ದರು. ನಂತರ ಅಲ್ಲಿಗೆ ಬಂದ ಕಿಯಾರಾ ಅಡ್ವಾಣಿ ಅವರ ನಡೆ ಕಾರ್ತಿಕೇಯ ಅವರಿಗೆ ಬೇಸರ ತರಿಸಿದೆ. "ಯಾರಾದರೂ ನಿಮ್ಮ ಸೀಟಿನಲ್ಲಿ ಕುಳಿತಿದ್ದರೆ, ಇದು ನನ್ನ ಸೀಟು ಎಂದು ಹೇಳುವುದು ಸಹಜ. ಆದರೆ ಕಿಯಾರಾ ಅವರು ನನ್ನ ತಾಯಿಯನ್ನು ನೋಡಿದ ರೀತಿ ಬಹಳ ಅಸಹ್ಯವಾಗಿತ್ತು. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಸೀಟಿನಲ್ಲಿ ಕುಳಿತು ಅದನ್ನು ಹಾಳು ಮಾಡಿದ್ದಾರೆ ಎಂಬಂತೆ ಅವರು ಕೆಟ್ಟದಾಗಿ ಮುಖ ಸಿಂಡರಿಸಿದರು," ಎಂದು ಕಾರ್ತಿಕೇಯ ಆರೋಪಿಸಿದ್ದಾರೆ.
ಸೆಲೆಬ್ರಿಟಿ ಆರಾಧನೆಯ ಬಗ್ಗೆ ಪ್ರಶ್ನೆ
ಏರ್ ಹೋಸ್ಟೆಸ್ ಬಂದು ಸೀಟು ಬದಲಾಯಿಸಲು ಹೇಳಿದ ತಕ್ಷಣ ಕಾರ್ತಿಕೇಯ ಅವರ ತಾಯಿ ಅಲ್ಲಿಂದ ಎದ್ದು ತಮ್ಮ ಸೀಟಿಗೆ ಹೋಗಿದ್ದಾರೆ. ಆದರೆ ಕಿಯಾರಾ ಅವರ ಆ ಕ್ಷಣದ ವರ್ತನೆ ಇನ್ಫ್ಲುಯೆನ್ಸರ್‌ಗೆ ತೀವ್ರ ನೋವುಂಟು ಮಾಡಿದೆ. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಅವರು, "ಜನರು ಯಾಕೆ ಈ ಸೆಲೆಬ್ರಿಟಿಗಳನ್ನು ಇಷ್ಟೊಂದು ಆರಾಧಿಸುತ್ತಾರೋ ನನಗೆ ಅರ್ಥವಾಗುವುದಿಲ್ಲ. ನಟರಿಗೆ ಅಭಿಮಾನಿಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಅವರ ಪಾಲಿಗೆ ಬೇರೆ ಯಾರೂ ಅಸ್ತಿತ್ವದಲ್ಲೇ ಇರುವುದಿಲ್ಲ," ಎಂದು ಕಿಡಿಕಾರಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ: ಎರಡು ಭಾಗವಾದ ಇಂಟರ್ನೆಟ್!
ಕಾರ್ತಿಕೇಯ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಗುಂಪುಗಳಾಗಿ ವಿಭಜನೆಯಾಗಿದ್ದಾರೆ. ಕೆಲವರು ಕಿಯಾರಾ ಪರವಾಗಿ ಬ್ಯಾಟಿಂಗ್ ಮಾಡಿದರೆ, ಇನ್ನು ಕೆಲವರು ನಟಿಯ ವರ್ತನೆಯನ್ನು ಖಂಡಿಸಿದ್ದಾರೆ.
ಒಬ್ಬ ಬಳಕೆದಾರರು, "ಭಾರತದಲ್ಲೂ ದಕ್ಷಿಣ ಕೊರಿಯಾ ಅಥವಾ ಚೀನಾದಂತೆ ಅಹಂಕಾರಿ ನಟರನ್ನು 'ಕ್ಯಾನ್ಸಲ್' ಮಾಡುವ ಸಂಸ್ಕೃತಿ ಬರಬೇಕು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಕಿಯಾರಾ ನಿಜಕ್ಕೂ ಅಹಂಕಾರಿ, ಇಂತಹ ಅನುಭವ ಹಲವರಿಗೆ ಆಗಿದೆ" ಎಂದು ಬರೆದುಕೊಂಡಿದ್ದಾರೆ.
ಆದರೆ ಕಿಯಾರಾ ಅಭಿಮಾನಿಗಳು ಮಾತ್ರ ನಟಿಯ ಬೆಂಬಲಕ್ಕೆ ನಿಂತಿದ್ದಾರೆ. "ಅದು ವಿಮಾನದ ಪ್ರಯಾಣ, ಸೀಟು ಸಂಖ್ಯೆ ನೋಡಿ ಕುಳಿತುಕೊಳ್ಳುವುದು ಕನಿಷ್ಠ ಜ್ಞಾನ. ಬೇರೆಯವರು ಬಂದು ನನ್ನ ಸೀಟಿನಲ್ಲಿ ಕುಳಿತಿದ್ದರೆ ನನಗೂ ಕೋಪ ಬರುತ್ತದೆ. ಇದರಲ್ಲಿ ಅವರ ತಪ್ಪೇನಿದೆ? ಗೌರವ ಎಂಬುದು ಪರಸ್ಪರ ಇರಬೇಕು," ಎಂದು ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ, ಕ್ಯಾಮೆರಾ ಮುಂದೆ ನಗು ಚೆಲ್ಲುವ ನಟ-ನಟಿಯರ ಅಸಲಿ ಮುಖವಾಡ ಕಳಚಿದೆಯೇ ಅಥವಾ ಸಣ್ಣ ವಿಚಾರವನ್ನು ದೊಡ್ಡದು ಮಾಡಲಾಗುತ್ತಿದೆಯೇ ಎಂಬ ಚರ್ಚೆ ಈಗ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ. ಈ ಆರೋಪದ ಬಗ್ಗೆ ಕಿಯಾರಾ ಅಡ್ವಾಣಿ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

