- Home
- Entertainment
- Sandalwood
- ನನ್ನ ಜೀವನದ ಅತ್ಯಮೂಲ್ಯ ಉಡುಗೊರೆ ನೀನು... ಪತ್ನಿಗೆ ಆನಿವರ್ಸರಿ ವಿಶ್ ಮಾಡಿದ ನಿಖಿಲ್ ಕುಮಾರಸ್ವಾಮಿ
ನನ್ನ ಜೀವನದ ಅತ್ಯಮೂಲ್ಯ ಉಡುಗೊರೆ ನೀನು... ಪತ್ನಿಗೆ ಆನಿವರ್ಸರಿ ವಿಶ್ ಮಾಡಿದ ನಿಖಿಲ್ ಕುಮಾರಸ್ವಾಮಿ
ಸ್ಯಾಂಡಲ್ ವುಡ್ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಪತ್ನಿ ಜೊತೆಗಿನ ಫೋಟೊ ಶೇರ್ ಮಾಡುವ ಮೂಲಕ ಮುದ್ದಾಗಿ ವಿಶ್ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಟ (Sandalwood Actor) ಹಾಗೂ ರಾಜಕಾರಣಿಯಾಗಿರುವ ನಿಖಿಲ್ ಕುಮಾರಸ್ವಾಮಿ ಇಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಪತ್ನಿ ರೇವತಿಗೆ ಆನಿವರ್ಸರಿಯ ಶುಭ ಕೋರಿದ್ದಾರೆ.
ಪತ್ನಿ ರೇವತಿ (Revathi Nikhil) ಜೊತೆಗಿನ ಒಂದಷ್ಟು ಮುದ್ದಾದ ಫೊಟೊಗಳನ್ನು ನಿಖಿಲ್ ಕುಮಾರಸ್ವಾಮಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಜೀವನದ ಪಯಣದಲ್ಲಿ ಜೊತೆಯಾಗಿರುವ ಪತ್ನಿಗೆ ಅಷ್ಟೇ ಪ್ರೀತಿಯಿಂದ ಜಾಗ್ವಾರ್ ನಾಯಕ ನಿಖಿಲ್ ಕುಮಾರಸ್ವಾಮಿ ವಿಶ್ ಮಾಡಿದ್ದಾರೆ.
ನೀನು ನನ್ನ ಜೀವನದಲ್ಲಿ ಸಿಕ್ಕ ಅತ್ಯಂತ ದೊಡ್ಡ ಉಡುಗೊರೆ, ನಿನ್ನ ಪ್ರೀತಿ, ಶಕ್ತಿ, ತ್ಯಾಗ ಮತ್ತು ಕೃಪೆ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದಷ್ಟು ನನಗೆ ಸ್ಫೂರ್ತಿಯಾಗಿರುವೆ ನೀನು. ನೀನು ನನ್ನ ಜೀವನಕ್ಕೆ ಬೆಳಕು ತಂದಿರುವುದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ನಿಖಿಲ್ (Nikhil Kumaraswamy)ತಿಳಿಸಿದ್ದಾರೆ.
ಅಷ್ಟೇ ಅಲ್ಲ ನಿಮ್ಮೊಂದಿಗೆ ಜೀವನದ ಈ ಪ್ರಯಾಣದಲ್ಲಿ ಜೊತೆಯಾಗಿ ನಡೆಯಲು ನಾನು ತುಂಬಾ ಧನ್ಯನಾಗಿದ್ದೇನೆ, ಪ್ರತಿ ದಿನವೂ ನಾನು ನಿನ್ನನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇನೆ, ನಮಗೆ ವಾರ್ಷಿಕೋತ್ಸವದ ಶುಭಾಶಯಗಳು (Happy wedding anniversary to us) ಎಂದು ಶುಭ ಕೋರಿದ್ದಾರೆ.
ಜನತಾದಳದ ನಾಯಕಾರಾಗಿರುವ ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿಯವರ ಮಗನಾಗಿರುವ ನಿಖಿಲ್ ಕುಮಾರಸ್ವಾಮಿ, ಮನೆಯವರು ನೋಡಿ ನಿಶ್ಚಯಿಸಿದ್ದ ವಧು ರೇವತಿ ಜೊತೆ 2020 ರ ಏಪ್ರಿಲ್ 17 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ನಿಖಿಲ್ ಹಾಗೂ ರೇವತಿ ದಂಪತಿಗಳು ಇದೀಗ 5ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಜೋಡಿಗೆ ಅಭಿಮಾನಿಗಳು, ಬೆಂಬಲಿಗರು ಶುಭ ಕೋರಿದ್ದಾರೆ. ಗಂಡನ ಎಲ್ಲಾ ಕೆಲಸದಲ್ಲಿ ಜೊತೆಯಾಗಿ ನಿಲ್ಲುವ ರೇವತಿಯನ್ನು ನೋಡಿದ್ರೆ, ಜನರಿಗಂತೂ ತುಂಬಾನೆ ಇಷ್ಟ. ನಿಖಿಲ್- ರೇವತಿ ದಂಪತಿಗಳು ಜನಮೆಚ್ಚಿದ ಜೋಡಿಗಳೂ ಕೂಡ ಆಗಿದ್ದಾರೆ.
ಇನ್ನು ನಿನ್ನೆಯಷ್ಟೇ ನಿಖಿಲ್ ಮತ್ತು ರೇವತಿ ಬೆಂಗಳೂರು ನಗರದ ಪ್ರಸಿದ್ಧ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಜೊತೆಗೆ ತಾಯಿ ಶ್ರೀ ಬನಶಂಕರಿ ಅಮ್ಮನವರ ಅನುಗ್ರಹ ನಾಡಿನ ಜನತೆ ಮೇಲಿರಲೇಂದು ಪ್ರಾರ್ಥಿಸಿದ್ದರು. ಈ ಫೋಟೊಗಳನ್ನು ಸಹ ನಿಖಿಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.