ನಿಖಿಲ್ ಕುಮಾರಸ್ವಾಮಿ ಕುಟುಂಬ ಸಮೇತ ತಿರುಮಲ ತಿಮ್ಮಪ್ಪನ ದರ್ಶನ ಪಡೆದರು. ತಂದೆ ಕುಮಾರಸ್ವಾಮಿ, ತಾಯಿ ಅನಿತಾ, ಪತ್ನಿ ರೇವತಿ ಹಾಗೂ ಮಗನೊಂದಿಗೆ ಭೇಟಿ ನೀಡಿ, ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು. ಈ ದೈವಿಕ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.
ಸ್ಯಾಂಡಲ್ ವುಡ್ ನಟ ಹಾಗೂ ರಾಜಕಾರಣಿಯಾಗಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy,), ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತಾಯಿ ಅನಿತಾ, ಪತ್ನಿ ಹಾಗೂ ಮಗನೊಂದಿಗೆ ತಿರುಮಲಕ್ಕೆ ತೆರಳಿದ್ದು, ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ. ತಿರುಪತಿಯ ದೇಗುಲದ ಮುಂದೆ ಕುಟುಂಬ ಸಮೇತರಾಗಿ ನಿಂತು ಫೋಟೊ ತೆಗೆಸಿಕೊಂಡಿದ್ದು, ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸದ್ದಿಲ್ಲದೆ ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆ; ಜೆಡಿಎಸ್ ಕಾರ್ಯಕರ್ತರನ್ನ ಹುರಿದುಂಬಿಸಲು ಉತ್ತರ ಕರ್ನಾಟಕ ಪ್ರವಾಸ!
ನಿಖಿಲ್ ಕುಮಾರಸ್ವಾಮಿ ಹೆಚ್ಚಾಗಿ ತಮ್ಮ ಕುಟುಂಬ ಸಮೇತರಾಗಿ ದೇಗುಲ ದರ್ಶನ ಮಾಡುತ್ತಲೇ ಇರುತ್ತಾರೆ. ಚುನಾವಣೆಯಲ್ಲಿ ಸೋತ ಬಳಿಕ ಕಳೆದ ಡಿಸೆಂಬರ್ ನಲ್ಲಿ ನಿಖಿಲ್ ಪತ್ನಿ ರೇವತಿ ಜೊತೆ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ (Trayambakeshwara temple Nasik ) ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿನ ಫೋಟೊಗಳನ್ನು ಹಂಚಿಕೊಂಡಿದರು. ಅದಕ್ಕೂ ಮುನ್ನ ನಿಖಿಲ್ ಹಾಸನ ಜಿಲ್ಲೆಯ ಹಳೇಕೋಟೆ ಗ್ರಾಮ ಶ್ರೀ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ, ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯ ಮೈಸೂರು, ಶಿರಡಿಯಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರಕ್ಕೆ ಕುಟುಂಬ ಸಮೇತ ತೆರಳಿ ದರ್ಶನ ಪಡೆದು ಬಂದಿದ್ದರು. ಇದೀಗ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದು ಬಂದಿದ್ದಾರೆ.
ಚುನಾವಣೆಯಲ್ಲಿ ಸೋತ ನಿಖಿಲ್ ಕುಮಾರಸ್ವಾಮಿಯಿಂದ ತ್ರಯಂಬಕೇಶ್ವರನಿಗೆ ವಿಶೇಷ ಪೂಜೆ
ಈ ಕುರಿತು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ನಿಖಿಲ್, ತಿರುಮಲದಲ್ಲಿ ದೈವೀಕ ಆಶೀರ್ವಾದ ಪಡೆಯುತ್ತಿರುವೆವು. ಇವತ್ತು ನಾನು ನನ್ನ ತಂದೆ ಹಾಗೂ ನಾಯಕರಾದ ಎಚ್ ಡಿ ಕುಮಾರಸ್ವಾಮಿ (H D Kumaraswamy) ನನ್ನ ತಾಯಿ ಶ್ರೀಮತಿ ಅನಿತಾ ಕುಮಾರಸ್ವಾಮಿ, ಪತ್ನಿ ರೇವತಿ ಹಾಗೂ ಮಗನೊಂದಿದೆ, ತಿರುಮಲ ಬೆಟ್ಟಕ್ಕೆ ತೆರಳಿ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಬಂದಿದ್ದೇವೆ. ಎಲ್ಲರ ಶಾಂತಿ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ನಾವು ಕೈಮುಗಿದು ಪ್ರಾರ್ಥಿಸಿದೆವು. ಭಗವಂತನ ಕೃಪೆಯು ನಮಗೆ ಮಾರ್ಗದರ್ಶನ ನೀಡಲಿ ಮತ್ತು ನಮ್ಮ ಜನರಿಗೆ ಶಕ್ತಿ, ಆರೋಗ್ಯ ಮತ್ತು ಸಂತೋಷವನ್ನು ಆಶೀರ್ವದಿಸಲಿ. ಈ ದೈವಿಕ ಅನುಭವಕ್ಕಾಗಿ ಕೃತಜ್ಞತೆಗಳು! ಎಂದು ಬರೆದುಕೊಂಡಿದ್ದಾರೆ.
