ಮನೆ ದೇವರಿಗೆ ಪುತ್ರನ ಮುಡಿಕೊಟ್ಟ ನಿಖಿಲ್ ಕುಮಾರ್ ದಂಪತಿ; ಅವ್ಯಾನ್ ಹೊಸ ಲುಕ್ ವೈರಲ್
ತವರೂರಲ್ಲಿ ಎಚ್‌ಡಿಕೆ ಮೊಮ್ಮಗನ ಮುಡಿಸೇವೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೊಮ್ಮಗನ ಮೊದಲ ಮುಡಿ ಶಾಸ್ತ್ರ ಆಗಸ್ಟ್ 21 ಮನೆ ದೇವರ ಮುಂದೆ ನಡೆಯಿತು.
ಚನ್ನರಾಯಪಟ್ಟಣ ತಾಲೂಕಿನ ಯಲಿಯೂರು ಲಕ್ಷ್ಮಿ ದೇಗುಲದಲ್ಲಿ ಕುಮಾರಸ್ವಾಮಿ (Kumaraswamy) ಮೊಮ್ಮಗನ ಮುಡಿ ಅರ್ಪಿಸಿ ಪೂಜೆ ಸಲ್ಲಿಸಲಾಯಿತು.
ಅಲ್ಲಿಂದ ಹೆಳನರಸೀಪುರ ತಾಲೂಕಿನ ಹರದನಹಳ್ಳಿಯ ಕುಲದೇವರು ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ಜತೆಗಿದ್ದರು.
ಜ್ಯೂನ್ 8ರಂದು ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಸಮಾರಂಭ ನಡೆಯುತ್ತಿದೆ. 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ಅವ್ಯಾನ್ ದೇವ್ ಎಂದು ಹೆಸರಿಟ್ಟರು.
ಆಗಸ್ಟ್ 18ರಂದು ಕೃಷ್ಣ ಜನ್ಮಾಷ್ಟಮಿ ದಿನ ಪುತ್ರನಿಗೆ ಕೃಷ್ಣನ ರೀತಿ ಅಲಂಕಾರ ಮಾಡಿ ಫೋಟೋಶೂಟ್ ಮಾಡಿಸಿದ್ದಾರೆ. ಪಂಚೆ ಧರಿಸಿ ನವಿಲು ಗರಿ ಇಟ್ಟುಕೊಂಡಿರುವ ಮುದ್ದು ಕೃಷ್ಣ ಲುಕ್ ವೈರಲ್ ಆಗಿತ್ತು.
ಅವ್ಯಾನ್ ದೇವ್ ದೇವರ ಹೆಸರು. ಹೌದು, ಗಣಪತಿಯ ಮತ್ತೊಂದು ಹೆಸರು. ಅದೃಷ್ಟದಿಂದ ಜನಿಸಿದವನು ಎಂದು ಸೂಚಿಸುತ್ತದೆ. ಅಂದಹಾಗೆ ಇತ್ತೀಚಿಗಷ್ಟೆ ಬಾಲಿವುಡ್ ನಟಿ ದಿಯಾ ಮಿರ್ಜಾ ಕೂಡ ತನ್ನ ಪುತ್ರನಿಗೆ ಅವ್ಯಾನ್ ಎಂದು ನಾಮಕರಣ ಮಾಡಿದ್ದರು.
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ 2020 ಏಪ್ರಿಲ್‌ನಲ್ಲಿ ಹಸೆಮಣೆ ಏರಿದರು. ಇಬ್ಬರ ಮದುವೆಗೆ ಲಾಕ್ ಡೌನ್ ಅಡ್ಡಿಯಾಗಿತ್ತು. ಭೀಕರ ಲಾಕ್ ಡೌನ್ ಸಮಯದಲ್ಲೇ ರಾಮನಗರದಲ್ಲಿ ಕುಮಾರಸ್ವಾಮಿ ಪುತ್ರನ ಮದುವೆ ನೆರವೇರಿತು.