ಕುರ್ಕನಾದ ವಿಜಯ ರಾಘವೇಂದ್ರ: ಸಿನಿಮಾದ ಫಸ್ಟ್ ಲುಕ್ ಬಿಡುಗಡೆ
ಅತ್ತ ಹುಲಿಯೂ ಅಲ್ಲ, ಇತ್ತ ಚಿರತೆಯೂ ಅಲ್ಲದ ಮಲೆನಾಡ ದಂತಕತೆಗಳಲ್ಲಿ ಸದಾ ಜೀವಂತವಿರುವ ಪ್ರಾಣಿ ಕುರ್ಕ. ಹಗಲಲ್ಲಿ ಕಾಣಿಸದ, ರಾತ್ರಿ ಸಾಕುಪ್ರಾಣಿಗಳನ್ನು ಎತ್ತಿಕೊಂಡು ಹೋಗುವ ಈ ಜೀವಿ ಬಗ್ಗೆ ಜನರಲ್ಲಿ ಅವ್ಯಕ್ತ ಭಯ ಇದೆ.

ವಿಜಯ ರಾಘವೇಂದ್ರ, ನಿರ್ದೇಶಕ ನಟೇಶ್ ಹೆಗಡೆ, ಅವಿನಾಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕುರ್ಕ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ರಾಜ್ಯ ಪ್ರಶಸ್ತಿ ವಿಜೇತ ‘ನೀಲಿಹಕ್ಕಿ’ ಸಿನಿಮಾ ನಿರ್ದೇಶಕ ಗಣೇಶ್ ಹೆಗಡೆ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರದ ಕುರಿತು ನಟೇಶ್ ಹೆಗ್ಡೆ, ಅತ್ತ ಹುಲಿಯೂ ಅಲ್ಲ, ಇತ್ತ ಚಿರತೆಯೂ ಅಲ್ಲದ ಮಲೆನಾಡ ದಂತಕತೆಗಳಲ್ಲಿ ಸದಾ ಜೀವಂತವಿರುವ ಪ್ರಾಣಿ ಕುರ್ಕ. ಹಗಲಲ್ಲಿ ಕಾಣಿಸದ, ರಾತ್ರಿ ಸಾಕುಪ್ರಾಣಿಗಳನ್ನು ಎತ್ತಿಕೊಂಡು ಹೋಗುವ ಈ ಜೀವಿ ಬಗ್ಗೆ ಜನರಲ್ಲಿ ಅವ್ಯಕ್ತ ಭಯ ಇದೆ.
ಈ ಕುರ್ಕ ಎಂಬ ಮಿಥ್ ಮೇಲೆ ಸಿನಿಮಾ ಕಥೆ ಇದೆ. ಹೊನ್ನಾವರದ ಹುಲ್ಲುಗಾವಲಿನಲ್ಲಿ ಇಡೀ ಸಿನಿಮಾ ಶೂಟ್ ಮಾಡಿದ್ದೇವೆ. ಇದರಲ್ಲಿ ನನ್ನದು ಮುನ್ನ ಎಂಬ ಪಾತ್ರ. ಅವನೊಬ್ಬ ದಿನಗೂಲಿ ನೌಕರ.
ಆಟೋ ಓಡಿಸ್ತಾ, ರೋಡ್‌ಸೈಡ್ ಚಿತ್ರಾನ್ನ ತಿನ್ನುತ್ತ ಬದುಕುವ ಹುಡುಗ. ಇದರಲ್ಲಿ ಹೊನ್ನಾವರದ ಕೆಂಪು ಕಲ್ಲು ಕ್ವಾರಿ, ಅದರ ಹಿಂದಿನ ಕ್ರೈಮ್ ಬಗ್ಗೆಯೂ ಹೇಳುತ್ತೇವೆ. ನನಗೆ ಮೊದಲಿಂದಲೂ ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ ಸಿನಿಮಾ ಬಹಳ ಇಷ್ಟ.
ಈ ಚಿತ್ರದಲ್ಲಿ ಅದಕ್ಕೊಂದು ಗೌರವವನ್ನೂ ಸಲ್ಲಿಸಿದ್ದೇವೆ ಎಂದಿದ್ದಾರೆ. ನಟೇಶ ಹೆಗ್ಡೆ ಮತ್ತು ಗಣೇಶ್ ಹೆಗಡೆ ಅಘೋರ್ ಮೋಷನ್ ಪಿಕ್ಚರ್ಸ್ ಜೊತೆ ಸೇರಿಕೊಂಡು ಈ ಸಿನಿಮಾ ನಿರ್ಮಿಸಿದ್ದಾರೆ.