- Home
- Entertainment
- Sandalwood
- ಅಮ್ಮನ ನೆನಪುಗಳನ್ನು ಬಿಚ್ಚಿಟ್ಟು ‘ಧಿಕ್ಕಾರ ನಿನಗೆ ದೇವರೇ’ ಎಂದ ವಿಜಯ್ ರಾಘವೇಂದ್ರ ಪುತ್ರ
ಅಮ್ಮನ ನೆನಪುಗಳನ್ನು ಬಿಚ್ಚಿಟ್ಟು ‘ಧಿಕ್ಕಾರ ನಿನಗೆ ದೇವರೇ’ ಎಂದ ವಿಜಯ್ ರಾಘವೇಂದ್ರ ಪುತ್ರ
ನಟ ವಿಜಯ್ ರಾಘವೇಂದ್ರ ಪುತ್ರ ಶೌರ್ಯ ವಿಜಯ್ ಅಮ್ಮನ ಹಳೆಯ ಫೋಟೊಗಳನ್ನು ಹಂಚಿಕೊಂಡು ದೇವರಿಗೆ ಧಿಕ್ಕಾರ ಎಂದಿದ್ದಾರೆ.

ಸ್ಯಾಂಡಲ್’ವುಡ್ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ (Vijay Raghavendra) ಪುತ್ರ ಶೌರ್ಯ ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಆವಾಗವಾಗ ಅಮ್ಮನ ನೆನಪುಗಳನ್ನು ಹಂಚಿಕೊಂಡು ಫೋಟೊ ಶೇರ್ ಮಾಡುತ್ತಿರುತ್ತಾರೆ.
ಇದೀಗ ಮತ್ತೆ ಅಮ್ಮ ಸ್ಪಂದನಾ ವಿಜಯ್ (Spandana Vijay) ಅವರ ಹಳೆಯ ಫೋಟೊಗಳನ್ನು ಶೌರ್ಯ ಪೋಸ್ಟ್ ಮಾಡಿದ್ದು, ಹಿನ್ನೆಲೆಯಲ್ಲಿ ಹಾಡು ಹಾಕಿ, ತನ್ನ ಲ್ಯಾಪ್ ಟಾಪ್ ನಲ್ಲಿ ಇದ್ದಂತಹ ಹಳೆಯ ಫೋಟೊಗಳು ಎಂದು ಬರೆದುಕೊಂಡಿದ್ದಾರೆ. ಶೌರ್ಯನನ್ನು ಎದೆಗಪ್ಪಿ ಮಲಗಿರುವ ಫೋಟೊಗಳು ಸಹ ಇವೆ.
ಲ್ಯಾಪ್‌ಟಾಪ್‌ನಲ್ಲಿ ನನ್ನ ಫೋಟೋಗಳನ್ನು ಸ್ಕ್ರೋಲ್ ಮಾಡಿದಾಗ ಈ ಚಿತ್ರಗಳು ಸಿಕ್ಕವು...ಇದನ್ನೆಲ್ಲಾ ನೋಡಿ ಎಂದು ಬರೆದುಕೊಂಡಿದ್ದಾರೆ, ಜೊತೆಗೆ ಹಿನ್ನೆಲೆಯಲ್ಲಿ ಹಾಕಿರುವ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರದ ಹಾಡು ಕೇಳಿದ್ರೆ ಕಣ್ಣಂಚಲ್ಲಿ ನೀರು ಬರುತ್ತೆ.
ಶೌರ್ಯ (Shourya Vijay) ಅಮ್ಮನ ಮುದ್ದಾದ ಫೋಟೊಗಳ ಜೊತೆಗೆ ‘ಧಿಕ್ಕಾರ ನಿನಗೆ ದೇವರೆ ಉಸಿರು ಈ ಇರುವರೆಗೆ, ಕಸಿದುಕೊಂಡ ಜೀವವ ಮರಳಿ ಕೊಡು ನನಗೆ, ಧಿಕ್ಕಾರ ನಿನಗೆ ದೇವರೆ ನಿನ್ನ ಈ ನಡೆಗೆ, ಕ್ಷಮಿಸಲಾರೆ ನಿನ್ನನ್ನು ನಾನು ಕೊನೆವರೆಗೆ ಎನ್ನುವ ಹಾಡನ್ನು ಹಾಕುವ ಮೂಲಕ, ತನ್ನಿಂದ ಅಮ್ಮನನ್ನು ಕಸಿದುಕೊಂಡ ದೇವರಿಗೆ ಧಿಕ್ಕಾರ ಕೂಗಿದ್ದಾರೆ.
ಫೋಟೊ ನೋಡಿ ಅಭಿಮಾನಿಗಳು ಸಹ ಕಣ್ಣಿರಿಟ್ಟಿದ್ದು, ಶೌರ್ಯನಿಗೆ ಸಮಾಧಾನದ ನುಡಿಗಳನ್ನು ಹೇಳಿದ್ದಾರೆ. ಧೈರ್ಯದಿಂದ ಇರು ಕಂದ, ಅಮ್ಮ ಯಾವಾಗಲೂ ನಿನ್ನ ಜೊತೆಯಲ್ಲೇ ಇದ್ದು ನಿನ್ನನ್ನು ಕಾಯುತ್ತಿರುತ್ತಾಳೆ. ಆಕೆಯ ಆಶೀರ್ವಾದ ಎಂದೆಂದಿಗೂ ನಿನ್ನ ಮೇಲಿರುತ್ತೆ ಎಂದಿದ್ದಾರೆ.
ವಿಜಯ್ ರಾಘವೇಂದ್ರ ಅವರ ಮಡದಿ ಸ್ಪಂದನಾ ವಿಜಯ್, ತಮ್ಮ ಮುಗ್ಧ ನಗು ಹಾಗೂ ಮೃದು ಸ್ವಭಾವದಿಂದಲೇ ಜನಮನ ಸೆಳೆದಿದ್ದರು. ಆದರೆ ಎರಡು ವರ್ಷಗಳ ಹಿಂದೆ ಸ್ಪಂದನಾ ಹೃದಯಾಘಾತದಲ್ಲಿ ಸಾವನ್ನಪ್ಪಿದ್ದರು.
2023ರಲ್ಲಿ ಫ್ಯಾಮಿಲಿ ಜೊತೆ ಬ್ಯಾಂಕಾಕ್ ಗೆ ತೆರಳಿದ್ದ ಸ್ಪಂದನಾ, ಅಲ್ಲೇ ಹೃದಯಾಘಾತದಿಂದ ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿ, ಪತ್ನಿಯನ್ನು ಪೂಜಿಸುತ್ತಿದ್ದ ವಿಜಯ್ ರಾಘವೇಂದ್ರ ಸಂಗಾತಿ ಇಲ್ಲದೇ ಒಂಟಿಯಾಗಿದರು. ಅಮ್ಮನಿಲ್ಲದೇ ಶೌರ್ಯ ಕೂಡ ಕಂಗಾಲಾಗಿದ್ದರು. ಇದೀಗ ಸ್ಪಂದನಾ ತಮ್ಮ ಜೊತೆಗಿದ್ದಾಳೆ ಎನ್ನುವ ನಂಬಿಕೆಯಲ್ಲೇ ಇಬ್ಬರು ಜೀವನ ಮಾಡ್ತಿದ್ದಾರೆ.