- Home
- Entertainment
- Sandalwood
- 'ವಾರ್ತೆಗಳು... ಓದುತ್ತಿರುವವರು ಶಂಕರ್ ನಾಗ್': ಈ ಬಾರಿ ಸಂಗೀತ ನಿರ್ದೇಶಕನಾದ ನಾಗಶೇಖರ್
'ವಾರ್ತೆಗಳು... ಓದುತ್ತಿರುವವರು ಶಂಕರ್ ನಾಗ್': ಈ ಬಾರಿ ಸಂಗೀತ ನಿರ್ದೇಶಕನಾದ ನಾಗಶೇಖರ್
ನಾಗಶೇಖರ್ ಅವರನ್ನು ಸಂಗೀತ ನಿರ್ದೇಶಕನನ್ನಾಗಿ ಮಾಡುತ್ತಿರುವ ಚಿತ್ರದ ಹೆಸರು ‘ವಾರ್ತೆಗಳು... ಓದುತ್ತಿರುವವರು ಶಂಕರ್ ನಾಗ್’. ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿರುವ ನಾಗಶೇಖರ್ ಅವರ ನಟನೆಯ ಈ ಹೊಸ ಚಿತ್ರ.

ನಿರ್ದೇಶಕ ನಾಗಶೇಖರ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬಾರಿ ಅವರು ನಿರ್ಮಾಣ ಹಾಗೂ ನಟನೆ ಜೊತೆಗೆ ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ.
ನಾಗಶೇಖರ್ ಅವರನ್ನು ಸಂಗೀತ ನಿರ್ದೇಶಕನನ್ನಾಗಿ ಮಾಡುತ್ತಿರುವ ಚಿತ್ರದ ಹೆಸರು ‘ವಾರ್ತೆಗಳು... ಓದುತ್ತಿರುವವರು ಶಂಕರ್ ನಾಗ್’. ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿರುವ ನಾಗಶೇಖರ್ ಅವರ ನಟನೆಯ ಈ ಹೊಸ ಚಿತ್ರಕ್ಕೆ ಆಗಸ್ಟ್ 15ರಂದು ಮುಹೂರ್ತ ಮಾಡಿ, ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ.
ಇನ್ನೂ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಜಿಯಾ ಉಲ್ಲಾ ಖಾನ್ ಎಂಬುವವರು. ನಾಗಶೇಖರ್, ಈ ಬಾರಿಯೂ ಹೊಸ ರೀತಿಯ ಪ್ರಯತ್ನದೊಂದಿಗೆ ಸಿನಿಮಾ ಆರಂಭಿಸುತ್ತಿದ್ದೇವೆ. ಇದು ಮ್ಯೂಸಿಕಲ್ ಹಿನ್ನೆಲೆಯಲ್ಲಿ ಸಾಗುವ ಕತೆಯ ಸಿನಿಮಾ.
ನಮ್ಮ ದೇಶದ ಒಂದು ಸಣ್ಣ ನಗರ ಅಥವಾ ಪಟ್ಟಣದಲ್ಲಿ ನೋಡುವ ಸಾಮಾಜಿಕ ಸಮಸ್ಯೆ ಸುತ್ತಾ ಈ ಸಿನಿಮಾ ಸಾಗುತ್ತದೆ. ಸಾಮಾಜಿಕ ಸಮಸ್ಯೆಯೊಂದನ್ನು ಪ್ರತಿಬಿಂಬಿಸಲು ಮತ್ತು ಅದರ ಬಗ್ಗೆ ಮಾತನಾಡುವುದಕ್ಕೆ ಸಂಗೀತ ಹೇಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಈ ಚಿತ್ರದ್ದು.
ನನ್ನ ನೆಚ್ಚಿನ ನಟ ಶಂಕರ್‌ನಾಗ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಚಿತ್ರದ ಶೀರ್ಷಿಕೆಯಲ್ಲಿ ಅವರ ಹೆಸರು ಇಡಲಾಗಿದೆ. ಮತ್ತು ಅದು ಕತೆಗೂ ಪೂರಕವಾಗಿಯೂ ಇದೆ ಎನ್ನುತ್ತಾರೆ.