- Home
- Entertainment
- Sandalwood
- ಸೆಟ್‌ನಲ್ಲಿ ದರ್ಶನ್ ಜೊತೆ ಪ್ರಾಣಿಗಳ ಬಗ್ಗೆ ಮಾತಾಡುತ್ತಿದ್ದೆ: ಡೆವಿಲ್ ನಟಿ ರಚನಾ ರೈ
ಸೆಟ್‌ನಲ್ಲಿ ದರ್ಶನ್ ಜೊತೆ ಪ್ರಾಣಿಗಳ ಬಗ್ಗೆ ಮಾತಾಡುತ್ತಿದ್ದೆ: ಡೆವಿಲ್ ನಟಿ ರಚನಾ ರೈ
ಉದಯಪುರದ ಶೂಟಿಂಗ್ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನಾ ಹೆಚ್ಚಾಗಿ ಪೆಟ್‌ಗಳ ಬಗೆಗೇ ಮಾತನಾಡಿಕೊಳ್ಳುತ್ತಿದ್ದರಂತೆ.

ಆರಂಭದಲ್ಲಿ ನನಗೆ ಪಶು ವೈದ್ಯೆ ಆಗಬೇಕು ಅಂತಿತ್ತು. ಆದರೆ ರಕ್ತದ ಜೊತೆಗೆ ಕೆಲಸ ಮಾಡೋದು ನನ್ನ ಕೈಯಲ್ಲಾಗಲ್ಲ ಅನ್ನೋದು ಗೊತ್ತಾಯ್ತು. ಹೀಗಾಗಿ ಆ ಆಸೆ ಬಿಟ್ಟು ನಟನೆ, ಡ್ಯಾನ್ಸ್‌ನತ್ತ ಹೊರಳಿದೆ.
ಇದು ‘ದಿ ಡೆವಿಲ್’ ನಟಿ ರಚನಾ ರೈ ಮಾತು. ಉದಯಪುರದ ಶೂಟಿಂಗ್ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನಾ ಹೆಚ್ಚಾಗಿ ಪೆಟ್‌ಗಳ ಬಗೆಗೇ ಮಾತನಾಡಿಕೊಳ್ಳುತ್ತಿದ್ದರಂತೆ.
ನಮ್ಮಿಬ್ಬರ ಸಮಾನ ಆಸಕ್ತಿ ಪ್ರಾಣಿ ಪ್ರೀತಿ ಆಗಿತ್ತು. ಸೆಟ್‌ನಲ್ಲಿ ಉಳಿದವರೆಲ್ಲ ಬೇರೆ ಬೇರೆ ವಿಚಾರಗಳ ಕುರಿತಾಗಿ ಹರಟುತ್ತಿದ್ದರು. ದರ್ಶನ್ ಸರ್ ಹಾಗೂ ನಾನು ಯಾವ ವಿಚಾರ ಮಾತನಾಡಿದರೂ ಕೊನೆಗದು ಪ್ರಾಣಿಗಳ ಬಗೆಗೇ ಹೊರಳಿಕೊಳ್ಳುತ್ತಿತ್ತು ಎಂದಿದ್ದಾರೆ ರಚನಾ.
ಇದೀಗ ರಚನಾ ಕತ್ತಲೆ ಬೆಳಕಿನಲ್ಲಿ ನೈಜತೆಗೆ ಒತ್ತು ಕೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಪ್ರಕಾಶ್ ವೀರ್ ನಿರ್ದೇಶನದ ‘ದಿ ಡೆವಿಲ್’ ಸಿನಿಮಾ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ.
ಇನ್ನು ರಚನಾ ರೈ ಬಹುಮುಖ ಪ್ರತಿಭಾವಂತೆ ಅಂತಲೇ ಹೇಳಬಹುದು. ಭರತನಾಟ್ಯ ಕೂಡ ಗೊತ್ತಿದೆ. ನಟನೆಯನ್ನೂ ಕಲಿತುಕೊಂಡಿದ್ದಾರೆ. ಜೊತೆಗೆ ತುಳು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ.