- Home
- Entertainment
- Sandalwood
- ಕರ್ಲಿ ಹೇರ್ ಸ್ಟೈಲ್‌ನಲ್ಲಿ ಮುತ್ತತ್ತಿ ಸತ್ಯರಾಜು ಅವತಾರ: ಸುದೀಪ್‌ರ ‘ಕಿಚ್ಚ 47’ ಲುಕ್ ವೈರಲ್
ಕರ್ಲಿ ಹೇರ್ ಸ್ಟೈಲ್‌ನಲ್ಲಿ ಮುತ್ತತ್ತಿ ಸತ್ಯರಾಜು ಅವತಾರ: ಸುದೀಪ್‌ರ ‘ಕಿಚ್ಚ 47’ ಲುಕ್ ವೈರಲ್
ಸುದೀಪ್ ಅವರು ಹೀಗೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವುದು ಇನ್ನೂ ಹೆಸರಿಡದ ‘ಕಿಚ್ಚ 47’ ಚಿತ್ರಕ್ಕಾಗಿ. ತಮಿಳಿನ ವಿಜಯ್ ಕಾರ್ತಿಕ್ ನಿರ್ದೇಶನದ, ಸತ್ಯಜ್ಯೋತಿ ಫಿಲಂಸ್ ಈ ಚಿತ್ರವು ಈಗ ಶೂಟಿಂಗ್ ಹಂತದಲ್ಲಿದೆ.

ನಟ ಕಿಚ್ಚ ಸುದೀಪ್ ಅವರ ಹೊಸ ಹೇರ್ ಸ್ಟೈಲ್ ಸಾಕಷ್ಟು ವೈರಲ್ ಆಗುತ್ತಿದೆ. ಮೊದಲ ಬಾರಿಗೆ ಹೀಗೆ ಕರ್ಲಿ ಹೇರ್ ಸ್ಟೈಲ್‌ನಲ್ಲಿ ಸುದೀಪ್ ಅವರು ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಈ ಹೊಸ ಲುಕ್ಕಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅಂದಹಾಗೆ ಸುದೀಪ್ ಅವರು ಹೀಗೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವುದು ಇನ್ನೂ ಹೆಸರಿಡದ ‘ಕಿಚ್ಚ 47’ ಚಿತ್ರಕ್ಕಾಗಿ. ತಮಿಳಿನ ವಿಜಯ್ ಕಾರ್ತಿಕ್ ನಿರ್ದೇಶನದ, ಸತ್ಯಜ್ಯೋತಿ ಫಿಲಂಸ್ ಈ ಚಿತ್ರವು ಈಗ ಶೂಟಿಂಗ್ ಹಂತದಲ್ಲಿದೆ. ಚಿತ್ರೀಕರಣ ಸೆಟ್‌ನಲ್ಲಿ ಸುದೀಪ್ ಅವರ ಫೋಟೋಗಳು ಹೊರ ಬಂದಿದ್ದು, ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ.
ಇನ್ನೂ ಸುದೀಪ್ ಅವರು ಹೀಗೆ ತಮ್ಮ ನಟನೆಯ ಚಿತ್ರಗಳಿಗಾಗಿ ಆಗಾಗ ಹೊಸ ಹೊಸ ಹೇರ್ ಸ್ಟೈಲ್‌ಗಳ ಮೂಲಕ ಸದ್ದು ಮಾಡಿದ್ದುಂಟು. ಈ ಹಿಂದೆ ‘ಹೆಬ್ಬುಲಿ’, ‘ದಿ ವಿಲನ್’, ‘ರಾಜು ಕನ್ನಡ ಮೀಡಿಯಂ’ ಚಿತ್ರಗಳಲ್ಲಿ ತಮ್ಮ ಹೇರ್ ಸ್ಟೈಲ್ ಲುಕ್ಕಿನಿಂದ ಗಮನ ಸೆಳೆದಿದ್ದರು.
ಅದರಲ್ಲೂ ‘ಹೆಬ್ಬುಲಿ’ ಚಿತ್ರದ ಕಟ್ಟಿಂಗ್ ಸಖತ್ ಜನಪ್ರಿಯತೆಗೊಂಡಿತ್ತು. ಈಗ ಕರ್ಲಿ ಹೇರ್ ಸ್ಟೈಲ್ ಮೂಲಕ ಮತ್ತೆ ಹೊಸ ಸಂಚಲನ ಮೂಡಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವರು ಮುತ್ತತ್ತಿ ಸತ್ಯರಾಜು ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿಶ್ವಿಕಾ ನಾಯ್ಡು ಇತ್ತೀಚೆಗೆ ಚಿತ್ರಕ್ಕೆ ಜೊತೆ ಆಗಿದ್ದಾರೆ.
ಫ್ಲರ್ಟ್ ಚಿತ್ರಕ್ಕೆ ಸುದೀಪ್ ಹಾಡು: ನಟ ಚಂದನ್ ಕುಮಾರ್ ಅಭಿನಯಿಸಿ, ನಿರ್ದೇಶಿಸಿರುವ ‘ಫ್ಲರ್ಟ್’ ಚಿತ್ರಕ್ಕೆ ನಟ ಸುದೀಪ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ. ಸ್ನೇಹದ ಮಹತ್ವ ಸಾರುವ ಹಿನ್ನೆಲೆಯ ಹಾಡಿದು. ನಕುಲ್ ಅಭಯಂಕರ್ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಈ ಚಿತ್ರವನ್ನು ಚಂದನ್ ಕುಮಾರ್ ಪತ್ನಿ ಕವಿತಾ ಗೌಡ ಅವರೇ ನಿರ್ಮಿಸುವ ಮೂಲಕ ಕಿರುತೆರೆಯ ನಟಿ ಕವಿತಾ ಗೌಡ ನಿರ್ಮಾಪಕಿಯೂ ಆಗಿದ್ದಾರೆ.
ಚಂದನ್ ಕುಮಾರ್, ‘ಪ್ರೀತಿ, ಸ್ನೇಹದ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗುತ್ತದೆ. ಇದರ ಜತೆಗೆ ಇಲ್ಲಿ ಸೈಕೋ ಪಾತ್ರವೂ ಇದೆ. ಫ್ಲರ್ಟ್ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎನ್ನುತ್ತಾರೆ’ ಎಂದರು. ಅಕ್ಷತಾ ಬೋಪಣ್ಣ, ನಿಮಿಕಾ ರತ್ನಾಕರ್ ಚಿತ್ರದ ನಾಯಕಿಯರು. ಶ್ರುತಿ, ಸಾಧು ಕೋಕಿಲ, ಗಿರಿ, ಮೂಗು ಸುರೇಶ್ ಮುಂತಾದವರು ಚಿತ್ರದ ಮುಖ್ಯ ಪಾತ್ರಧಾರಿಗಳು.