- Home
- Entertainment
- Sandalwood
- ಶಿವಣ್ಣನ ಮನೆಯಲ್ಲಿ ಬರ್ತಡೇ ಮಾಡಿಕೊಂಡ ಅರ್ಜುನ್ ಜನ್ಯ; ಗೂಡ್ಸ್ ಆಟೋದಲ್ಲಿ ಹೋಗಿ ಕಾರ್ಯಕ್ರಮ ಕೊಡ್ತಿದ್ದ ಪ್ರತಿಭೆ!
ಶಿವಣ್ಣನ ಮನೆಯಲ್ಲಿ ಬರ್ತಡೇ ಮಾಡಿಕೊಂಡ ಅರ್ಜುನ್ ಜನ್ಯ; ಗೂಡ್ಸ್ ಆಟೋದಲ್ಲಿ ಹೋಗಿ ಕಾರ್ಯಕ್ರಮ ಕೊಡ್ತಿದ್ದ ಪ್ರತಿಭೆ!
ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ, ಸರಿಗಮಪ ತೀರ್ಪುಗಾರರಾಗಿ, ಈಗ ನಿರ್ದೇಶಕರಾಗಿ ಹೊಸ ಹೆಜ್ಜೆ ಇಟ್ಟಿರುವ ಅರ್ಜುನ್ ಜನ್ಯ ಅವರ ಸಾಧನೆಯ ಹಾದಿ. ಶಿವರಾಜ್ ಕುಮಾರ್ ಅವರೊಂದಿಗೆ 45ನೇ ಸಿನಿಮಾ ಮಾಡುತ್ತಿರುವ ಅವರು, ತಮ್ಮ ಜನ್ಮದಿನವನ್ನು ಶಿವಣ್ಣನ ಮನೆಯಲ್ಲಿ ಆಚರಿಸಿಕೊಂಡರು.

ಕನ್ನಡ ಚಿತ್ರರಂಗದ ಪ್ರತಿಭಾವಂತ ಸಂಗೀತ ನಿರ್ದೇಶಕ, ಮ್ಯೂಸಿಷಿಯನ್ ಅರ್ಜುನ್ ಜನ್ಯ ಅವರು ಹಲವು ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ನೀಡಿದ್ದಾರೆ. ಇದೀಗ ಸಿನಿಮಾ ನಿರ್ದೇಶನಕ್ಕೂ ಕಾಲಿಟ್ಟಿದ್ದು, ನಟ ಶಿವರಾಜ್ ಕುಮಾರ್ ಅವರೊಂದಿಗೆ 45 ಸಿನಿಮಾ ಮಾಡುತ್ತಿದ್ದಾರೆ. ಇದೀಗ ಶಿವಣ್ಣನ ಮನೆಗೆ ಹೋಗಿ ತಮ್ಮ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ. ಈ ವೇಳೆ ಗೀತಾ ಶಿವರಾಜ್ ಕುಮಾರ್ ಅವರು ಕೇಕ್ ಅನ್ನು ಅರ್ಜುನ್ ಜನ್ಯ ಅವರಿಗೆ ತಿನ್ನಿಸಿ ಸಂಸತ ನೂರ್ಮಡಿಗೊಳಿಸಿದ್ದಾರೆ.
ಅರ್ಜುನ್ ಜನ್ಯ ಹೆಸರು ಕೇಳಿದಾಕ್ಷಣ ಸ್ಮರಣೀಯ ಧ್ವನಿ, ಶಕ್ತಿಶಾಲಿ ಬಿಟ್‌ಗಳು, ಮನಸ್ಸಿಗೆ ತಾಕುವ ಮೆಲೋಡಿ ಹಾಡುಗಳು ನೆನಪಿಗೆ ಬರುತ್ತವೆ. ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಅವರು, ತಮ್ಮ ಕ್ರಿಯಾತ್ಮಕ ಶಕ್ತಿಗೆ ಉದಾಹರಣೆ ಆಗಿದ್ದಾರೆ.
ಅರ್ಜನ್ ಜನ್ಯ ಅವರು 2009 ರಲ್ಲಿ ‘ಬಿರುಗಾಳಿ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಬೆಳಕಿಗೆ ಬಂದರು. ಈ ಸಿನಿಮಾದ ಮೂಲಕ ಅರ್ಜುನ್ ಜನ್ಯ ತಮ್ಮದೇ ಆದ ವಿಭಿನ್ನವಾದ ಸಂಗೀತ ಶೈಲಿಯಿಂದ ಹೊರಹೊಮ್ಮಿದರು. ‘ವಜ್ರಕಾಯ’, ‘ಪೈಲ್ವಾನ್’, ‘ಪೊಗರು’, ‘ವಿಕ್ರಾಂತ್ ರೋಣ’ ಮುಂತಾದ ಚಿತ್ರಗಳಲ್ಲಿ ಅವರು ನೀಡಿದ ಹಾಡುಗಳು ಹೃದಯ ಸ್ಪರ್ಶಿ ಆಗಿದ್ದೇವೆ. ಕೇವಲ ತಾಳಮೇಳವಲ್ಲ, ಅವರ ಸಂಗೀತವು ಸಿನಿಮಾದ ಭಾವನೆಗಳನ್ನೇ ಪ್ರತಿ ಬಿಂಬಿಸುತ್ತಿದೆ.
ಪ್ರಶಸ್ತಿಗಳು ಮತ್ತು ಗೌರವಗಳು:
ಅರ್ಜುನ್ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅವರು ಕೇವಲ ಸಂಗೀತ ನಿರ್ದೇಶಕರಷ್ಟೇ ಅಲ್ಲ, ಹಲವು ಕಲಾ ಉಪಕರಣಗಳಲ್ಲಿ ಪರಿಣಿತರು. ಹಾರ್ಮೋನಿಯಂ, ಕೀಬೋರ್ಡ್, ಝೆಲೋ ಮತ್ತು ಸಿಂಥಸೈಸರ್‌ನಲ್ಲಿ ಪರಿಣತಿ ಹೊಂದಿದ್ದಾರೆ. ವಿಭಿನ್ನ ಶೈಲಿಯ ಸಂಗೀತ ರಚನೆಗೆ ಸದಾ ತಯಾರಾಗಿರುವ ಕಲಾವಿದ ಆಗಿದ್ದಾರೆ.
ಅಪರೂಪದ ಸಂಗತಿಗಳು:
ಅರ್ಜುನ್ ಜನ್ಯ ಅವರ ಮೂಲ ಹೆಸರು ‘ಲೋಕೇಶ್’. ಪ್ರಾರಂಭದಲ್ಲಿ ಅನೇಕ ಹೋಂಪ್ರೊಡಕ್ಷನ್ ಸಿನಿಮಾಗಳಿಗೆ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ನೀಡಿದ ಅನುಭವ ಅವರ ಧ್ವನಿ ನಿಯಂತ್ರಣವನ್ನು ಬೆಳೆಸಿತು. ಅವರ ಸಂಗೀತದಲ್ಲಿ ಹಿಂದೂಸ್ತಾನಿ, ಪಾಶ್ಚಾತ್ಯ ಮತ್ತು ಜನಪದ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ.
ಅರ್ಜುನ್ ಜನ್ಯ ಅವರು ತಮ್ಮ ಸಂಗೀತ ನಿರ್ದೇಶನದ ಜೊತೆಗೆ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಜಡ್ಜಸ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಸರಿಗಮಪ ಸ್ಪರ್ಧೆಗೆ ಬಂದಿರುವ ಡಜನ್ ಗಟ್ಟಲೆ ಪ್ರತಿಭೆಗಳನ್ನು ಗುರುತಿಸಿ ಸಿನಿಮಾದ ಹಾಡನ್ನು ಹಾಡಲು ಚಾನ್ಸ್ ಕೊಟ್ಟಿದ್ದಾರೆ.
ಕರ್ನಾಟಕದ ಮೂಲೆ ಮೂಲೆಯ ಹಲವು ಪ್ರತಿಭೆಗಳನ್ನು ಸಂಗೀತಗಾರರನ್ನಾಗಿ ಮಾಡಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯಿಂದ ಅವರಿಗೆ ಜನ್ಮದಿನದ ಶುಭಾಶಯ ಕೋರಲಾಗಿದೆ. ಅದರಲ್ಲಿ 'ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಹಾಡುಗಳ ಜನಕ, ಮ್ಯಾಜಿಕಲ್ ಕಂಪೋಸರ್, ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾದ ಅರ್ಜುನ್ ಜನ್ಯ ಅವರಿಗೆ ಜನ್ಮದಿನದ ಶುಭಾಶಯಗಳು' ಎಂದು ಟ್ಯಾಗ್‌ಲೈನ್ ಬರೆಯಲಾಗಿದೆ.