- Home
- Entertainment
- Sandalwood
- 2016ರ ಮಧುರ ನೆನಪುಗಳನ್ನು ಬಿಚ್ಚಿಟ್ಟ ಮೇಘನಾ ರಾಜ್… Miss You Chiru ಅಂದ್ರು ಫ್ಯಾನ್ಸ್
2016ರ ಮಧುರ ನೆನಪುಗಳನ್ನು ಬಿಚ್ಚಿಟ್ಟ ಮೇಘನಾ ರಾಜ್… Miss You Chiru ಅಂದ್ರು ಫ್ಯಾನ್ಸ್
Meghana Raj: ಇದೀಗ 2016ರ ಟ್ರೆಂಡ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹತ್ತು ವರ್ಷ ಹಿಂದೆ ಹೇಗಿದ್ದೆ ಅನ್ನೋದನ್ನು ನೆನಪಿಸಿಕೊಳ್ಳುತ್ತಿದ್ದಾರೆ ಜನ. ಈ ಸಂದರ್ಭದಲ್ಲಿ ನಟಿ ಮೇಘನಾ ರಾಜ್ ಕೂಡ ಹಳೆಯ ನೆನಪು ಬಿಚ್ಚಿಟ್ಟಿದ್ದು, ಚಿರು ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಮೇಘನಾ ರಾಜ್
ಸೋಶಿಯಲ್ ಮೀಡೀಯಾದಲ್ಲಿ ಆಕ್ಟಿವ್ ಆಗಿರುವ ನಟಿ ಮೇಘನಾ ರಾಜ್ ಪ್ರತಿದಿನವು ಒಂದಲ್ಲ ಒಂದು ಪೋಸ್ಟ್ ಜೊತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಬಾರಿ ನಟಿ 2016ರ ಮಧುರ ನೆನಪುಗಳ ಬುತ್ತಿಯನ್ನು ತೆರೆದಿಟ್ಟಿದ್ದಾರೆ.
2016ರ ಟ್ರೆಂಡ್
ಸದ್ಯ ಸೋಶಿಯಲ್ ಮೀಡಿಯಾದಲ್ಲಿ 2016 ಟ್ರೆಂಡ್ ನಲ್ಲಿದೆ. 2016ಅಂದ್ರೆ ಹತ್ತು ವರ್ಷಗಳ ಹಿಂದೆ ಹೇಗಿದ್ದರು ಅನ್ನೋದನ್ನು ತೋರಿಸುವ ಟ್ರೆಂಡ್ ಇದಾಗಿದೆ. ಈ ಟ್ರೆಂಡ್ ನ್ನು ಮೇಘನಾ ರಾಜ್ ಕೂಡ ಫಾಲೋ ಮಾಡಿದ್ದು, ಆ ವರ್ಷ ನಡೆದಂತಹ ಒಂದಷ್ಟು ವಿಷ್ಯಗಳನ್ನು, ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಏನ್ ಹೇಳಿದ್ರು ನಟಿ
ಫೋಟೊಗಳ ಜೊತೆ ಮೇಘನಾ ಕ್ಯಾಪ್ಶನ್ ನಲ್ಲಿ 2016 ಮತ್ತೆ ಮತ್ತೆ ಬಂದಿದೆ! ಕಥಕ್ ವರ್ಷ, ಪ್ರೀತಿ, ಸ್ನೇಹ, ಚಲನಚಿತ್ರಗಳು, ಸ್ನ್ಯಾಪ್‌ಚಾಟ್ ಫಿಲ್ಟರ್‌ಗಳು, ಫ್ರಿಂಜಸ್ ಮತ್ತು ಮುರಿದ ಕಾಲು! ಮತ್ತು ಒಂದು ದಿನ ಕಥಕ್ ಪ್ರದರ್ಶನದ ಸಂಪೂರ್ಣ ವೀಡಿಯೊವನ್ನು ಹಾಕುತ್ತೇನೆ.... ಅಚ್ಚರಿಯ ಅತಿಥಿ ಪಾತ್ರವಿದೆ! ಎಂದು ಕ್ಯಾಪ್ಶನ್ ಹಾಕಿದ್ದಾರೆ.
ಕಥಕ್ ಕಲಿತ್ತಿದ್ದ ಮೇಘನಾ
ಮೇಘನಾ ರಾಜ್ ಹಿಂದೆ ಕಥಕ್ ಕೂಡ ಕಲಿತಿದ್ದರು. ಪ್ರದರ್ಶನ್ ಕೊಡುವ ಸಲುವಾಗಿ ತಮ್ಮ ಸ್ನೇಹಿತರ ಜೊತೆ ತಾವೇ ಹಾಡು ಹೇಳಿಕೊಂಡು ಅದ್ಭುತವಾಗಿ ಕಥಕ್ ನೃತ್ಯ ಅಭ್ಯಾಸ ಮಾಡುತ್ತಿರುವ ವಿಡೀಯೋವನ್ನು ನಟಿ ಶೇರ್ ಮಾಡಿದ್ದು, ನಟಿಯ ಕಲೆಯನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಚಿರು ಜೊತೆಗಿನ ಮುದ್ದಾದ ಫೋಟೋಗಳು
ಅಷ್ಟೇ ಅಲ್ಲದೇ ಮೇಘನಾ ಚಿರು ಜೊತೆಗಿನ ಮುದ್ದಾದ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ. ಅಂದು ಚಾಲ್ತಿಯಲ್ಲಿದ್ದ ಸ್ನಾಪ್ ಚಾಟ್ ಫಿಲ್ಟರ್ ಫೋಟೊ, ಹಾಗೂ ಕಾಲು ಮುರಿದುಕೊಂಡಿದ್ದ ಮೇಘನಾಗೆ ಚಿರು ಸ್ವತಃ ಬ್ಯಾಂಡೇಜ್ ಮಾಡುತ್ತಿರುವ ಫೋಟೊಗಳನ್ನು ಸಹ ನಟಿ ಶೇರ್ ಮಾಡಿದ್ದಾರೆ.
ಚಿರು ನೋಡಿ ಭಾವುಕರಾದ ಫ್ಯಾನ್ಸ್
ಫೋಟೊಗಳಲ್ಲಿ ಚಿರು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಮಿಸ್ ಯೂ ಚಿರು ಎಂದು ಹೇಳಿದ್ದಾರೆ. ಜೊತೆಗೆ ಚಿರು ಜೊತೆ ಇದ್ದಾಗ ಮೇಘನಾ ಮುಖದಲ್ಲಿ ವಿಶಿಷ್ಟ ಗ್ಲೋ ಎದ್ದು ಕಾಣುತ್ತಿತ್ತು ಅನ್ನೋದನ್ನು ಸಹ ಅಭಿಮಾನಿಗಳು ಹೇಳಿಕೊಂಡಿದ್ದಾರೆ.
ಮೇಘನಾ ಸಿನಿಮಾಗಳು
ಮೇಘನಾ ಮಗನೊಂದಿಗೆ ಸಮಯ ಕಳೆಯುವುದರ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಈಗಾಗಲೇ ಬುದ್ಧಿವಂತ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ಮಲಯಾಳಂನಲ್ಲಿ ಒಟ್ಟಕೊಂಬಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

