- Home
- Entertainment
- Sandalwood
- ಅಜ್ಜಿಯರ ಜೊತೆ ಕೇಕ್ ಕತ್ತರಿಸಿದ ರಾಯನ್: Meghana Raj ಪುತ್ರನ ಬರ್ತ್ ಡೇ ಪಾರ್ಟಿಯಲ್ಲಿ ತಾರೆಯರ ಕಲರವ
ಅಜ್ಜಿಯರ ಜೊತೆ ಕೇಕ್ ಕತ್ತರಿಸಿದ ರಾಯನ್: Meghana Raj ಪುತ್ರನ ಬರ್ತ್ ಡೇ ಪಾರ್ಟಿಯಲ್ಲಿ ತಾರೆಯರ ಕಲರವ
Raayan Sarjas Birthday: ಚಂದನವನದ ನಟಿ ಮೇಘನಾ ರಾಜ್ ತಮ್ಮ ಪುತ್ರ ರಾಯನ್ ಸರ್ಜಾ ಅವರ ಐದನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು, ಬರ್ತ್ ಡೇ ಪಾರ್ಟಿಯಲ್ಲಿ ಚಂದನವನದ ಸೆಲೆಬ್ರಿಟಿಗಳು ಭಾಗವಹಿಸಿ ಸಂಭ್ರಮಿಸಿದ್ದಾರೆ.

ಮೇಘನಾ ರಾಜ್
ಚಂದನವನದ ನಟಿ ಮೇಘನಾ ರಾಜ್ ತಮ್ಮ ಪುತ್ರ ರಾಯನ್ ಸರ್ಜಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.
ರಾಯನ್ ಸರ್ಜಾ
ಮೇಘನಾ ಮತ್ತು ಚಿರಂಜೀವಿ ಸರ್ಜಾ ದಂಪತಿಗಳ ಪುತ್ರ ರಾಯನ್’ಗೆ ಇತ್ತೀಚೆಗೆ ಐದು ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ನಟಿ ಅದ್ಧೂರಿ ಪಾರ್ಟಿ ಆಯೋಜಿಸಿದ್ದರು.
ರಾಯನ್ ಬರ್ತ್ ಡೇ
2020 ಅಕ್ಟೋಬರ್ 22ರಂದು ಜನಿಸಿದ ರಾಯನ್‌ಗೆ ಇದೀಗ ಐದನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಗ್ರ್ಯಾಂಡ್ ಪಾರ್ಟಿಯಲ್ಲಿ ತಾರೆಯರು ಮಿಂಚಿದ್ದರು.
ಚಂದನವನದ ತಾರೆಯರ ಕಲರವ
ಹುಟ್ಟುಹಬ್ಬದ ಪಾರ್ಟಿಯನ್ನು ಸ್ಪೈಡರ್‌ಮ್ಯಾನ್ ಥೀಮ್‌ನಲ್ಲಿ ನಡೆಸಲಾಗಿದ್ದು, ಚಿತ್ರರಂಗದ ಗಣ್ಯರು ಆಗಮಿಸಿ ಮದುವೆಯನ್ನು ಅದ್ಧೂರಿಯಾಗಿ ನಡೆಸಿಕೊಟ್ಟಿದ್ದಾರೆ.
ಅಜ್ಜಿಯರ ಜೊತೆ ಕೇಕ್ ಕಟ್ಟಿಂಗ್
ರಾಯನ್ ಸರ್ಜಾ ತನ್ನ ಇಬ್ಬರು ಅಜ್ಜಿಯರ ಜೊತೆ ಹಾಗೂ ಅಮ್ಮನ ಜೊತೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಫೋಟೊಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಸರ್ಜಾ ಮನೆಯವರು ಭಾಗಿ
ರಾಯನ್ ಬರ್ತ್‌ಡೇ ಸೆಲೆಬ್ರೇಷನ್ ನಲ್ಲಿ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೆಚ್ಚು ಹೈಲೈಟ್ ಆಗಿದ್ದರು. ಇವರ ಜೊತೆಗೆ ಪತ್ನಿ ಪ್ರೇರಣಾ, ಚಿರು ತಂದೆ ತಾಯಿ ಹಾಗೂ ಮೇಘನಾ ರಾಜ್ ತಂದೆ-ತಾಯಿ ಹಾಜರಿದ್ದರು..
ಸಿನಿತಾರೆಯರು
ಇನ್ನು ಸಿನಿಮಾ ತಾರೆಯರು ಸಹ ಆಗಮಿಸಿದ್ದು, ಹಿರಿಯ ನಟಿ ಶ್ರುತಿ ಹಾಗೂ ಮಗಳು ಗೌರಿ, ಜಯಮಾಲಾ, ಮಾಳವಿಕಾ ಅವಿನಾಶ್, ಅನಿರುದ್ಧ ಜಟ್ಕರ್ ಕುಟುಂಬ ರಾಯನ್ ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿತ್ತು.
ಗೇಮ್ಸ್-ಮ್ಯಾಜಿಕ್ ಶೋ
ಪುಟ್ಟ ಕಂದನ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಕ್ಕಳಿಗಾಗಿ ಗೇಮ್ಸ್, ಮ್ಯಾಜಿಕ್ ಶೋ ಹಾಗೂ ಟ್ಯಾಟೂ ಮೊದಲಾದ ಮನರಂಜನೆ ಅಯೋಜಿಸಲಾಗಿತ್ತು.
ಮೇಘನಾ ಹೇಳಿದ್ದೇನು?
ರಾಯನ್ ರಾಜ್ ಸರ್ಜಾಗೆ 'ಐದು ವರ್ಷ' . ! ಅವರ ಆತ್ಮೀಯರು ಮತ್ತು ಪ್ರೀತಿಯ ಕುಟುಂಬ ಸದಸ್ಯರೊಂದಿಗೆ 5 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವನ ಹುಟ್ಟುಹಬ್ಬದಂದು ಪ್ರೀತಿಯ ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳು. ಈ ವೀಡಿಯೊವನ್ನು ಸ್ವಲ್ಪ ತಡವಾಗಿ ಪೋಸ್ಟ್ ಮಾಡುತ್ತಿದ್ದೇನೆ. ಆದರೆ ಇಲ್ಲಿದೆ ವಿಡಿಯೋ ಪೂರ್ತಿಯಾಗಿ ನೋಡಿ ಎಂದಿದ್ದಾರೆ. !
ಚಿರುವಿನ ಮುಖ ನೋಡದ ಮಗು
ಸರ್ಜಾ ಮನೆತನದ ಮೊದಲ ಕನಸಿನ ಕೂಸಾದ ರಾಯನ್ ಹುಟ್ಟಿದಾಗ, ಎತ್ತಿ ಮುದ್ದಾಡಲು ಅಪ್ಪ ಇರಲೇ ಇಲ್ಲ. ಚಿರು ನಿಧನರಾಗಿದ್ದಾರೆ ಮೇಘನಾ ಮೂರು ತಿಂಗಳ ಗರ್ಭಿಯಾಗಿದ್ದರು.
ಸೋಶಿಯಲ್ ಮೀಡಿಯಾ
ಮೇಘನಾ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಹೆಚ್ಚಾಗಿ ಮಗನ ಜೊತೆಗಿನ ಸುಂದರ ಫೋಟೋಗಳನ್ನು ವಿಡಿಯೋಗಳನ್ನು ಶೇರ್ ಮಾಡುತ್ತಲಿರುತ್ತಾರೆ.
ಮೇಘನಾ ರಾಜ್ ಸಿನಿಮಾ
ಸಿನಿಮಾಗಳಲ್ಲಿ ಆಗೋಮ್ಮೆ ಈಗೊಮ್ಮೆ ನಟಿಸುತ್ತಿರುವ ಮೇಘನಾ ರಾಜ್, ಇದೀಗ ಹಲವು ವರ್ಷಗಳ ಬಳಿಕ ಮಲಯಾಳಂ ಚಿತ್ರರಂಗದ ಕಡೆಗೆ ಮುಖ ಮಾಡಿದ್ದು, ಒಟ್ಟಕೊಂಬನ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

