- Home
- Entertainment
- Sandalwood
- ನಾನು ಈವರೆಗೂ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ: ನಟ ವಿಜಯ್ ರಾಘವೇಂದ್ರ
ನಾನು ಈವರೆಗೂ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ: ನಟ ವಿಜಯ್ ರಾಘವೇಂದ್ರ
‘ಮಹಾನ್’ ಚಿತ್ರದ ‘ಒಡ ಹುಟ್ಟಿದವಳು’ ಹಾಡು ಬಿಡುಗಡೆಯಾಗಿದೆ. ನಟ ವಿಜಯ್ ರಾಘವೇಂದ್ರ ಹಾಗೂ ವರ್ಷ ಬೊಳ್ಳಮ್ಮ ನಟಿಸಿರುವ ಈ ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶನ ಮಾಡಿದ್ದಾರೆ. ಡಾ. ವಿ. ನಾಗೇಂದ್ರಪ್ರಸಾದ್ ಸಾಹಿತ್ಯ..

ಹಾಡು ಬಿಡುಗಡೆ
ಸ್ಯಾಂಡಲ್ವುಡ್ನ ನಟ ವಿಜಯ್ ರಾಘವೇಂದ್ರ ಹಾಗೂ ವರ್ಷ ಬೊಳ್ಳಮ್ಮ ಜೋಡಿ ನಟಿಸಿರುವ ‘ಮಹಾನ್’ ಚಿತ್ರದ ಹಾಡು ಬಿಡುಗಡೆಗೆ ಆಗಿದ್ದು, ಹಾಡಿಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ.
ಅಣ್ಣ, ತಂಗಿಯ ಬಾಂಧವ್ಯ
‘ಒಡ ಹುಟ್ಟಿದವಳು’ ಹೆಸರಿನ ಹಾಡಿಗೆ ಡಾ ವಿ. ನಾಗೇಂದ್ರಪ್ರಸಾದ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ, ಸಿದ್ ಶ್ರೀರಾಮ್ ಹಾಗೂ ಲಹರಿ ಹಾಡಿದ್ದಾರೆ. ಅಣ್ಣ, ತಂಗಿಯ ಬಾಂಧವ್ಯವನ್ನು ತೋರುವ ಈ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂಬುದು ಚಿತ್ರತಂಡದ ಮಾತು. ಪಿ.ಸಿ.ಶೇಖರ್ ನಿರ್ದೇಶಿಸಿ, ಪ್ರಕಾಶ್ ಬೂದೂರು ನಿರ್ಮಿಸಿದ್ದಾರೆ.
ಈವರೆಗೂ ಮಾಡಿರದ ಪಾತ್ರ
ವಿಜಯ್ ರಾಘವೇಂದ್ರ, ‘ನಾನು ಈವರೆಗೂ ಮಾಡಿರದ ಪಾತ್ರವನ್ನು ಮಾಡಿದ್ದೇನೆ. ಈಗ ಬಿಡುಗಡೆ ಆಗಿರುವ ಸೋದರ - ಸೋದರಿ ಬಾಂಧವ್ಯದ ಹಾಡು ನನ್ನ ಸೋದರಿ ವೀಣಾ ಅವರಿಗೆ ಇಷ್ಟವಾಗಿದೆ. ಈ ಚಿತ್ರದ ಮೂಲಕ ಶಿವರಾಜಕುಮಾರ್ ಜೊತೆಗೆ ಅಭಿನಯಿಸಿರುವುದು ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದರು.
ಹತ್ತು ವರ್ಷ ಬೇಕಾಯಿತು
ವರ್ಷ ಬೊಳ್ಳಮ್ಮ, ‘ನಾನು ಕನ್ನಡದವಳು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಹಾಗಾಗಿ ನಾನು ಕನ್ನಡ ಚಿತ್ರದಲ್ಲಿ ನಟಿಸಲು ಹತ್ತು ವರ್ಷ ಬೇಕಾಯಿತು. ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದೇನೆಂಬ ಖುಷಿ ಇದೆ’ ಎಂದರು. ನಿರ್ದೇಶಕ ಪಿ.ಸಿ.ಶೇಖರ್, ಶರತ್ ಲೋಹಿತಾಶ್ವ, ಮಿತ್ರ, ಛಾಯಾಗ್ರಾಹಕ ವೈದಿ, ಕಲಾ ನಿರ್ದೇಶಕ ನಟರಾಜ್ ಹಾಜರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.





