Rocking Star Yash: ಮಗದೊಂದು ಕಾರ್ ಖರೀದಿಸಿದ ಯಶ್, ಯಾವ್ದು ಕಾರು, ಏನ್ ಸಮಾಚಾರ?
ಶಾರುಕ್ ಖಾನ್, ದಳಪತಿ ವಿಜಯ್ ಮುಂತಾದ ಸ್ಟಾರ್‌ಗಳ ಬಳಿ ಇರುವಂಥಾ ಲೆಕ್ಸಸ್ ಎಲ್ಎಂ 350ಎಚ್ 4ಎಸ್ ಅಲ್ಟ್ರಾ ಲಕ್ಸುರಿ ನೀಲಿ ಬಣ್ಣದ ಕಾರನ್ನು ಯಶ್ ಖರೀದಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷವಾಗಿ ನಟ ಯಶ್ ರಾವಣನಾಗಿ ಮಿಂಚಲು ಸಜ್ಜಾಗಿದ್ದಾರೆ. ಈ ಮಧ್ಯೆ ನಟ ಯಶ್ ಮತ್ತೊಂದು ಹೊಸ ಕಾರನ್ನು ಖರೀದಿ ಮಾಡಿದ್ದಾರೆ.
ಹೌದು! ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ ಅವರ ಬಳಿ ಈಗಾಗಲೇ ಹಲವಾರು ಐಷಾರಾಮಿ ಕಾರುಗಳಿವೆ. ಈಗ ಆ ಕಾರುಗಳ ಜೊತೆಗೆ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ.
ಶಾರುಕ್ ಖಾನ್, ದಳಪತಿ ವಿಜಯ್ ಮುಂತಾದ ಸ್ಟಾರ್‌ಗಳ ಬಳಿ ಇರುವಂಥಾ ಲೆಕ್ಸಸ್ ಎಲ್ಎಂ 350ಎಚ್ 4ಎಸ್ ಅಲ್ಟ್ರಾ ಲಕ್ಸುರಿ ನೀಲಿ ಬಣ್ಣದ ಕಾರನ್ನು ಯಶ್ ಖರೀದಿಸಿದ್ದಾರೆ. 4 ಸೀಟಿನ ಈ ಕಾರಿನ ಎಕ್ಸ್‌ಶೋರೂಮ್ ಬೆಲೆ 2.63 ಕೋಟಿ ರು. ಆನ್ ರೋಡ್ ಬೆಲೆ ಸುಮಾರು 3.28 ಕೋಟಿ ರು. ಎನ್ನಲಾಗಿದೆ.
ವಿಶೇಷವೆಂದರೆ ಮಹಾರಾಷ್ಟ್ರದಲ್ಲಿ ಈ ಕಾರಿನ ನೊಂದಣಿಯನ್ನು ನಟ ಯಶ್ ಮಾಡಿಸಿದ್ದಾರೆ. ಇದೇ ಕಾರಿನಲ್ಲಿ ಮುಂಬೈ ಏರ್ಪೋರ್ಟ್ಗೆ ರಾಕಿಂಗ್ ಸ್ಟಾರ್ ಬಂದಿಳಿದ್ದಾರೆ.
ಯಶ್ ಹೊಸ ಕಾರ್ ಮೇಲೆ MH47C 8055 ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಈಗಾಗಲೇ ಯಶ್ ಬಳಿ ಇರೋ ಎಲ್ಲಾ ಕಾರ್ಗಳ ನಂಬರ್ ಪ್ಲೇಟ್ 8055 ಇದೇ ನಂಬರಿನಲ್ಲಿದೆ.
ಸದ್ಯ ಟಾಕ್ಸಿಕ್ ಮತ್ತು ರಾಮಾಯಣ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಮಧ್ಯೆದಲ್ಲೇ ರಾಕಿಂಗ್ ಸ್ಟಾರ್ ಯಶ್ ಯುಎಸ್ ಪ್ರವಾಸಕ್ಕೆ ಮುಂದಾಗಿದ್ದಾರೆ. ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಬಿಡುವಿಲ್ಲದ ಶೂಟಿಂಗ್ನಲ್ಲಿ ಯಶ್ ಭಾಗಿಯಾಗಿದ್ರು.
ಇದೀಗ ಕುಟುಂಬದ ಜೊತೆ ಕಾಲ ಕಳೆಯಲು ಯುಎಸ್ ಪ್ರವಾಸಕ್ಕೆ ಯಶ್ ಕುಟುಂಬ ಹೊರಟಿದ್ದು, ವಿಮಾನ ನಿಲ್ದಾಣದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.