ಕಿಚ್ಚ ಸುದೀಪ್ 'ಕೆ 47' ಚಿತ್ರಕ್ಕೆ ನಾಯಕಿಯಾದ ತಮಿಳು ನಟಿ: ಅಷ್ಟಕ್ಕೂ ಯಾರೀಕೆ?
ಕಿಚ್ಚ ಸುದೀಪ್ ಅವರ 47ನೇ ಚಿತ್ರದಲ್ಲಿ ತಮಿಳಿನ ದೀಪ್ಷಿಕಾ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಚೆನ್ನೈನಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರ 47ನೇ ಚಿತ್ರದಲ್ಲಿ ತಮಿಳಿನ ದೀಪ್ಷಿಕಾ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಚೆನ್ನೈನಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
‘ಮೈಕಲ್’, ‘ರವಿಕುಲ ರಘುರಾಮ’, ‘ಮಾರ್ಗನ್’ ಮುಂತಾದ ತಮಿಳು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ ನಟಿ ದೀಪ್ಷಿಕಾ. ಈ ಚಿತ್ರದಲ್ಲಿ ಬಳ್ಳಾರಿ ಮೂಲದ ತೆಲುಗು ನಟ ನವೀನ್ ಚಂದ್ರ ಕೂಡ ನಟಿಸುತ್ತಿದ್ದಾರೆ.
ನಾಯಕ ಹಾಗೂ ಖಳನಾಯಕನ ಪಾತ್ರಗಳಲ್ಲಿ ತಮ್ಮದೇ ಆದ ಛಾಫು ಮೂಡಿಸಿರುವ ನವೀನ್ ಚಂದ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ ಕಾರ್ತಿಕೇಯ ನಿರ್ದೇಶನದ ಈ ಚಿತ್ರ ತಮಿಳಿನಲ್ಲೂ ಮೂಡಿಬರಲಿದೆ.
ಕೆ 47 ಸಿನಿಮಾದಲ್ಲಿ ನನ್ನದು ಮ್ಯಾಕ್ಸ್ ರೀತಿಯ ಸೀರಿಯಸ್ ಪಾತ್ರ ಅಲ್ಲ, ಮುತ್ತತ್ತಿ ಸತ್ಯರಾಜು ಥರದ ಹಿಲೇರಿಯಸ್ ಪಾತ್ರ. ಈಗ ನನಗೆ ಕ್ಯಾಲೆಂಡರ್ ನೋಡಿದರೆ ಭಯ ಆಗುತ್ತೆ. ಏಕೆಂದರೆ ಈ ವರ್ಷ ಡಿ.25ಕ್ಕೆ ಈ ಹೊಸ ಸಿನಿಮಾ ರಿಲೀಸ್ ಮಾಡಬೇಕು ಅಂದುಕೊಂಡಿದ್ದೇವೆ.
ಬಿಗ್‌ಬಾಸ್, ಬಿಲ್ಲ ರಂಗ ಬಾಷ ಶೂಟಿಂಗ್ ನಡುವೆ ಈ ಸಿನಿಮಾ ಬರಬೇಕು. ಅಂದರೆ ನನ್ನ ಪಾಲಿಗೆ ಮುಂದಿನ ದಿನಗಳಲ್ಲಿ ಶನಿವಾರ, ಭಾನುವಾರಗಳೇ ಇರೋದಿಲ್ಲ.. ಹೀಗೆ ಈ ವರ್ಷದ ತನ್ನ ಬಿಡುವಿಲ್ಲದ ಶೆಡ್ಯೂಲ್ ಬಗ್ಗೆ ಹೇಳಿದ್ದು ಕಿಚ್ಚ ಸುದೀಪ್.