ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾದ ಕಿಚ್ಚ ಸುದೀಪ್
ಅಭಿಮಾನಿಗೆ ಡಬಲ್ ಪ್ರೀತಿ ಕೊಟ್ಟ ಕಿಚ್ಚ ಸುದೀಪ್. ಆಟೋಗ್ರಾಫ್ ಮತ್ತು ಗಿಫ್ಟ್ ಕೊಟ್ಟು ಯೋಗ ಕ್ಷೇಮ ವಿಚಾರಿಸಿದ ನಟ

ಸಾಕ್ಷಿ ಮೂರನೇ ಕ್ಲಾಸ್ ಓದುತ್ತಿರುವ ಒಂಭತ್ತು ವರ್ಷದ ಪುಟ್ಟ ಹುಡುಗಿ. ಬೋನ್ ಕ್ಯಾನ್ಸರ್‌ಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಅವಳಿಗೆ ಸುದೀಪ್ ಅಂದರೆ ಬಹಳ ಇಷ್ಟ. ಸುದೀಪ್ ನಟನೆಯ ‘ರನ್ನ’ ಸಿನಿಮಾದ ‘ತಿತಲಿ’ ಹಾಡು ಈಕೆಗೆ ಅಚ್ಚುಮೆಚ್ಚು. ಸದ್ಯ ಸಾಕ್ಷಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಆದರೂ ಆಕೆಗೆ ತನ್ನ ನೆಚ್ಚಿನ ನಟ ಸುದೀಪ್ ಅವರನ್ನು ಕಣ್ಣಾರೆ ನೋಡುವ ಆಸೆ. ಈ ಪುಟ್ಟ ಬಾಲೆಯ ಕನವರಿಕೆ ಸುದೀಪ್‌ಗೂ ತಲುಪಿದೆ.
ತನ್ನ ಬ್ಯುಸಿ ಶೆಡ್ಯೂಲ್‌ನ ನಡುವೆ ಬಿಡುವು ಮಾಡಿಕೊಂಡು ಅವರು ಈ ಪುಟಾಣಿ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ.
ಆಕೆಯ ಜೊತೆಗೆ ಸಮಯ ಕಳೆದಿದ್ದಾರೆ. ಆಟೋಗ್ರಾಫ್ ನೀಡಿದ್ದಾರೆ.
ಆಕೆಯ ಚಿಕಿತ್ಸೆಗೂ ಸಹಾಯಹಸ್ತ ಚಾಚಿದ್ದಾರೆ. ತನ್ನ ನೆಚ್ಚಿನ ನಟನ ಭೇಟಿ ಮಾಡಿದ ಸಾಕ್ಷಿ ಮುಖದಲ್ಲಿ ನೋವಲ್ಲೂ ನಗು ಮೂಡಿದೆ. ಸಾಕ್ಷಿ ಅವರ ತಂದೆ ಮಹಿಂದರ್ ಬಡಗಿ ಕೆಲಸ ಮಾಡುತ್ತಾರೆ. ತಾಯಿ ಸುರೇಖಾ ರಾಣಿ ಗೃಹಿಣಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.